Belagavi News In Kannada | News Belgaum

ಲಕ್ಷ್ಮಣ ಸವದಿ ಸಹೋದರನ ಕಾರು ಚಾಲಕನ ಕೊಲೆ

ಬೆಳಗಾವಿ: ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರ ಸಹೋದರನ ಕಾರು ಚಾಲಕನನ್ನು ದುಷ್ಕರ್ಮಿಗಳು ಭೀಕರ ಕೊಲೆಗೈದಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ನಡೆದಿದೆ.

ಲಕ್ಷ್ಮಣ ಸವದಿ ಅವರ ಸಹೋದರ ಪರಪ್ಪ ಸವದಿ ಅವರ ಕಾರು ಚಾಲಕನಾಗಿದ್ದ 25 ವರ್ಷದ ಸಿದ್ಧಾರೂಢ ಶಿರಗುಪ್ಪ ಹತ್ಯೆಯಾದ ವ್ಯಕ್ತಿ. ದರೂರು ಗ್ರಾಮದ ಸಿದ್ಧಾರೂಢ ಶಿರಗುಪ್ಪನನ್ನು ಅಥಣಿ ಬಳಿ ಕೈ-ಕಾಲು ಕಟ್ಟಿ ನೇಣು ಬಿಗಿದು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಕಳೆದ ರಾತ್ರಿ ಸಿದ್ಧಾರೂಢ, ಪರಪ್ಪ ಸವದಿ ಜತೆ ಉಗಾರ ಗ್ರಾಮಕ್ಕೆ ತೆರಳಿದ್ದ. ತಡ ರಾತ್ರಿ 11 ಗಂಟೆ ಸುಮಾರಿಗೆ ಅಥಣಿಯಿಂದ ಮನೆಗೆ ತೆರಳುತ್ತಿದ್ದ ವೇಳೆ ಕಾರು ಚಾಲಕನ್ನು ಹಿಡಿದು ದುಷ್ಕರ್ಮಿಗಳು ಭೀಕರ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.  ಅಥಣಿ ಪೊಲೀಸ್‌ ಠಾಣಾ ವ್ಯಾಪ್ತಿ ಈ ಘಟನೆ ನಡೆದಿದೆ.