Belagavi News In Kannada | News Belgaum

 ಮಹಿಳೆಯರ ಸಮಾನತೆಗಾಗಿ ಹೋರಾಡಿದ ಬುದ್ಧ, ಬಸವ, ಅಂಬೇಡ್ಕರ್ ಮತ್ತು ಸಾವಿತ್ರಿಬಾಯಿ ಫುಲೆ ಅವರ ಸಿದ್ಧಾಂತ ಮತ್ತು ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಕೊಳ್ಳಿ

ಘಟಪ್ರಭಾ:  ಮಹಿಳೆಯರ ಸಮಾನತೆಗಾಗಿ ಹೋರಾಡಿದ ಬುದ್ಧ, ಬಸವ, ಅಂಬೇಡ್ಕರ್ ಮತ್ತು ಸಾವಿತ್ರಿಬಾಯಿ ಫುಲೆ ಅವರ ಸಿದ್ಧಾಂತ ಮತ್ತು ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಕೊಳ್ಳಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

 

ಘಟಪ್ರಭ ಸೇವಾದಳದಲ್ಲಿ ಸತೀಶ್‌ ಜಾರಕಿಹೊಳಿ ಫೌಂಡೇಷನ್ ವತಿಯಿಂದ ನಡೆಯುತ್ತಿರುವ ಸೈನಿಕ ಮತ್ತು ಪೊಲೀಸ್ ಪೇದೆ ಆಕಾಂಕ್ಷಿಗಳಿಗೆ ಉಚಿತ ತರಬೇತಿಯ ಮಹಿಳಾ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮೂಢನಂಬಿಕೆಗಳ ಸುಳಿವಿನಲ್ಲಿ ಸಿಲುಕಿ ನರಳುತ್ತಿದ್ದ  ಮಹಿಳೆಯರ ಹಕ್ಕು ಮತ್ತು  ಸಮಾನತೆಗಾಗಿ ಬಸವಣ್ಣನವರು 12 ನೇ ಶತಮಾನದಲ್ಲಿ ದೊಡ್ಡ ಕ್ರಾಂತಿಯನ್ನು ನಡೆಸಿದ್ದರು. ಭಾರತದ ಪ್ರಥಮ ಶಿಕ್ಷಕಿ ಸಾವಿತ್ರಿ ಬಾಯಿ ಫುಲೆ ಅವರ ಹೋರಾಟದಿಂದ  ಶಿಕ್ಷಣ ವಂಚಿತರಾಗಿದ್ದ ಮಹಿಳೆಯರು ಶಾಲೆಗಳ ಮೆಟ್ಟಿಲೇರಿದ್ದರು ಎಂದು ತಿಳಿಸಿದರು.

 

ತದನಂತರ ಅಂಬೇಡ್ಕರ್ ಅವರು ಮಹಿಳೆಯರ ಹಕ್ಕುಗಳನ್ನು ಸಂವಿಧಾನ ಮೂಲಕ ಜಾರಿಗೊಳಿಸಿ ಅವರಿಗೆ ದೇಶದಲ್ಲಿ ಸಮಾನತೆಯ ಹಕ್ಕುಗಳನ್ನು ಕೊಡಿಸಿದರು. ಆದರೆ ಭಾರತದಲ್ಲಿ ಮೂಢನಂಬಿಕೆಗಳಿಂದಲೇ ಮಹಿಳೆಯರು ಇನ್ನೂ ಸಂಪೂರ್ಣವಾಗಿ ಮುನ್ನೆಲೆಗೆ ಬರುತ್ತಿಲ್ಲ ಎಂದು ಶಾಸಕ ಸತೀಶ್‌ ಜಾರಕಿಹೊಳಿ ಅವರು ವಿಷಾದ ವ್ಯಕ್ತಪಡಿಸಿದರು.

 

ಮಹಿಳೆಯರ ಸಮಾನತೆಗಾಗಿ ಹೋರಾಡಿದ ಬುದ್ಧ, ಬಸವ ಅಂಬೇಡ್ಕರ್, ಸಾವಿತ್ರಿಬಾಯಿ ಫುಲೆ ಅಂತಹ ಮಹಾನ ಪುರುಷರ ಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಸಿಕೊಂಡು ಸಮಾನತೆಯಿಂದ ಜೀವನ ಸಾಗಿಸಬೇಕು ಎಂದು ಕರೆ ನೀಡಿದರು.

 

ಈ ಸಂದರ್ಭದಲ್ಲಿ ಮಾನವ ಬಂಧತ್ವ ವೇದಿಕೆ ರಾಜ್ಯ ಸಂಚಾಲಕ, ತರಬೇತಿ ಉಸ್ತುವಾರಿ ರವೀಂದ್ರ ನಾಯ್ಕರ್, ದೈಹಿಕ ತರಬೇತುದಾರ ರೇಣುಕಾ ವನಕುರಿ, ಮಾಜಿ ದಲಿತ ಸೇನಾ ಅಧ್ಯಕ್ಷ ಶಿವುಕುಮಾರ, ಶಿವು ಪಾಟೀಲ, ಪಾಂಡು ಮನ್ನಿಕೇರಿ, ಆಂಜಿನಪ್ಪ ಲೋಕಿಕೆರೆ, ಉಷಾ ನಾಯಿಕ ಸೇರಿದಂತೆ ಇತರರು ಇದ್ದರು.