Belagavi News In Kannada | News Belgaum

ಎಲ್ & ಟಿ ಕಂಪನಿ ವತಿಯಿಂದ 20 ಸಾವಿರ ಗಿಡಗಳನ್ನು ನೆಡುವ ಗುರಿ.

ಬೆಳಗಾವಿ: ಎಲ್ & ಟಿ ಕಂಪನಿ ವತಿಯಿಂದ ಬೆಳಗಾವಿ ನಗರದಲ್ಲಿ ಈ ವರ್ಷ 20 ಸಾವಿರ ಗಿಡಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದು ಕಂಪನಿಯ ಹಿರಿಯ ಅಧಿಕಾರಿ ಹಾರ್ದಿಕ‌ ದೇಸಾಯಿ ಹೇಳಿದರು.

 ಎಲ್ & ಟಿ ಕಂಪನಿ‌ ವತಿಯಿಂದ ವಿಶ್ವೇಶ್ವರಯ್ಯ ನಗರದ ಕನ್ನಡ ಸರ್ಕಾರಿ ‌ಶಾಲಾ ಆವರಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಗರದ ಪರಿಸರ ರಕ್ಷಣೆಯಲ್ಲಿ ಮುಂದಿನ ದಿನಗಳಲ್ಲಿ ಕಂಪನಿಯು ತನ್ನದೇ ಆದ ಪ್ರಮುಖ ಪಾತ್ರ ವಹಿಸಲಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ‌ ಜಿಲ್ಲಾ ಅಧ್ಯಕ್ಷ ದಿಲೀಪ ಕುರುಂದವಾಡೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ ಅವರು ಗಿಡಗಳನ್ನು ನೆಟ್ಟು ನೀರುಣಿದರು.