Belagavi News In Kannada | News Belgaum

ಉನ್ನತ ಮಟ್ಟದ ಆರೋಗ್ಯ ಸೇವೆ ನೀಡುತ್ತಿರುವ ಡಾ.ಎ.ಆರ್. ಬೆಳಗಲಿ ಅವರ ಕುಟುಂಬದ ಕಾರ್ಯ ಶ್ಲಾಘನೀಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ

ತೇರದಾಳ: ಗ್ರಾಮೀಣ ಭಾಗದಲ್ಲಿ ಉನ್ನತ ಮಟ್ಟದ ಆರೋಗ್ಯ ಸೇವೆ ನೀಡುತ್ತಿರುವ ಡಾ.ಎ.ಆರ್. ಬೆಳಗಲಿ ಅವರ ಕುಟುಂಬದ ಕಾರ್ಯ ಶ್ಲಾಘನೀಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

ತೇರದಾಳ ಮತಕ್ಷೇತ್ರದ ಮಹಾಲಿಂಗಪುರ ನಗರದಲ್ಲಿ ಹಮ್ಮಿಕೊಂಡಿದ್ದ ಡಾ. ಬೆಳಗಲಿ ಕಿಡ್ನಿ ಹಾಗೂ ಮಲ್ಟಿಸ್ಪೆಶಿಯಾಲಿಟಿ ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. 

ಡಾ. ಬಿ.ಆರ್. ಬೆಳಗಲಿ ಆಸ್ಪತ್ರೆಯು ಮೂರು ದಶಕಗಳ ಕಾಲ ಸೇವೆ ಸಲ್ಲಿಸುತ್ತಿದ್ದು, ಈಗ ಡಾ. ಹರೀಶ್ ಕೂಡ ಮೂತ್ರಪಿಂಡ ತಜ್ಞರಾಗಿ ವೈದ್ಯ ಸೇವೆ ಆರಂಭಿಸುತ್ತಿದ್ದು,  ಅವರ ಸೇವೆ  ಗ್ರಾಮೀಣ ಭಾಗದ ಜನರಿಗೆ ಸಿಗಲಿ ಎಂದು ಆಶಿಸಿದರು.

ಇಂದು ಪರಿಸರ ನಾಶದಿಂದ ಶುದ್ಧ ಗಾಳಿ, ನೀರು, ಆಹಾರ ಸಿಗುತ್ತಿಲ್ಲ. ಇದರಿಂದ ಮನುಷ್ಯನು ತನ್ನ ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪರಿಸರ ರಕ್ಷಿಸುವ ಹೊಣೆ ನಮ್ಮದಾಗಬೇಕೆಂದು ತಿಳಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಕೊರತೆ ಇದೆ. ಶುದ್ಧ ಆಹಾರವೂ ಸಿಗುತ್ತಿಲ್ಲ, ಪ್ರಸ್ತುತ ದಿನಗಳಲ್ಲಿ ಆಹಾರದಲ್ಲಿ ಕಲಬೆರಿಕೆ ಮಾಡುತ್ತಿದ್ದು, ಈ ಎಲ್ಲ ಸಮಸ್ಯೆಗಳಿಗೆ ಮುಕ್ತಿ ದೊರೆಯಬೇಕಾದರೆ ದೊಡ್ಡ ಆಂದೋಲನ ನಡೆಯಬೇಕೆಂದು ಕರೆ ನೀಡಿದರು.

ಕೆಪಿಸಿಸಿ ಕರ್ನಾಟಕ ರಾಜ್ಯ ಕಿಸಾನ್ ಘಟಕದ ಸಂಚಾಲಕರೂ ಆದ ಖ್ಯಾತ ನೇತ್ರ ತಜ್ಞ ಡಾ. ಪದ್ಮಜೀತ ನಾಡಗೌಡ ಪಾಟೀಲ ಮಾತನಾಡಿದರು. 

ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಪರಮಪೂಜ್ಯ ಶ್ರೀ ರೇಣುಕಾ ಸದಾಶಿವ ಶಿವಾಚಾರ್ಯ ಮಹಾಸ್ವಾಮಿಗಳು,
ಪರಮಪೂಜ್ಯ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ಮಾಜಿ ಸಚಿವೆ ಉಮಾಶ್ರೀ, ಸತೀಶ್‌ ಬಂಡಿ, ಜಯಶ್ರೀ ಎಮ್ಮಿ ಸೇರಿದಂತೆ ಹಲವು ಗಣ್ಯರು ಇದ್ದರು.