Belagavi News In Kannada | News Belgaum

ಆಶಾ ಮತ್ತು ಅಂಗಣವಾಡಿ ಕಾರ್ಯಕರ್ತೆಯರಿಗೆ ಮಾನ್ಯತಾ ತರಬೇತಿ ಕಾರ್ಯಕ್ರಮ

ಆಶಾ ಮತ್ತು ಅಂಗಣವಾಡಿ ಕಾರ್ಯಕರ್ತೆಯರಿಗೆ ಮಾನ್ಯತಾ ತರಬೇತಿ ಕಾರ್ಯಕ್ರಮ
ಗುಣಮಟ್ಟದ ಸೇವೆಯನ್ನು ಸಲ್ಲಿಸಲು ಕಾಲಕ್ಕೆ ತಕ್ಕಂತೆ ಜ್ಞಾನವನ್ನು ಅಭಿವೃದ್ದಿಗೊಳಿಸಬೇಕು ಎಂದು ಯು ಎಸ್ ಎಮ ಕೆ ಎಲ್ ಇ ಯ ನಿರ್ದೇಶಕರಾದ ಡಾ. ಹೆಚ್ ಬಿ ರಾಜಶೇಖರ ಅವರು ಮಾತನಾಡುತ್ತಿದ್ದರು ಅವರು ಇಂದು ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಚರಕಾ ¸ಬಾಂಗಣದಲ್ಲಿ ಅಂಗಣವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರಿಗಾಗಿ ನಡೆದ ಮಾನ್ಯತಾ ತರಬೇತಿ ಕಾರ್ಯಕ್ರಮದ ಉದ್ಘಾಟನಾರ್ಥವಾಗಿ ಮಾತನಾಡುತ್ತಿದ್ದರು. ವೈದ್ಯವಿಜ್ಞಾನವು ಇಂದು ದಿನದಿಂದ ದಿನಕ್ಕೆ ಅಭಿವೃದ್ದಿಯನ್ನು ಹೊಂದುತ್ತಿದೆ. ದೇಶದ ಪ್ರತಿಯೊಬ್ಬ ನಾಗರಿಕನ ಆರೋಗ್ಯ ಕಾಳಜಿ ವಹಿಸುವ ಆಶಾ ಹಾಗೂ ಅಂಗಣವಾಡಿ ಕಾರ್ಯಕರ್ತೆಯರಾದ ನೀವುಗಳು ಕಾಲಕ್ಕೆ ತಕ್ಕಂತೆ ವೈದ್ಯ ವಿಜ್ಞಾನದಲ್ಲಿ ಪರಿಣತಿಗೊಳಿಸಿಕೊಂಡರೆ ಆರೋಗ್ಯಯುತ ಸಮಾಜ ನೀರ್ಮಿಸುವದು ಕಷ್ಟಕರವೇನಲ್ಲ, ಆದ್ದರಿಂದ ಇಲ್ಲಿ ಕಲಿತದ್ದನ್ನು ನೀವು ನಿಮ್ಮ ಕ್ಷೇತ್ರದಲ್ಲಿ ರೂಡಿಗೊಳಿಸಿಕೊಂಡರೆ ಈ ಕಾರ್ಯಕ್ರಮ ಸಾರ್ಥಕತೆಯನ್ನು ಹೊಂದಿದಂತೆ ಎಂದು ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ್ದ ತಾಲೂಕಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾz ಡಾ. ಎಸ್ ಸಿ ಮಾಸ್ತಿಹೊಳಿ ಅವರು ಮಾತನಾಡುತ್ತ ಆಶಾ ಮತ್ತು ಅಂಗಣವಾಡಿ ಕಾರ್ಯಕರ್ತೆಯರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಬ್ಬರು ಗರ್ಭಾವಸ್ಥೆಯಿಂದ ಹಿಡಿದು ಹೆರಿಗೆಯಾಗಿ ಆ ಮಗು ಒಂದು ಹಂತಕ್ಕೆ ಬರುವವರೆಗೆ ಆಶಾ ಕಾರ್ಯಕತೆಯರು ಕಾಳಜೀ ವಹಿಸಿದರೆ ಮಗುವಿನ ಬೆಳವಣ ಗೆಯ ಎಲ್ಲ ಕಾಳಜಿಯನ್ನು ಅಂಗಣವಾಡಿ ಕಾರ್ಯಕರ್ತೆಯರು ನಿರ್ವಹಿಸುತ್ತಾರೆ. ಅದೇ ರೀತಿ ಒಂದು ಸುಭೀಕ್ಷ ಸಮಾಜ ನೀರ್ಮಾಣ ಮಾಡಲು ಸರಕಾರಿ ಸಂಸ್ಥೆಗಳಿಂದಷ್ಟೇ ಸಾಧ್ಯವಿಲ್ಲ ಸರಕಾರಿ ಕಾರ್ಯಕ್ರಮಗಳಿಗೆ ಸಹಾಯಹಸ್ತ ನೀಡುವ ಕೆ ಎಲ್ ಇ ಯಂತಹ ಆರೋಗ್ಯ ಸಂಸ್ಥೆಗಳ ಸಹಭಾಗಿತ್ವದಿಂದ ಇನ್ನಷ್ಟು ಪ್ರಭಾವಶಾಲಿಯಾಗಿ ಸಾಕಾರಗೊಳಿಸಬಹುದಾಗಿದೆ. ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ಜರುಗಲಿ ಇದರಿಂದ ಸಾರ್ವಜನಿಕರಿಗೆ ಇನ್ನಷ್ಟು ಗುಣಮಟ್ಟದ ಸೇವೆಗಳನ್ನು ನೀಡಬಹುದಾಗಿದೆ ಎಂದು ಮಾತನಾಡುತ್ತಿದ್ದರು.
