Belagavi News In Kannada | News Belgaum

ಬಾಲ್ಯ ವಿವಾಹ ತಡೆಗಟ್ಟುವ ಕಾರ್ಯಕ್ರಮ

ಪ್ರಧಾನ ಮಂತ್ರಿ ಗ್ರಾಮ ಸಡಕ ಯೋಜನೆ ಕಾಮಗಾರಿಗಳ ಪರಿವೀಕ್ಷಣೆ: ಮಾರ್ಚ್ 19 ರಂದು

 

ಬೆಳಗಾವಿ, ಮಾರ್ಚ್ 17  : NRRDA ಯಿಂದ ನಿಯೋಜಿರಾದ ಕೇಂದ್ರಗುಣ ಪರಿವೀಕ್ಷಕರು ಫಾರೂಕ್ ಓಮೇರ್ ಅವರು ಬೆಳಗಾವಿ ಜಿಲ್ಲೆಯ ಪ್ರಧಾನ ಮಂತ್ರಿ ಗ್ರಾಮ ಸಡಕ ಯೋಜನೆಯಡಿಯಲ್ಲಿ ಕೈಗೊಂಡ ಕಾಮಗಾರಿಗಳ ಪರಿವಿಕ್ಷಣೆಗಾಗಿ ಮಾರ್ಚ್ 19 ರಿಂದ 24 ರವರೆಗೆ ಪ್ರವಾಸ ಕೈಗೊಳ್ಳಲಿದ್ದಾರೆ.

ಪ್ಯಾಕೇಜ್ ನಂ- ಕೆ.ಎನ್.04-150 ಮಣ ್ಣಕೇರಿ-ಕೇದನೂರ ದಿಂದ ಎನ್.ಎಚ್-4 ರವರೆಗೆ ರಸ್ತೆ, ಕೆ.ಎನ್.04-149 ಯಕ್ಸಂಬಾ ದಿಂದ ತಾಲೂಕಾ ಬಾರ್ಡರ್ ವ್ಹಾಯಾ ಮಲ್ಲೀಕವಾಡ ರಸ್ತೆ, ಕೆ.ಎನ್.04-145 ಅಳಗೌಡ ವಸ್ತಿ(ಎಂ.ಡಿ.ಆರ್) ದಿಂದ ತಾಲೂಕಾ ಬಾರ್ಡರ್ ವ್ಹಾಯಾ ಅಡಹಳ್ಳಿ ರಸ್ಥೆ ಹಾಗೂ ಕೆ.ಎನ್.04-147 ಐಗಳಿ ಕ್ರಾಸ್ ದಿಂದ ಕೋಹಳ್ಳಿ ವ್ಹಾಯಾ ಕೇಸಕರದಡ್ಡಿ ರಸ್ತೆ ಕಾಮಗಾರಿಗಳನ್ನು ಪರಿವೀಕ್ಷಣೆ ಕೈಗೊಳ್ಳಲಿದ್ದಾರೆ ಎಂದು ಬೆಳಗಾವಿಯ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

ಗೋಕಾಕ ಉಪ ಕಾರಾಗೃಹ: ಖೈದಿಗಳ ಸಂದರ್ಶನಕ್ಕೆ ಅವಕಾಶ

 

ಬೆಳಗಾವಿ, ಮಾರ್ಚ್ 17: ರಾಜ್ಯ, ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಗೋಕಾಕ ಉಪ ಕಾರಾಗೃಹದಲ್ಲಿರುವ ಬಂಧಿಗಳಿಗೆ ಮಾರ್ಚ್ 21ರಿಂದ ನೇರ ಸಂದರ್ಶನವನ್ನು ಪುನರಾರಂಭಿಸಲಾಗುತ್ತಿದೆ.

