Belagavi News In Kannada | News Belgaum

ಶಿಕ್ಷಣ-ರಾಜಕೀಯ ರಂಗದಲ್ಲಿ ರೆಡ್ಡಿ ಜನಾಂಗ ಮುಖ್ಯವಾಹಿನಿಗೆ ಬರುವಂತಾಗಲಿ-ವೇಮನಾನಂದ ಮಹಾಸ್ವಾಮಿಗಳು

 

ಬೆಳಗಾವಿ:  ಮಾರ್ಚ್-13:   “ಸಮುದಾಯದ ಒಳಿತಿಗಾಗಿ, ಒಗ್ಗಟ್ಟಿಗಾಗಿ ಇಂಥ ಸಂಘಗಳು ಬಹುಮುಖ್ಯ ಪಾತ್ರ ವಹಿಸುತ್ತವೆ” ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಕರೆ ನೀಡಿದರು.

ನಗರದಲ್ಲಿ ಕರ್ನಾಟಕ ರಾಜ್ಯ ರೆಡ್ಡಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು, ಬೆಳಗಾವಿ ಜಿಲ್ಲಾ ಘಟಕ
ಹಾಗೂ ಬೆಳಗಾವಿ ಜಿಲ್ಲಾ ವೇಮನ ಸರಕಾರಿ ಅರೆ ಸರಕಾರಿ ನೌಕರರ ಸಹಕಾರ ಸಂಘದ ಸಹಯೋಗದಲ್ಲಿ ರಾಜ್ಯ ಮಟ್ಟದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, “ಕರ್ನಾಟಕದಲ್ಲಿ ಕನ್ನಡಿಗರಾಗಿ ಸಹೋದರತೆಯಿಂದ ಸಹಬಾಳ್ವೆ ಮಾಡುತ್ತಿರುವ ರೆಡ್ಡಿ ಸಮುದಾಯ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಅಂದಾಗ ಮಾತ್ರ ಮುಂದಿನ ಪೀಳಿಗೆಗೆ ಭವಿಷ್ಯವಿದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಮಾತನಾಡಿ “ರೆಡ್ಡಿ ಜನಾಂಗಕ್ಕೆ ಸಹಾಯ ಸಹಕಾರ ಕೊಡುವದರೊಂದಿಗೆ ಜಾಗ ಮತ್ತು ಭವನದ ಸುಧಾರಣೆ ಮಾಡುವ ಕುರಿತು ಭರವಸೆ ನೀಡಿದರು. ಮಾಜಿ ಶಾಸಕ ಎನ್.ಎಚ್. ಕೋನರೆಡ್ಡಿ ಮಾತನಾಡಿ,” ನಮ್ಮ ಸಮುದಾಯ ಎಲ್ಲ ಸಮುದಾಯಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು ಸಹಬಾಳ್ವೆಗೆ ಹೆಸರಾಗಿದೆ”ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಆರ್.ವಿ. ಪಾಟೀಲ ಅವರು ವೆಬ್ ಸೈಟ್ ಉದ್ಘಾಟನೆ ಮಾಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ
ಎರೆಹೊಸಳ್ಳಿಯ ರೆಡ್ಡಿ ಗುರುಪೀಠದ ವೇಮನಾನಂದ ಮಹಾಸ್ವಾಮಿಗಳು, ” ಕನ್ನಡದ ಶರಣ ಪರಂಪರೆಯಲ್ಲಿ ಹೇಮರೆಡ್ಡಿ ಮಲ್ಲಮ್ಮಳು ಪ್ರಮುಖ ಸ್ಥಾನ ಪಡೆದಿದ್ದಾಳೆ. ಹಾಗೆಯೇ ಆಧ್ಯಾತ್ಮದ ಉತ್ತುಂಗಕ್ಕೆ ಏರಿದ ವೇಮನರು ಕಾಯಕ ನಿμÉ್ಠ, ಸತ್ಸಂಗದ ಮಹತ್ವ ಜನಸಾಮಾನ್ಯರಿಗೆ ತಿಳಿ ಹೇಳಿದ್ದಾರೆ. ಇಂದು ರೆಡ್ಡಿ ಸಮುದಾಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯ ಹಾದಿ ತುಳಿಯುತ್ತಿದ್ದಾರೆ. ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟದ ಸ್ಥಾನ ಸಿಕ್ಕಿಲ್ಲ. ಆ ನಿಟ್ಟಿನಲ್ಲಿ ಸಮುದಾಯದ ಮುಖಂಡರು ಹೆಚ್ಚಿನ ಆಸಕ್ತಿ ತೋರಿ ಮುಖ್ಯವಾಹಿನಿಗೆ ಬರುವಂತಾಗಲಿ” ಎಂದು ಹೇಳಿದರು.

