Belagavi News In Kannada | News Belgaum

ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಆಧ್ಯಕ್ಷರಾಗಿ ವಠಾರ ಹಾಗೂ ಕಾರ್ಯದರ್ಶಿಯಾಗಿ ಹುಜರತಿ ಆಯ್ಕೆ

ಹುಣಸಗಿ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಹುಣಸಗಿ ತಾಲೂಕಿನ ಅಧ್ಯಕ್ಷರಾಗಿ ಬಸನಗೌಡ ವಠಾರ, ಪ್ರಧಾನ ಕಾರ್ಯದರ್ಶಿಯಾಗಿ ಅಮರೇಶ ಹುಜರತಿ ಆಯ್ಕೆಯಾಗಿದ್ದಾರೆ.
ಚಂದ್ರಶೇಖರ ಹೊಕ್ರಾಣಿ ಅವರ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ದಿ:26-2-2022 ರಂದು ನಡೆದ ಸಭೆಯಲ್ಲಿ ಸರ್ವ ಸದಸ್ಯರ ಒಪ್ಪಿಗೆಯ ತೀರ್ಮಾನ ನಡಾವಳಿಯನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಅವರು ಅನುಮೋದಿಸಿದ್ದಾರೆ.