Belagavi News In Kannada | News Belgaum

ಕ್ಷುಲ್ಲಕ ಕಾರಣಕ್ಕಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ

ಕೋಲಾರ: ಬಾರ್‌ನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ನಡೆದಿದ್ದು, ಕ್ಯಾಶಿಯರ್ ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಗರದ ಟೇಕಲ್ ಸರ್ಕಲ್‍ನಲ್ಲಿರುವ ಚಾಲುಕ್ಯ ಬಾರ್‌ನಲ್ಲಿ ನಡೆದಿದೆ.

ಚಾಲುಕ್ಯ ಬಾರ್ ಕ್ಯಾಶಿಯರ್ ಮೋಹನ್ (42) ಕೊಲೆಯಾದವರು. ನವೀದ್ ಬೇಗ್ ಹಾಗೂ ಆರೀಫ್ ಖಾನ್ ಎಂಬವರಿಂದ ಕೃತ್ಯ ನಡೆದಿದೆ. ಬಾರ್‌ನಲ್ಲಿ ಮದ್ಯದ ಜೊತೆಗೆ ನೀರಿನ ಪಾಕೆಟ್‍ಗಾಗಿ ಜಗಳ ಶುರುವಾಗಿತ್ತು.

ಬಾರ್ ಎದುರು ನಡೆದ ಈ ಗಲಾಟೆ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.  ಸ್ಥಳಕ್ಕೆ ಕೋಲಾರ ಠಾಣಾ ಪೊಲೀಸರು ಭೇಟಿ ನೀಡಿದ್ದು, ನಗರ ಠಾಣೆ ಪೊಲೀಸರಿಂದ ಆರೋಪಿಗಳನ್ನು ಬಂಧಿಸಲಾಗಿದೆ. ಘಟನೆಯು ಕೋಲಾರ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ./////