ರಾಜ್ಯ ರೆಡ್ಡಿ ಕ್ಷೇಮಾಬಿವೃದ್ಧಿ ಸಂಘದ ಅಧ್ಯಕ್ಷ ಎಸ್.ಬಿ. ಮಾಚಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಡಾ. ಗಿರೀಶ ಸೋನವಾಲ್ಕರ, ನಗರಾಭಿವೃದ್ಧಿ ಉಪ ಕಾರ್ಯದರ್ಶಿ ಜಗದೀಶ್‍ರೆಡ್ಡಿ ಕೆ.ಎಸ್., ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಬೆಂಗಳೂರಿನ ಬಸವರಾಜ್ ಆರ್ ಸೋಮಣ್ಣವರ, ಸಂಘದ ರಾಜ್ಯ ಸಹ ಕಾರ್ಯದರ್ಶಿ ಶ್ರೀಕಾಂತ ರಡ್ಡಿ ಆರ್.ಪಿ.ಒಂಟಗೋಡಿ, ಹೇಮರಡ್ಡಿ ಪಿ ಗಣಿ, ಅಶೋಕ ಖೋತ, ಸೋಮರೆಡ್ಡಿ ಹೊಂಗಲ, ವಿಠ್ಠಲ ಬೂದಿ,

ಶಿವಾನಂದ ಅವರಾದಿ, ಶಿವಾನಂದ ಯರಗುದ್ರಿ, ಮಂಜುನಾಥ ರಡ್ಡಿ, ಸಂಗಣ್ಣಾ ಸೊಣ್ಣದ, ಎನ್.ಬಿ.ಪಾಟೀಲ, ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾದ ಗೀತಾ ಕೌಲಗಿ, ಎಸಿಪಿ ನಾರಾಯಣ ಭರಮಣಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿಯಾದ ಉಮಾ ಸಾಲಿಗೌಡರ, ಜಿಲ್ಲಾ ಖಜಾನೆ ಅಧಿಕಾರಿ ಎಸ್.ವಿ ಹಳ್ಯಾಳ, ಬೆಳಗಾವಿ ಡಿಡಿಪಿಐ ಬಸವರಾಜ ನಲವತವಾಡ, ಹೆಸ್ಕಾಂ ಎಇಇ ರವಿ ದೇವರಡ್ಡಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ರವೀಂದ್ರ ಹಕಾಟೆ ಹಾಗೂ ಇಪ್ಪತ್ತು ಜಿಲ್ಲೆಗಳ ರಾಜ್ಯ ಪದಾಧಿಕಾರಿಗಳು ಭಾಗವಹಿಸಿದ್ದರು.

ಶ್ರೀಕಾಂತ ಯರಡ್ಡಿ ಸ್ವಾಗತಿಸಿದರು.ಆರ್.ಎಲ್. ಮಿರ್ಜಿ ನಿರೂಪಿಸಿದರು. ಅಶೋಕ ಅಣ್ಣಿಗೇರಿ ವಂದಿಸಿದರು