ಬಂಧಿಗಳ ಸಂದರ್ಶನಕ್ಕೆ ಬರುವ ಕುಟುಂಬ ಸದಸ್ಯರು, ಸಂಬಂಧಿಕರು, ಸ್ನೇಹಿತರು, ಮತ್ತು ವಕೀಲರು ಮುಂಚಿತವಾಗಿಯೇ ಕಾರಾಗೃಹದ ಇಮೇಲ್, ವಾಟ್ಸ್ಯಾಪ್, ದೂರವಾಣ ಮೂಲಕ ಸಂಪರ್ಕಿಸಿ ವಿವರಗಳನ್ನು ಸಲ್ಲಿಸಿ ನೋಂದಾಯಿಸಿಕೊಳ್ಳಬೇಕು. ಕೋವಿಡ್ ಲಕ್ಷಣಗಳುಳ್ಳವರಿಗೆ, ಎರಡೂ ಡೋಸ್ ಲಸಿಕೆ ಹಾಕಿಸಿಕೊಳ್ಳದಿರುವವರಿಗೆ ಸಂರ್ದಶನಕ್ಕೆ ಅವಕಾಶ ನಿರ್ಬಂಧಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಗೋಕಾಕ ಉಪ ಕಾರಾಗೃಹದ ದೂರವಾಣ ಸಂಖ್ಯೆ. 08332-225056, ಸಿ.ಯು.ಜಿ ಮೊಬೈಲ್ ಸಂಖ್ಯೆ 9480806478(ವಾಟ್ಸಾಪದ ಸಂಖ್ಯೆ) ಹಾಗೂ ಕಾರಾಗೃಹದ ಇ-ಮೇಲ್ ವಿಳಾಸ [email protected] ನ್ನು ಸಂಪರ್ಕಿಸಬಹುದು ಎಂದು ಗೋಕಾಕ ಉಪ ಕಾರಾಗೃಹದ ಅಧೀಕ್ಷಕರಾದ ಲಕ್ಷ್ಮಿ ಹಿರೇಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ./////

ಹೋಳಿ ಹಬ್ಬ: ಮಾರ್ಚ್ 18, 22 ರಂದು ಮದ್ಯ ಮಾರಾಟ ನಿಷೇಧ

 

ಬೆಳಗಾವಿ, ಮಾರ್ಚ್ 17: ಜಿಲ್ಲೆಯಾದ್ಯಂತ ಮಾರ್ಚ್ 18 ಮತ್ತು ಮಾರ್ಚ್ 22 ರಂದು ಕಾಮ ದಹನ ಹಾಗೂ ರಂಗ ಪಂಚಮಿ ಆಚರಣೆ ಹಿನ್ನೆಲೆ ಮದ್ಯದ ಅಂಗಡಿಗಳನ್ನು ಬಂದ್ ಮಾಡುವುದಕ್ಕೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಸೂಚನೆ ನೀಡಿದ್ದಾರೆ.

ಕಾಮ ದಹನ, ಹಾಗೂ ರಂಗಪಂಚಮಿ ಆಚರಣೆ ಹಿನ್ನೆಲೆ ಜಿಲ್ಲೆಯಾದ್ಯಂತ ಅಹಿತಕರ ಘಟನೆಗಳು ನಡೆಯದಂತೆ ಬೆಳಗಾವಿ ತಾಲೂಕು ಹೊರತುಪಡಿಸಿ ಮದ್ಯದ ಅಂಗಡಿಗಳನ್ನು ಬಂದ್ ಮಾಡಲಾಗುತ್ತದೆ. ಕೆಲ ತಾಲೂಕು, ಗ್ರಾಮಗಳಲ್ಲಿ ಬೇರೆ ಬೇರೆ ದಿನಗಳಲ್ಲಿಯೂ ಕಾಮ ದಹನ, ರಂಗ ಪಂಚಮಿ ಆಚರಿಸಲಾಗುತ್ತಿದ್ದು, ಆಯಾ ದಿನಗಳಂದೂ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

ಅಥಣ , ಚಿಕ್ಕೋಡಿ, ಗೋಕಾಕ, ಬೈಲಹೊಂಗಲ, ರಾಮದರ್ಗ ಉಪವಿಭಾಗಗಳಲ್ಲಿ ಈ ಆದೇಶ ಚಾಲ್ತಿಯಲ್ಲಿ ಇರುತ್ತಿದ್ದು ಆದೇಶ ಉಲ್ಲಂಘಿಸಿದವರು ಕಾನೂನು ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

 

ಜಿಲ್ಲೆಯಾದ್ಯಂತ ನಿಷೇಧಾಜ್ಞೆ ವಾಪಸ್: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ

 

ಬೆಳಗಾವಿ,ಮಾರ್ಚ್ 17: ಘನ ಉಚ್ಚ ನ್ಯಾಯಾಲಯವು ಹಿಜಾಬ್ ಕುರಿತಂತೆ ಅಂತಿಮ ತೀರ್ಪನ್ನು ಪ್ರಕಟಿಸಿದ ನಂತರ ಜಿಲ್ಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದೇ ಇರುವುದರಿಂದ ಹಾಗೂ ಕಾನೂನು ಸುವ್ಯವಸ್ಥೆ ಹತೋಟಿಯಲ್ಲಿ ಇರುವುದರಿಂದ ಜಿಲ್ಲೆಯಾದ್ಯಂತ ಜಾರಿಗೊಳಿಸಲಾಗಿದ್ದ ನಿಷೇಧಾಜ್ಞೆ ದೇಶವನ್ನು ಹಿಂಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.////

