Belagavi News In Kannada | News Belgaum

ವಂಟಮೂರಿ ಕಾಲೋನಿಯಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ರೂ. 15.00 ಲಕ್ಷಗಳ ವೈಧ್ಯಕೀಯ ಉಪಕರಣಗಳ ಹಸ್ತಾಂತರ

ಬೆಳಗಾವಿ :   ಶನಿವಾರದಂದು ಶ್ರೀ ವಿರೇಶ ಕಿವಡಸನ್ನವರ ರವರು ಸಮರ್ಥನಮ ಟ್ರಸ್ಟ್ ವತಿಯಿಂದ ಹಾಗೂ ಹೆಚ್.ಎಸ್.ಬಿ.ಸಿ ಇಲೆಕ್ಟ್ರಾನಿಕ್ಸ್ ಡಾಟಾ ಪ್ರೋಸೆಸಿಂಗ್ ಇಂಡಿಯಾ ಪ್ರೈ.ಲಿ. ಇವರ ಸಹಕಾರದೊಂದಿಗೆ ಬೆಳಗಾವಿ ಉತ್ತರ ಮತಕ್ಷೇತ್ರದ ವಂಟಮೂರಿ ಕಾಲೋನಿಯಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಅಂದಾಜು ರೂ. 15.00 ಲಕ್ಷಗಳ ವೈಧ್ಯಕೀಯ ಉಪಕರಣಗಳನ್ನು ಶಾಸಕ ಅನಿಲ ಬೆನಕೆರವರ ನೇತೃತ್ವದಲ್ಲಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಉದ್ಯಮಿಗಳಾದ ವಿರೇಶ ಕಿವಡಸನ್ನವರವರು ಅನೇಕ ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಾ ಸಮಾಜಕ್ಕೆ ತಮ್ಮದೇ ಆದ ನಿಸ್ವಾರ್ಥ ಸೇವೆಯನ್ನು ಮಾಡುತ್ತಾ ಬಂದಿರುತ್ತಾರೆ. ಕೋರೋನಾ ಮಹಾಮಾರಿಯಲ್ಲಿ ಬೆಳಗಾವಿ ಜಿಲ್ಲೆಯಾದ್ಯಂತ 15.00 ಕೋಟಿಗಳಷ್ಟು ದೇಣಿಗೆ ಹಾಗೂ 6 ಲಕ್ಷ ದಿವ್ಯಾಂಗರಿಗೆ ಅವರ ಸಂಪೂರ್ಣ ಏಳ್ಗೆಗೆ ಶ್ರಮಿಸಿದ್ದಾರೆ ಎಂದರು.

ಅದರಂತೆಯೆ ಇಂದು ವಂಟಮೂರಿ ಕಾಲೋನಿಯಲ್ಲಿನ ಹೊಸದಾಗಿ ನಿರ್ಮಾಣವಾಗಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ರೂ. 15.00 ಲಕ್ಷಗಳಲ್ಲಿ 2 ಮಲ್ಟಿ ಪ್ಯಾರಾ ಮಾನಿಟರ್, 1 ಅಲ್ಟ್ರಾ ಸೌಂಡ್ ಮಷಿನ ಇಸಿಜಿ ವಿತ್ ಇಕೋ, 1 ವೆಂಟಿಲೇಟರ್, 2 ಫಲ್ಸ್ ಆಕ್ಸಿಮೀಟರ್, 2 ಆಯ್.ಸಿ.ಯು ಬೆಡ್, 1 ಹೆಚ.ಎಫ.ಎನ್.ಸಿ, 1 ಬಿ.ಆಯ್.ಪಿ.ಎ.ಪಿ, 2000 ಎನ್ 95 ಮಾಸ್ಕ್, 1000 3-ಪ್ಲೈ ಮಾಸ್ಕ್, 50 ಲೀಟರ್ ಸ್ಯಾನಿಟೈಜರ್, 10 ಸ್ಯಾನಿಟೈಜರ ಸ್ಟ್ಯಾಂಡ್, 50 ಲೀಟರ್ ಹಾಂಡ್ ವಾಶ್, 50 ಲೀಟರ್ ಜಂತುಹುಳು ನಿವಾರಕ

 

ಔಷಧಿ, 25 ಪ್ಯಾಕೇಟ್ ಗ್ಲೌಸಗಳನ್ನು ಆಸ್ಪತ್ರೆಗೆ ಹಸ್ತಾಂತರಿಸಲಾಗಿದೆ ಎಂದರು. ಉಪಕರಣಗಳನ್ನು ಇಲ್ಲಿನ ಸಿಬ್ಬಂದಿಗಳು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕೆಂದು ತಿಳಿಸಿದ ಅವರು ವೈಧ್ಯಕೀಯ ಉಪಕರಣಗಳನ್ನು ನೀಡಿರುವ ವಿರೇಶ ಕಿವಡಸನ್ನವರ, ಸಮರ್ಥನಮ ಟ್ರಸ್ಟ್ ಹಾಗೂ ಹೆಚ್.ಎಸ್.ಬಿ.ಸಿ ಇಲೆಕ್ಟ್ರಾನಿಕ್ಸ್ ಡಾಟಾ ಪ್ರೋಸೆಸಿಂಗ್ ಇಂಡಿಯಾ ಪ್ರೈ.ಲಿ. ಇವರಿಗೆ ಧನ್ಯವಾದಗಳನ್ನು ಅರ್ಪಿಸಿದರು.