Belagavi News In Kannada | News Belgaum

ಐಷಾರಾಮಿ ಕಾರುಗಳನ್ನೇ ಕದಿಯುತ್ತಿದ್ದ ಹೈಟೆಕ್ ಕಳ್ಳನ ಬಂಧನ

ಬೆಂಗಳೂರು:  ಐಷಾರಾಮಿ ಕಾರುಗಳನ್ನು ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಆರೋಪಿಯೊಬ್ಬನನ್ನು ಸಂಪಿಗೆಹಳ್ಳಿ ಉಪ ವಿಭಾಗದ ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿ 21 ಪ್ರಕರಣಗಳಲ್ಲಿ 4 ಕೋಟಿ ಹೆಚ್ಚು ಬೆಲೆ ಬಾಳುವ ವಾಹನಗಳನ್ನು ಪತ್ತೆ ಹಚ್ಚಿದ್ದಾರೆ.
ರಾಜಸ್ಥಾನದ ಸತ್ಯೇಂದರ್ ಸಿಂಗ್ ಶೇಖಾವತ್(41) ಬಂತ ಆರೋಪಿ. ಈತನಿಂದ ಟಯೋಟಾ ಫಾರ್ಚೂನ್ ಕಾರ್, ಆಡಿ ಕಾರುಗಳನ್ನು ಮತ್ತು ಒಂದು ಹೋಂಡಾ ಆಕ್ಟೀವಾ ಸ್ಕೂಟರ್ ಹಾಗೂ ಕಳ್ಳತನಕ್ಕೆ ಉಪಯೋಗಿಸುತ್ತಿದ್ದ ವಿದ್ಯುನ್ಮಾನ ಯಂತ್ರಗಳಾದ 20 ಮ್ಯಾನುವೇಲ್ ಕೀಗಳು, 5 ಎಕ್ಸ್ 100 ಪ್ಯಾಡ್-2 ಎಕ್ಸ್‍ಟೂಲ್-1, 13 ಸ್ಮಾರ್ಟ್ ಕೀಗಳು, ಡಾಲ್‍ಪೀನ್ ಎಕ್ಸ ಹಾರ್ಸ್ ಕೀ ಕಟರ್ ಮಷಿನ್ ಜೊತೆ ಎಕ್ಸಟ್ರಾ ಟೋಲ್ಸ್, ಎಕ್ಸ್ ಟೋಲ್ ಅಡಾಪ್ಟರ್-1, ಚಾರ್ಜ್‍ರ್ ಕೆಬಲ್-1, ವಿವಿಡಿಐ ಮಿನಿ ಕೀ ಟೋಲ್-1, 6 ಮೊಬೈಲ್ ಫೋನ್‍ಗಳು, ಏರಟೇಲ್ ಡೋಂಗಲ್ -1, ಲೇದರ್ ಹ್ಯಾಂಡ್ ಬ್ಯಾಗ್-1, ಕ್ಲಾತ್ ಬ್ಯಾಗ್-1 ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇದಲ್ಲದೇ ಆರೋಪಿಯು ಬೆಂಗಳೂರು ನಗರದ 14 ಪ್ರಕರಣಗಳಲ್ಲಿ, ಹೈದ್ರಾಬಾದ್ ನಗರದ 5 ಪ್ರಕರಣಗಳಲ್ಲಿ ಹಾಗೂ ರಾಜಸ್ಥಾನ ರಾಜ್ಯದ 1 ಪ್ರಕರಣದಲ್ಲಿ ಕಾರುಗಳನ್ನು ಮತು ್ತ 1 ಪ್ರಕರಣದಲ್ಲಿ ಸ್ಕೂಟರ್ ಕಳ್ಳತನ ಮಾಡಿರುವುದು ಪೊಲೀಸರ ತನಖೆಯಿಂದ ಬೆಳಕಿಗೆ ಬಂದಿದೆ. ಕಳ್ಳತನ ಮಾಡಿರುವ ಕಾರ್‍ಗಳನ್ನು ರಾಜಸ್ಥಾನದಲ್ಲಿ ಕೆಲವರಿಗೆ ಮಾರಾಟ ಮಾಡಿದ್ದು, ಈ ಕಾರುಗಳು ರಾಜಸ್ಥಾನದ ಕೆಲವು ಪೊಲೀಸ್ ಠಾಣೆಗಳಲ್ಲಿ ಎನ್‍ಡಿಪಿಎಸ್ ಮತ್ತು 102 ಸಿಆರ್‍ಪಿಸಿ ಅಡಿಯಲ್ಲಿ ಅಲ್ಲಿನ ಪೊಲೀಸರು ವಶಪಡಿಸಿಕೊಂಡಿರುವುದು ತನಿಖೆಯಿಂದ ಗೊತ್ತಾಗಿದೆ.
ಕಳೆದ ಅ. 19ರಂದು ಬೆಳಗ್ಗೆ 8:30 ರಿಂದ ರಾತ್ರಿ 9.30ರ ಸುಮಾರಿನಲ್ಲಿ ಗೋದ್ರೆಜ್ ಅಪಾಟ್‍ರ್ಟಮೆಂಟ್‍ನಲ್ಲಿರುವ ವಿಸಿಟರ್ಸ್ ಪಾರ್ಕಿಂಗ್ ಏರಿಯಾದಲ್ಲಿ ಅಭಿಷೇಕ.ಬಿ ಎಂಬುವರು ನಿಲ್ಲಿಸಿದ್ದ ಟಯೋಟಾ ಫಾರ್ಚೂನರ್ ಕಾರ್‍ನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಆಮೃತ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಲು ವಿವಿಧ ರಾಜ್ಯಗಳ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಆಲ್ಲಿನ ಪೊಲೀಸರು ಈಗಾಗಲೆ ಕಾರು ಕಳ್ಳನ ಪತ್ತೆಗೆ ಪ್ರಯತ್ನಪಟ್ಟಿರುವುದನ್ನು ಮನಗಂಡು ಈಶಾನ್ಯ ವಿಭಾಗ ಡಿಸಿಪಿ ಡಾ.ಅನೂಪ್ ಶೆಟ್ಟಿ ಅವರು ಒಂದು ತಂಡ ಕಾರ್ಯಾಚರಣೆ ಕೈಗೊಂಡು ಆರೋಪಿಯು ರಾಜಸ್ಥಾನ ರಾಜ್ಯದ ಜೋಧಪುರ ನಗರದಲ್ಲಿ ಇರುವುದನ್ನು ಖಚಿತ ಪಡಿಸಿಕೊಂಡು, ಅಲ್ಲಿಗೆ ತೆರಳಿ ಆರೋಪಿ ಸತ್ಯೇಂದರ್ ಸಿಂಗ್ ಶೇಖಾವತ್‍ನನ್ನು ಬಂಧಿಸಿದೆ.////