 

ಮಂಗಳವಾರ (ಮಾರ್ಚ್ 15)ದಿಂದ ಜಿಲ್ಲೆಯಾದ್ಯಂತ

ಸಿ.ಆರ್.ಪಿ.ಸಿ 1973 ಕಲಂ 144 ರಡಿ ನಿಿಷೇಧಾಜ್ಞೆ ಆದೇಶವನ್ನು ಹೊರಡಿಸಲಾಗಿತ್ತು, ಈ ಆದೇಶವನ್ನು ಮಾರ್ಚ್ 17 ರಂದು ಮಧ್ಯರಾತ್ರಿ 12 ಗಂಟೆಯಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ.

ಈ ವಿಷಯವಾಗಿ ಮುಂದಿನ ಸೂಕ್ತ ಕ್ರಮವನ್ನು ಬೆಳಗಾವಿ ನಗರ ಪೆÇಲೀಸ್ ಆಯುಕ್ತರು ಹಾಗೂ ಬೆಳಗಾವಿ ಪೆÇಲೀಸ್ ವರಿμÁ್ಠಧಿಕಾರಿಗಳು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಹೇಳಿದ್ದಾರೆ.////

ವಿದ್ಯುತ್ ಅದಾಲತ್: ಮಾರ್ಚ್ 19 ರಂದು

 

ಬೆಳಗಾವಿ, ಮಾರ್ಚ್ 17: ಮಾರ್ಚ್ 19 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಅದಾಲತ್ ಹಾಗೂ ಮಧ್ಯಾಹ್ನ 3 ಗಂಟೆಯಿಂದ ಸಂಜೆ 5 ಗಂಟೆವರೆಗೆ ಗ್ರಾಹಕರ ಕುಂದು ಕೊರತೆ ಸಭೆಗಳನ್ನು ಹಾಗೂ ವಿದ್ಯುತ್ ಸುರಕ್ಷತಾ ದಿನವನ್ನು ಬೆಳಗಾವಿ ಗ್ರಾಮೀಣ ಉಪ ವಿಭಾಗದ ನಂ.1ರ ಹು.ವಿ.ಸ.ಕಂ.ನಿ ನೆಹರು ನಗರ ಕಚೇರಿಯಲ್ಲಿ, ನಂ.2ರ ಗಾಂಧಿ ನಗರ ಕಚೇರಿಯಲ್ಲಿ ಹಾಗೂ ಖಾನಾಪುರ ಕಚೇರಿಯಲ್ಲಿಯೂ ಆಚರಿಸಲಾಗುತ್ತದೆ.

ಬೆಳಗಾವಿ ಗ್ರಾಮೀಣ ಭಾಗ ಹಾಗೂ ಖಾನಾಪೂರ ತಾಲೂಕಿನ ವಿದ್ಯುತ್ ಗ್ರಾಹಕರು ತಮ್ಮ ಕುಂದು ಕೊರತೆಗಳನ್ನು ಈ ಎಲ್ಲ ಕಛೇರಿಗಳಲ್ಲಿ ಲಿಖಿತ ರೂಪದಲ್ಲಿ ಸಲ್ಲಿಸುವುದು ಹಾಗೂ ಸಭೆಯ ದಿನದಂದು ಖುದ್ದಾಗಿ ಹಾಜರಿದ್ದು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಹು.ವಿ.ಸ.ಕಂ.ನಿ ಬೆಳಗಾವಿ ಗ್ರಾಮೀಣ ವಿಭಾಗದ ಕಾರ್ಯ ನಿರ್ವಾಹಕ ಇಂಜಿನೀಯರ ಅವರು ಪ್ರಕಟಣೆಲ್ಲಿ ತಿಳಿಸಿದ್ದಾರೆ.////

 

110 ಕೆ.ವ್ಹಿ. ಹೊನಗಾ ಉಪಕೇಂದ್ರ: ಮಾರ್ಚ್ 20 ರಂದು ವಿದ್ಯುತ್ ವ್ಯತ್ಯಯ

 

ಬೆಳಗಾವಿ, ಮಾರ್ಚ್ 17: ಮಾರ್ಚ್ 20 ರಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 5 ಘಂಟೆಯವರೆಗೆ ಹು.ವಿ.ಸ.ಕಂ.ನಿ ವತಿಯಿಂದ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಹೊನಗಾದ 110 ಕೆ.ವ್ಹಿ. ಉಪಕೇಂದ್ರದಿಂದ ಸರಬರಾಜು ಆಗುವ ವಿದ್ಯುತ್‍ನಲ್ಲಿ ವ್ಯತ್ಯಯ ಆಗಲಿದೆ.