ಕಾರ್ಯಕ್ರಮ ಅಧ್ಯಕ್ಞತೆಯನ್ನು ವಹಿಸಿದ್ದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ ಅವರು ಮಾತನಾಡುತ್ತ ನಾಗರಿಕರ ಆರೋಗ್ಯ ರಕ್ಷಣೆಯಲ್ಲಿರುವ ಕೆ ಎಲ್ ಇ ಸಂಸ್ಥೆಯು ಜ್ಞಾನ ದಾಸೋಹದಲ್ಲಿಯೂ ಯಾವತ್ತೂ ಮುಂದಿರುತ್ತದೆ. ಇಂತಹ ವೇದಿಕೆಗಳು ಆಗಾಗ ಇಂದಿನ ವೈದ್ಯಕೀಯ ವಿದ್ಯಮಾನಗಳ ತಿಳುವಳಿಕೆಗಾಗಿ ಸಿದ್ದಗೊಂಡಿರುತ್ತವೆ. ಆದ್ದರಿಂದ ಇಂತಹ ಪ್ರಸಂಗಗಳ ಲಾಭ ಪಡೆಯಲಿಚ್ಚಿಸುವ ಕಾರ್ಯಕರ್vರಿಗೆ ಯಾವತ್ತೂ ಸ್ವಾಗತವನ್ನು ಕೋರುತ್ತದೆ. ಅದೇರೀತಿ ಇಲ್ಲಿ ಕಲಿತದ್ದು ಸದ್ವಿನಿಯೋಗವಾದರೆ ಸಾಕು ಎಂದು ಅಭಿಮತ ವ್ಯಕ್ತ ಪಡಿಸಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿದ್ದ ಸ್ತ್ರೀರೋಗ ಹಾಗೂ ಪ್ರಸೂತಿ ವಿಭಾಗದ ತಜ್ಞರಾದ ಡಾ. ಮುಕ್ತ ಅಲಕುಂಟೆ ಅವರು “ಗರ್ಭಿಣ ಯರು ಹಾಗೂ ರಕ್ತ ಹೀನತೆ ಮತ್ತು ಡಾ. ಗೀತಾಂಜಲಿ ತೋಟಗಿ “ಬಂಜೆತನ ನಿವಾರಣೆ”ಯ ಬಗ್ಗೆ ಉಪನ್ಯಾಸ ನೀಡಿದರು. ಚಿಕ್ಕಮಕ್ಕಳ ವಿಭಾಗದ ವೈದ್ಯರಾದ ಡಾ. ಸೌಮ್ಯಾ ವೇರ್ಣೇಕರ ಅವರು “ಮನೆಯಲ್ಲಿ ಕಾಂಗರೂ ಮಾದರಿ ಆರೈಕೆ” ಮತ್ತು ವೈದ್ಯ ವಿದ್ಯಾರ್ಥಿನಿ ಡಾ. ಪ್ರತಿಮಾ ಪಾಟೀಲ ಅವರು “ಸ್ತನಪಾನದಲ್ಲಿ ಇತ್ತೀಚಿನ ಬದಲಾವಣೆಗಳು” ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ವೈದ್ಯರಾದ ಡಾ. ಸಿ ಎನ್ ತುಗಶೆಟ್ಟಿ, ಸ್ತ್ರೀರೋಗ ಹಾಗೂ ಪ್ರಸೂತಿ ವಿಬಾಗದ ಮುಖ್ಯಸ್ಥೆ ಡಾ. ರಾಜೇಶ್ವರಿ ಕಡಕೋಳ, ಹಿರಿಯ ವೈದ್ಯರಾದ ಡಾ. ಸತೀಶ ಧಾಮಣಕರ, ಡಾ. ಕೆ ಎನ್ ಹೊಳಿಕಟ್ಟಿ, ಡಾ.ದರ್ಶಿತ ಶೆಟ್ಟಿ, ಡಾ. ವಿಕಾಸ ಗಣೇಶವಾಡಿ, ಡಾ. ಅಮೃತಾ ಸಾಲ್ಕರ ಹಾಗೂ ಚಿಕ್ಕಮಕ್ಕಳ ವಿಭಾಗದ ವೈದ್ಯರಾದ ಡಾ. ಸಂತೋಷಕುಮಾರ ಕರಮಸಿ, ಡಾ. ಬಸªರಾಜ ಕುಡಸೋಮಣ್ಣವರ ಹಾಗೂ 120 ಕ್ಕೂ ಅಧಿಕ ಅಂಗಣವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.