Belagavi News In Kannada | News Belgaum

“ದಿ ಕಾಶ್ಮೀರ್ ಫೈಲ್ಸ್” ಪೋಸ್ಟರ್ ಹಾಕಲಿಲ್ಲ ಎಂದು ಸಿಬ್ಬಂದಿಗಳಿಗೆ ಥಳಿತ

ಪಣಜಿ: ಚಿತ್ರಮಂದಿರದ ಎದುರು “ದಿ ಕಾಶ್ಮೀರ್ ಫೈಲ್ಸ್ ” ಚಲನಚಿತ್ರದ ಪೋಸ್ಟರ್ ಹಾಕಲಿಲ್ಲ ಎಂಬ ಕಾರಣಕ್ಕೆ ಮಡಗಾಂವ್ ನ ಐನೊಕ್ಸ್ ಚಿತ್ರಮಂದಿರದ ಕರ್ಮಚಾರಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ 45 ಜನರ ವಿರುದ್ಧ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 45 ಜನ ಅಪರಿಚಿತರು ಜಮಾಯಿಸಿ ಥಿಯೇಟರ್ ಸಿಬ್ಬಂದಿಗಳಿಗೆ ಥಳಿಸಿದ್ದಾರೆ ಎಂದು ಐನೊಕ್ಸ್ ಚಿತ್ರಮಂದಿರದ ಮ್ಯಾನೇಜರ್ ಜೋಸೆಫ್ ಪಿರೇರಾ ಮಡಗಾಂವ್ ಫತೊರ್ಡಾ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.