ಬೆಳಗಾವಿ ತಾಲೂಕಿನ ಇಂಡೋಸ್ಕಾಟಲ್, ಹತ್ತರಕಿ ಫೀಡ್ಸ್, ಮಹಾಂತ ಇಂಡಸ್ಟ್ರೀಜ್, ಎಂ.ಎಸ್.ಪಿ.ಎಲ್ ಗ್ಯಾಸಿಸ್ ಹಾಗೂ ಹೊನಗಾ ಔದ್ಯೋಗಿಕ ಕ್ಷೇತ್ರಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಹು.ವಿ.ಸ.ಕಂ.ನಿ ಬೆಳಗಾವಿ ಗ್ರಾಮೀಣ ವಿಭಾಗದ ಕಾರ್ಯ ನಿವಾರ್ಹಕ ಇಂಜಿನೀಯರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

 

110 ಕೆ.ವ್ಹಿ. ಕಣಬರಗಿ ಉಪಕೇಂದ್ರ: ಮಾರ್ಚ್ 20 ರಂದು ವಿದ್ಯುತ್ ವ್ಯತ್ಯಯ

 

ಬೆಳಗಾವಿ, ಮಾರ್ಚ್ 17: ಮಾರ್ಚ್ 20 ರಂದು ಬೆಳಿಗ್ಗೆ 9 ಘಂಟೆಯಿಂದ ಸಾಯಂಕಾಲ 4 ಘಂಟೆಯವರೆಗೆ ಕ.ವಿ.ಪ್ರ.ನಿ.ನಿ. ವತಿಯಿಂದ ಕಣಬರ್ಗಿಯ 110 ಕೆ.ವ್ಹಿ. ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಈ ಉಪಕೇಂದ್ರದಿಂದ ಸರಬರಾಜು ಆಗುವ ವಿದ್ಯುತ್‍ನಲ್ಲಿ ವ್ಯತ್ಯಯ ಆಗಲಿದೆ.

ಮುಚ್ಚಂಡಿ, ಕಲಕಾಂಬ ಹಾಗೂ ಅಷ್ಟೆ ಗ್ರಾಮಗಳಿಗೆ ಹಾಗೂ ಈ ಎಲ್ಲ ಗ್ರಾಮಗಳ ನೀರಾವರಿ ಪಂಪ್‍ಸೆಟ್‍ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಹು.ವಿ.ಸ.ಕಂ.ನಿ ಬೆಳಗಾವಿ ಗ್ರಾಮೀಣ ವಿಭಾಗದ ಕಾರ್ಯ ನಿವಾರ್ಹಕ ಇಂಜಿನೀಯರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

 

ಸಮಾಜಕಾರ್ಯ ಶಿಬಿರಾರ್ಥಿಗಳಿಂದ ಮಹಿಳಾ ಸಬಲೀಕರಣ ಹಾಗೂ ಬಾಲ್ಯ ವಿವಾಹ ತಡೆಗಟ್ಟುವ ಕಾರ್ಯಕ್ರಮ

ಬೆಳಗಾವಿ,ಮಾರ್ಚ್ 17: ಬಾಲ್ಯವಿವಾಹ ತಡೆಗಟ್ಟುವ ಬಗ್ಗೆ ಜಾತಾ ಕಾರ್ಯಕ್ರಮ ಹಾಗೂ ಬೀದಿ ನಾಟಕ, ಪೌಷ್ಠಿಕ ಅಭಿಯಾನ ಕಾರ್ಯಕ್ರಮ , ಪೌಷ್ಠಿಕ ಆಹಾರ ಪ್ರದರ್ಶನ ಹಾಗೂ ಸ್ಪರ್ಧೆ, ಮಹಿಳೆಯರಿಗೆ ರಂಗೋಲಿ ಸ್ಪರ್ಧೆ,ಗ್ರಾಮದ ಮಕ್ಕಳ ಹುಟ್ಟುಹಬ್ಬದ ಆಚರಣೆ, ಗ್ರಾಮದಲ್ಲಿ ಸಿಮಂತ ಕಾರ್ಯಕ್ರಮ, ಗರ್ಭಿಣ ಯರಿಗೆ ಮಹಿಳೆಯರಿಗಾಗಿ ಸರ್ಕಾರದ ಸೌಲಭ್ಯಗಳು ಮಾಹಿತಿಯಂತಹ ಮಹತ್ವದ ಕಾರ್ಯಗಳನ್ನು ನೆರವೇರಿಸಲಾಯಿತು.

