Belagavi News In Kannada | News Belgaum

ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ  ಕಬ್ಬು ಅರೆಯುವ ಹಂಗಾಮು ಮುಕ್ತಾಯ/ ಎಫ್ ಆರ್ ಪಿ  ಕ್ಕಿಂತಲೂ ಹೆಚ್ಚಿನ ದರ ನೀಡಿ ನುಡಿದಂತೆ ನಡೆದುಕೊಂಡಿದ್ದೇವೆ –  ಪರಪ್ಪಣ್ಣ ಸವದಿ 

ಅಥಣಿ :  ಸಹಕಾರ ತತ್ವದ ಆಧಾರದ ಮೇಲೆ ಪ್ರಾರಂಭಗೊoಡ  ದಿ.ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಸಕ್ತ ಸಾಲಿನಲ್ಲಿ  ಕಬ್ಬು ಪುರೈಸಿದ ರೈತರಿಗೆ ಪ್ರತಿ ಟನ್ ಕಬ್ಬಿಗೆ ೨೭೦೦ ರೂ. ಗಳನ್ನು ನೀಡಿ ಕೇಂದ್ರ ಸರಕಾರ ನಿಗದಿ ಪಡಿಸಿದ ಎಫ್.ಆರ್.ಪಿ ಕ್ಕಿಂತಲೂ ಹೆಚ್ಚಿನ ದರ ನೀಡಿ ನುಡಿದಂತೆ ನಡೆದುಕೊಂಡಿದ್ದೇವೆ ಎಂದು ಕಾರ್ಖಾನೆಯ ಅಧ್ಯಕ್ಷ ಪರಪ್ಪಣ್ಣ ಸವದಿ ಹೇಳಿದರು.
      ಅವರು ಸೋಮವಾರ ದಿ.೭ ರಂದು ಕಬ್ಬು ಅರೆಯುವ ಹಂಗಾಮಿನ ಮುಕ್ತಾಯ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.  ಸನ್ ೨೦೨೧-೨೨ ನೇ ಸಾಲಿನಲ್ಲಿ ೧೩೪ ದಿನಗಳಲ್ಲಿ ೭ ಲಕ್ಷ ೨೩ ಸಾವಿರ ಟನ್ ಕಬ್ಬು ನುರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದೇವೆ. ಇದಕ್ಕೆಲ್ಲಾ ಆಡಳಿತ ಮಂಡಳಿಯ ಪ್ರಾಮಾಣಿಕತೆ, ಕಾರ್ಮಿಕರ ಪರಿಶ್ರಮ ಹಾಗೂ ರೈತರು ಹಾಗೂ ವಾಹನಧಾರರು ಈ ಕಾರ್ಖಾನೆಯ ಮೇಲೆ ಇಟ್ಟಿರುವ ವಿಶ್ವಾಸವೇ ಕಾರಣ ಎಂದರು. ಇದೇ ರೀತಿ ಎಲ್ಲರೂ  ಸಹಕಾರ ನೀಡಿದರೆ ಬರುವ ಹಂಗಾಮಿನಲ್ಲಿ ೮.೫೦ ಲಕ್ಷ ಟನ್ ಕಬ್ಬು ನುರಿಸುವ ಭರವಸೆ ನೀಡಿದರು.
 ಈ ವರ್ಷ ಕಾರ್ಖಾನೆಗೆ 5 ವಿಭಾಗಗಳಿಂದ ಅತಿ ಹೆಚ್ಚು ಕಬ್ಬು ಪೂರೈಸಿದ ಟ್ಯಾçಕ್ಟರ್ ಮಾಲಿಕರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಅದರಲ್ಲಿ ಪ್ಯಾಕ್ಟರಿ ಸರ್ಕಲ್‌ನಲ್ಲಿ ಅತಿಹೆಚ್ಚು ಕಬ್ಬು ಪೂರೈಸಿದ ಮುರಗೆಪ್ಪ ಬಸಗೌಡ ಮುಳ್ಳಟ್ಟಿ ಅವರಿಗೆ ಪ್ರಥಮ ಬಹುಮಾನ ೨೦ ಸಾವಿರ ರೂ, ಬಸಪ್ಪ ಭೀಮಪ್ಪ ಜಂಬಗಿ ಅವರಿಗೆ ದ್ವಿತಿಯ ಬಹುಮಾನ  ೧೦ ಸಾವಿರ ರೂ ಹಾಗೂ ಬಾಳಪ್ಪ ಶಿವಲಿಂಗ ಠಕ್ಕಣ್ಣನವರ ಅವರಿಗೆ  ತೃತಿಯ ಬಹುಮಾನ ೫ ಸಾವಿರ ರೂ ಪ್ರಮಾಣ  ಪತ್ರ ನೀಡಿ ಸನ್ಮಾನಿಸಲಾಯಿತು. ಕಾರ್ಖಾನೆಯಲ್ಲಿ ಪೂರ್ಣ ಪ್ರಮಾಣದ ಹಂಗಾಮಿನಲ್ಲಿ ಕನದಾಳ ಗ್ರಾಮದ ವಿಠ್ಠಲ ಕರಿಹೊಳಿಯವರು ೪೨೦೯ ಟನ್ ಕಬ್ಬು ಪೂರೈಸಿ ದಾಖಲೆ ನಿರ್ಮಿಸಿದಕ್ಕಾಗಿ ನಗದು ಹಣ ನೀಡಿ ಸನ್ಮಾನಿಸಿದರು.
 ಈ ವೇಳೆ ಕಾರ್ಖಾನೆಯ ಉಪಾಧ್ಯಕ್ಷ ಶಂಕರ ವಾಘಮೊಡೆ, ವ್ಯವಸ್ಥಾಪಕ ನಿರ್ದೆಶಕ ಜಿ,ಎಂ,ಪಾಟೀಲ, ನಿರ್ಧೇಶಕರಾದ ಗುರುಬಸು ತೆವರಮನಿ, ಶಾಂತಿನಾಥ ನಂದೇಶ್ವರ, ಘೂಳಪ್ಪ ಜತ್ತಿ, ಸೌರಭ ಪಾಟೀಲ, ರಮೇಶ ಪಟ್ಟಣ, ಮಲ್ಲಿಕಾರ್ಜುನ ಗೋಠಕಿಂಡಿ, ಶಿದ್ರಾಮ ನಾಯಿಕ, ವಿಶ್ವನಾಥ ಪಾಟೀಲ, ಹನಮಂತ ಜಗದೇವ, ಸುನಂದಾ,ಶ್ರೀಶೈಲ ನಾಯಿಕ, ರುಕ್ಮಿಣಿ  ಕುಲಕರ್ಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
 ಕಚೇರಿ ಅಧೀಕ್ಷಕ ಸುರೇಶ ಠಕ್ಕಣ್ಣನವರ ನಿರೂಪಿಸಿದರು. ಮ್ಯಾನೇಜರ್ ಬಿ.ಎಂ.ಚೌಗುಲಾ ಸ್ವಾಗತಿಸಿ ವಂದಿಸಿದರು.
 ಫೋಟೋ ಶೀರ್ಷಿಕೆ : ಅಥಣಿಯ  ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಅತಿ ಹೆಚ್ಚು ಕಬ್ಬು ಪೂರೈಸಿದ ವಾಹನ ಸವಾರರಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು.
Attachments area