ಮಹಿಳಾ ದಿನಾಚರಣೆ ಕಾರ್ಯಕ್ರಮ | ರತ್ನಪ್ರಭ ಬೆಲ್ಲದ ಕರೆ ಮಹಿಳೆಯರು ಕಾಯಕ ನಿಷ್ಠೆಯಿಂದ ಗುರಿ ಮುಟ್ಟಲಿ

ಬೆಳಗಾವಿ 13: ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡದೇ ತಮ್ಮ ಕಾಯಕ ನಿಷ್ಠೆಯಿಂದಲೇ ಗುರಿ ಮುಟ್ಟಲು ಸಾಧ್ಯ ಎಂದು ಅ.ಭಾ.ವೀರೆಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷೆ ರತ್ನಪ್ರಭ ಬೆಲ್ಲದ ಅಭಿಪ್ರಾಯಪಟ್ಟರು.
ಶ್ರೀ ಸಾಯಿ ಶ್ರದ್ಧಾ ಮಹಿಳಾ ಕಲ್ಯಾಣ ಸಂಸ್ಥೆ ವತಿಯಿಂದ ರವಿವಾರ ಕನ್ನಡ ಸಾಹಿತ್ಯ ಭವನದಲ್ಲಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೀಪ ತಾನು ಉರಿದು ಇತರರಿಗೆ ಬೆಳಕು ನೀಡುತ್ತದೆ. ಆದರೆ ಅದು ತನ್ನ ಕಾರ್ಯದ ಬಗ್ಗೆ ಹೇಳಿಕೊಳ್ಳುವದಿಲ್ಲ ಅದೇ ರೀತಿ ಮಹಿಳೆಯರು ತಮ್ಮ ಪ್ರಾಮಾಣಿಕ ಕಾಯಕ ನಿಷ್ಠೆಯಿಂದ ಅಭಿವೃದ್ಧಿ ಹೊಂದಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆರ್ಸಿಯುಬಿಯ ಡಾ. ಅಶೋಕ ಡಿಸೋಜಾ, ಪಿಎಸ್ಐ ರಂಜಿತ ಬಿಲ್ಲಾ, ನ್ಯಾಯವಾದಿ ವಿಜಯಲಕ್ಷ್ಮೀ ಮನ್ನಿಕೇರಿ, ಮುಖ್ಯಾಧ್ಯಾಪಕಿ ಎಂ.ಎಸ್. ಕುಡುವಕ್ಕಲಗಿ, ಡಾ. ದೇವತಾ ಗಸ್ತಿ, ಮೂಡಲಗಿಯ ಉಪನ್ಯಾಸಕಿ ರಾಧಾ ಎಂ, ಎನ್ ಇವರು ಮಾತನಾಡಿದರು.
ಮಹಿಳಾ ದಿನಾಚರಣೆ ನಿಮಿತ್ತ ವಿವಿಧ ಕ್ಷೇತ್ರಗಳ ಸಾಧನೆಗೈದ ಪಿಎಸ್ಐ ಕೆ, ಎಸ್, ನಾಯಿಕ, ಜ್ಯೋತಿ ಕೋರಿ, ಎಂಎಸ್, ಕುಡುವಕ್ಕಲಗಿ, ಆಶಾ ಕಾರ್ಯಕರ್ತೆ ಸೀತಾ ಮೊದಗೆ, ಗಂಗವ್ವ ಹುಲ್ಲ್ಲೆನ್ನವರ, ಮಲ್ಲವ್ವ, ಸನದಿ, ಛಾಯಾ ಸುಂಕದ, ಭವ್ಯಾ ಚನ್ನಬಸವಪ್ಪಗೋಳ ಸೇರಿದಂತೆ ಇತರರಿಗೆ ಮದರ ತೇರೆಸಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉತ್ತಮ ಸಾಮಾಜಿಕ ಕಾರ್ಯಗಳಿಗಾಗಿ ಡಾ. ಅಶೋಕ ಡಿಸೋಜಾ, ಡಾ. ದೇವತಾ ಗಸ್ತಿ, ಗಂಗಾಧರ ಪಾಟೀಲ, ಗೋಪಾಲ ಖಟಾವಕರ, ಕಸ್ತೂರಿ ಬಂಗೇಶ, ರಾಧಾ ಎಂ.ಎನ್ ಸೇರಿದಂತೆ ಇತರರಿಗೆ ಸತ್ಕರಿಸಿ ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷೆ ಸವಿತಾ, ಎಸ್ ಹೆಬ್ಬಾರ ಅವರು ಮಾತನಾಡಿ ಸಂಸ್ಥೆಯ ಸಾಮಾಜಿಕ ಕಾರ್ಯ ವಿವರಿಸಿ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದ್ದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಚಾಣಕ್ಯ ಪೌಂಡೇಶನ್ನಿನ ರೂಪಾ ಮಾತನಾಡಿದರು. ವಿದ್ಯಾ ಹೆಬ್ಬಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಕಾರ್ಯಕ್ರಮದ ಯಶಸ್ವಿಗೆ ಕಾವೇರಿ ಕಿತ್ತೂರ, ಪ್ರಮೋದ ಕೋಲಕಾರ ಸಹಯೋಗ ನೀಡಿದ್ದರು. ಮಂಜುಳಾ ನಿರೂಪಿಸಿದರು. ಅಕ್ಬರ್ ವಂದಿಸಿದರು.