ಹಿರೇಬಾಗೇವಾಡಿ ಪೊಲೀಸ್ರಿಂದ ಮನೆಗಳ್ಳರ ಬಂಧನ; 14 ಲಕ್ಷ ಮೌಲ್ಯದ ವಸ್ತುಗಳ ಜಪ್ತ

ಹಿರೇಬಾಗೇವಾಡಿ ಪೊಲೀಸ್ರಿಂದ ಮನೆಗಳ್ಳರ ಬಂಧನ; 14 ಲಕ್ಷ ಮೌಲ್ಯದ ವಸ್ತುಗಳ ಜಪ್ತ
ಬೆಳಗಾವಿ ನಗರದಲ್ಲಿ ಇತ್ತಿಚಿಗೆ ಜರುಗಿದ ಮನೆ ಕಳ್ಳತನ ಪ್ರಕರಣಗಳ ಪತ್ತೆ ಮಾಡುವ ಕುರಿತು ಅಧೀನ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದಂತೆ, ಬೆಳಗಾವಿ ಗ್ರಾಮೀಣ ಉಪವಿಭಾಗದ ಎಸಿಪಿ ಶ್ರೀ. ಗಣಪತಿ ಗುಡಾಜಿ ಇವರ ಮಾರ್ಗದರ್ಶನದಲ್ಲಿ ಹಿರೇಬಾಗೆವಾಡಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ. ವಿಜಯಕುಮಾರ ಎನ್. ಸಿನ್ನೂರ ರವರು ಹಾಗೂ ಸಿಬ್ಬಂದಿ ಜನರು ಆರೋಪಿತರ ಪತ್ತೆ ಕಾರ್ಯದಲ್ಲಿ ತೊಡಗಿದ್ದಾಗ ಖಚಿತ ಮಾಹಿತಿಯನ್ನಾಧರಿಸಿ ದಿನಾಂಕ :14/03/2022 ರಂದು ತಾರಿಹಾಳ ಗ್ರಾಮದ 4 ಜನ ಆರೋಪಿತರಾದ,
1. ನಾಗೇಂದ್ರ @ಸ್ವಾಮಿ ತಿಪ್ಪಣ್ಣ ಕೊಳಿಕೊಪ್ಪ (23) ಸಾ|| ಶಿವಾಜಿ ಗಲ್ಲಿ, ತಾರಿಹಾಳ ತಾ&ಜಿ|| ಬೆಳಗಾವಿ
2. ಜ್ಯೋತಿಭಾ@ಅಂಜು@ಅಜಯ ಅಪ್ಪಯ್ಯಾ ತಿಪ್ಪಾಯಿ, (27) ಸಾ|| ಶಿವಾಜಿ ಗಲ್ಲಿ, ತಾರಿಹಾಳ
3. ಮಹೇಶ ಪ್ರಕಾಶ ಖನಗಾಂವಕರ (21) ಸಾ|| ಸಂಭಾಜಿ ಗಲ್ಲಿ, ತಾರಿಹಾಳ ತಾ& ಜಿ || ಬೆಳಗಾವಿ
4. ಮಂಜುನಾಥ ಅಪ್ಪಯ್ಯಾ ಕೊಲೇಕರ (21) ಸಾ|| ರಾಮಾಪೂರ ಗಲ್ಲಿ, ತಾರಿಹಾಳ ತಾ&ಜಿ|| ಬೆಳಗಾವಿ.
ಇವರನ್ನು ವಶಕ್ಕೆ ಪಡೆದುಕೊಂಡು ಕೂಲಂಕುಷವಾಗಿ ವಿಚಾರಣೆ ಕೈಗೊಂಡಿದ್ದು, ಹಿರೇಬಾಗೆವಾಡಿ ಹಾಗೂ ಮಾರಿಹಾಳ ಪೊಲೀಸ್ ಠಾಣೆಯ 02 ಕಳ್ಳತನ ಪ್ರಕರಣಗಳನ್ನು ಬೇಧಿಸಿ, ಆರೋಪಿತರಿಂದ ಒಟ್ಟು ಸುಮಾರು 14 ಲಕ್ಷ 69 ಸಾವಿರ ಮೌಲ್ಯದ ಬಂಗಾರದ ಆಭರಣಗಳು, ನಗದು, ಗೃಹೋಪಯೋಗಿ ವಸ್ತುಗಳು ಹಾಗೂ 03 ಮೋಟಾರ ಸೈಕಲ್ಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.
ಆರೋಪಿತನನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಶ್ರಮಿಸಿ, ಕರ್ತವ್ಯ ನಿಷ್ಠೆ ತೋರಿದ ಹಿರೇಬಾಗೆವಾಡಿ ಪೊಲೀಸ್ ಠಾಣೆಯ ಪಿಐ ಶ್ರೀ. ವಿಜಯಕುಮಾರ ಎನ್ ಸಿನ್ನೂರ, ಪಿಎಸ್ಐ ಶ್ರೀ. ಬಿ. ಆರ್. ಮುತ್ನಾಳ, ಹಾಗೂ ಸಿಬ್ಬಂದಿ ಜನರಾದ ವಾಯ್ ಬಿ ಹತ್ತರವಾಟ, ಎ ಕೆ ಕಾಂಬಳೆ, ಎಸ್ ಎಸ್ ಭಾಂವಿ, ಜೆ. ಎ ಪಾಟೀಲ, ಆರ್ ಎಸ್ ಕೆಳಗಿನಮನಿ, ಎಮ್ ಎಸ್ ಮಂಟೂರ, ಎಸ್. ಎಮ್. ಅಳ್ಳಳ್ಳಿ, ಎಸ್. ಎಸ್. ಜಗಜಂಪಿ, ಎ ಎಚ್ ಅಗಸಿಮನಿ ಹಾಗೂ ಟೆಕ್ನಿಕಲ್ ಸೆಲ್ದ ರಮೇಶ ಅಕ್ಕಿ ಇವರ ತಂಡದ ಕಾರ್ಯವನ್ನು ಪೊಲೀಸ್ ಆಯುಕ್ತರು, ಹಾಗೂ ಪೊಲೀಸ್ ಉಪ ಆಯುಕ್ತರು ಪ್ರಶಂಸಿರುತ್ತಾರೆ.