ರಾಣ ಚೆನ್ನಮ್ಮ ವಿಶ್ವವಿದ್ಯಾಲವು ಸಮಾಜಕಾರ್ಯ ವಿಭಾಗ ಹಮ್ಮಿಕೊಂಡಿರುವ ಗ್ರಾಮೀಣ ಶಿಬಿರದಲ್ಲಿ ಮಾರ್ಚ್ 16 ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ತರುವಾಯ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಂಯೋಜನೆಯೊಂದಿಗೆ ಖಾನಾಪೂರ ತಾಲೂಕಿನ ಅಶೋಕನಗರ ಗ್ರಾಮದಲ್ಲಿ ರಾಣ ಚೆನ್ನಮ್ಮ ವಿಶ್ವವಿದ್ಯಾಲಯದ ಸಂಯೋಜಕರ ಮಾರ್ಗದರ್ಶನ ದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಸಂಯೋಜಕರಾದ ಡಾ. ದೇವತಾ. ಡಿ. ಗಸ್ತಿ ಅವರು ಗ್ರಾಮೀಣ ಶಿಬಿರದ ಉದ್ದೇಶ ಹಾಗೂ ಕಾರ್ಯಕ್ರಮಗಳ ವಿವರಣೆಯನ್ನು ನೀಡಿದರು.

ಖಾನಾಪೂರ ತಾಲೂಕಾ ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಹಾಗೂ ಪ್ರದಾನ ದಿವಾಣ ನ್ಯಾಯಾದಿಶರಾದ ಸೂರ್ಯನಾರಾಯಣ . ಎಸ್. ರವರು ಬಾಲ್ಯ ವಿವಾಹ ಹಾಗೂ ಕಾನೂನಿನ ಕ್ರಮಗಳ ಕುರಿತು ತಿಳಿಸಿದರು.

ಖಾನಾಪೂರ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಆಯ್. ಆರ್. ಘಾಡಿಯವರು ದೇಶದ ಅಭಿವೃದ್ಧಿಯಲ್ಲಿ ಮಕ್ಕಳ ಪಾತ್ರದ ಬಗ್ಗೆ ವಿವರಿಸಿದರು.

ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳಾದ ಶ್ರೀ ರಾಮಮೂರ್ತಿ ಕೆ.ವೀ. ಅವರು ಬಾಲ್ಯವಿವಾಹ ಹಾಗೂ ಹೆಣ್ಣುಮಕ್ಕಳ ಶಿಕ್ಷಣ ಕುರಿತು ಮಾಹಿತಿ ತಿಳಿಸಿದರು.

ರಾಣ ಚೆನ್ನಮ್ಮ ವಿಶ್ವವಿದ್ಯಾಲಯದ ನೋಡಲ್ ಆಫೀಸರ್ ಡಾ. ಕವಿತಾ.ಎಸ್. ಕುಸುಗಲ್, ವಾಣ ಜ್ಯ ವಿಭಾಗದ ಪ್ರಾಧ್ಯಾಪಕಿ ಅಶ್ವಿನಿ ಜಮುನಿ, ಯಾಸಮಿನ ನದಾಫ ,ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಮಂಜುಳಾ, ಶಿಕ್ಷಣ ವಿಭಾಗ ಪ್ರಾಧ್ಯಾಪಕರಾದ ಡಾ. ಸುμÁ್ಮ ಆರ್., ಐ.ಟಿ.ಕೋ- ಆರ್ಡಿನೆಟರ- ಡಾ.ಮಲ್ಲಮ್ಮ ರೆಡ್ಡಿ, ಸಹಾಯಕ ಸಂಯೋಜಕರಾದ ಕಿರಣ . ಎಸ್., ರಾಣ ಚೆನ್ನಮ್ಮ ಶಿಬಿರಾರ್ಥಿಗಳು, ಅಶೋಕನಗರದ ಗ್ರಾಮಸ್ತರು ಉಪಸ್ಥಿತರಿದ್ದರು./////