Belagavi News In Kannada | News Belgaum

ಹೋಳಿಹುಣ್ಣಿಮೆ ನಿಮಿತ್ಯ ಶಾಂತಿ ಸಭೆ ನಡೆಸಿದ ಹುಕ್ಕೇರಿ ಸಿಪಿಐ ತಹಶೀಲ್ದಾರ

ಹುಕ್ಕೇರಿ:ಹೋಳಿಹುಣ್ಣಿಮೆ ನಿಮಿತ್ಯ ಶಾಂತಿ ಸಭೆ ನಡೆಸಿದ ಹುಕ್ಕೇರಿ ಸಿಪಿಐ ತಹಶೀಲ್ದಾರ ಹುಕ್ಕೇರಿಯಲ್ಲಿ ಹೋಳಿಹುಣ್ಣಿಮೆ ಪ್ರಯುಕ್ತ ನಗರದಲ್ಲಿ ಶಾಂತವಾಗಿ ಆಚರಣೆ ಮಾಡುವ ಕುರಿತು ಹುಕ್ಕೇರಿ ಪೋಲಿಸ್ ಅಧಿಕಾರಿಗಳು ಶಾಂತಿ ಸಭೆ ನಡೆಸಿದರು.

 

ಸಭೆಯಲ್ಲಿ ಹುಕ್ಕೇರಿ ಪಠ್ಠಣದ ಎಲ್ಲಾ ಸಮಾಜದ ಬಾಂದವರು ಗಣ್ಯರು ಹಾಜರಿದ್ದರು ಸಭೆ ಕುರಿತು ಮಾತನಾಡಿದ ಸಿಪಿಐ ಮಹಮ್ಮದ ರಫಿಕ ತಹಶಿಲ್ದಾರ ಇವರು ಪಟ್ಟಣದಲ್ಲಿ ಶಾಂತವಾಗಿ ಹೋಳಿ ಹುಣ್ಣಿಮೆಯನ್ನ ಆಚರಣೆ ಮಾಡಬೇಕು ವಿನಾಕಾರಣ ಗಲಾಟೆ ದಾಂದಲೆ ಮಂದಿರಗಳ ಮುಂದೆ ಕುಣಿಯುವದು ಕರ್ಕಶ ಶಬ್ದ ಮಾಡುವದು ಬೈಕಗಳ ಸೈಲೆನ್ಸರ್ ಕಿತ್ತು ಜೋರಾದ ಶಬ್ದ ಮಾಡುವ ಮೂಲಕ ಗಾಡಿ ಒಡಿಸುವದು ಕುಡಿದ ಅಮಲಿನಲ್ಲಿ ವೇಗವಾಗಿ ದ್ವಿಚಕ್ರ ವಾಹನ ಸವಾರ ಮಾಡುವದು ಸುಖಾ ಸುಮ್ಮನೆ ಜಗಳ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಂಡು ಅಂತಹ ವಾಹನಗಳನ್ನು ಸೀಜ ಮಾಡುತ್ತೆವೆ.

 

ಒಟ್ಟಿನಲ್ಲಿ ಶಾಂತವಾಗಿ ಹೋಳಿ ಹಬ್ಬವನ್ನು ಆಚರಣೆ ಮಾಡಬೇಕೆಂದು ಸಭೆಯಲ್ಲಿ ಮಾತನಾಡಿದರು.ಅದೇ ರೀತಿ ಸಭೆಯಲ್ಲಿ ಪಿಎಸ್ಐ ಸಿದ್ರಾಮಪ್ಪ ಉನ್ನದ ಇವರು ಕೂಡಾ ಕಾನೂನು ಉಲ್ಲಂಘನೆ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ.ದಯವಿಟ್ಟು ಎಲ್ಲ ಸಮುದಾಯದ ಭಾಂದವರು ಪೊಲಿಸರಿಗೆ ಸಹಕರಿಸಿ ಗಲಾಟೆ ಆಗದಂತೆ ಹೋಳಿ ಹಬ್ಬವನ್ನು ಆಚರಣೆ ಮಾಡಬೇಕೆಂದು ಖಡಕ್ ಎಚ್ಚರಿಕೆ ನೀಡಿದರು ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಮಂಜುನಾಥ ಕಬ್ಬೂರೆ ರಾವಸಾಹೇಬ ಬೊಮ್ಮನಾಳ ಉಮೇಶ ಅರಬಾಂವಿ ಅಜೀತ ನಾಯಿಕ ಬಿ ವಿ ನೆರ್ಲಿ ಹಾಜರಿದ್ದರು.