Belagavi News In Kannada | News Belgaum

6 ಕೋಟಿ ರೂ. ಕದ್ದಿಯಲು ಸಾಥ್‌ ನೀಡಿದ ಬ್ಯಾಂಕ್‌ ಸಿಬ್ಬಂದಿ ಆರೋಪಿಗಳು ಅಂದರ್..!

ಬೆಳಗಾವಿ: ಮುರಗೋಡ ಡಿಸಿಸಿ ಬ್ಯಾಂಕ್ ನಲ್ಲಿ 6 ಕೋಟಿ ರೂ. ಮೌಲ್ಯದ ನಗದು ಮತ್ತು ಚಿನ್ನಾಭರಣ ಕಳ್ಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.

 

ರಾಮದುರ್ಗ ತಾಲೂಕಿನ ತೋರಣಗಟ್ಟಿಯ ಬಸವರಾಜ ಸಿದ್ಧಿಂಗಪ್ಪ ಹುಣಶೀಕಟ್ಟಿ (30) ( ಕ್ಲರ್ಕ ಡಿ.ಸಿ.ಸಿ.ಬ್ಯಾಂಕ ಮುರಗೋಡ)  ಸಾಥ್‌ ನೀಡಿರುವ ಸಿಬ್ಬಂದಿ,  ಸಂತೋಷ ಕಾಳಪ್ಪ ಕಂಬಾರ (31), ಗಿರೀಶ  ಯಮನಪ್ಪ ಲಕ್ಷ್ಮಣ (26) ಬಂಧಿತರು.  ಆರೋಪಿಗಳಿಂದ   ನಗದು ಮತ್ತು ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು  ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ತಿಳಿಸಿದರು.

 

ಮಾ. 6 ರಂದು ಜಿಲ್ಲೆಯ‌ ಸವದತ್ತಿ ತಾಲೂಕಿನ ಮುರಗೋಡದ ಡಿಸಿಸಿ ಬ್ಯಾಂಕ್ ನ ಲಾಕರ್ ನಲ್ಲಿದ್ದ ಸುಮಾರು 6 ಕೋಟಿಯ ನಗದು ಹಣ ಮತ್ತು ಚಿನ್ನಾಭರಣವನ್ನು ನಕಲಿ ಬೀಗದ ಕೈ ಬಳಸಿ ದೋಚಲಾಗಿತ್ತು. ಈ ಪ್ರಕರಣವನ್ನು ಪತ್ತೆ ಮಾಡಲು ವಿಶೇಷ ಪೊಲೀಸ ತಂಡವನ್ನು ರಚಿಸಲಾಗಿತ್ತು ಒಂದೇ ವಾರದಲ್ಲಿ  ಆರೋಪಿಗಳನ್ನು ಬಂಧಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.