Belagavi News In Kannada | News Belgaum

ವೇಶ್ಯಾವಾಟಿಕೆ : ನಟಿ ಸೇರಿದಂತೆ ಮೂವರ ರಕ್ಷಣೆ

ಪಣಜಿ: ಗೋವಾದ ಪಣಜಿ ಸಮೀಪದ ಸಂಗೋಲ್ಡಾ ಗ್ರಾಮದಲ್ಲಿ ವೇಶ್ಯಾವಾಟಿಕೆ ಜಾಲವನ್ನು ಭೇದಿಸಿದ ಕ್ರೈಂ ಬ್ರ್ಯಾಂಚ್ ಪೊಲೀಸರು, ಘಟನೆಗೆ ಸಂಬಂಧಿಸಿದಂತೆ ಹೈದರಾಬಾದ್ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಅಲ್ಲದೇ ನಟಿಯೊಬ್ಬರು ಸೇರಿದಂತೆ ಮೂವರು ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ವರದಿ ತಿಳಿಸಿದೆ. ಕ್ರೈ ಬ್ರ್ಯಾಂಚ್ ಬಿಡುಗಡೆಗೊಳಿಸಿರುವ ಪತ್ರಿಕಾ ಹೇಳಿಕೆಯಲ್ಲಿ, ಕಿರುತೆರೆ ನಟಿ ಸೇರಿದಂತೆ ಇಬ್ಬರು ಮುಂಬೈ ನಿವಾಸಿಗಳಾಗಿದ್ದು, ಮೂರನೇ ಮಹಿಳೆ ಹೈದರಾಬಾದ್ ನಿವಾಸಿಗಳಾಗಿದ್ದಾರೆ. ಹಫೀಜ್ ಸೈಯದ್ ಬಿಲಾಲ್ ಎಂಬ ವ್ಯಕ್ತಿ ವೇಶ್ಯಾವಾಟಿಕೆ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದಾಗಿ ಕ್ರೈಂ ಬ್ರ್ಯಾಂಚ್ ಗೆ ಮಾಹಿತಿ ಬಂದಿತ್ತು. ಇದರ ಆಧಾರದ ಮೇಲೆ ಆರೋಪಿ ಸೆರೆಗೆ ಜಾಲ ಬೀಸಲಾಗಿತ್ತು. ಮಾಹಿತಿಯನ್ನು ಪರಿಶೀಲಿಸಿದ ನಂತರ ಗೋವಾ ಕ್ರೈಂ ಬ್ರ್ಯಾಂಚ್ ಪೊಲೀಸರು ಆರೋಪಿ ಬಂಧನಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಹೈದರಾಬಾದ್ ಮೂಲದ ಈ ವ್ಯಕ್ತಿ, ವೇಶ್ಯಾವಾಟಿಕೆಗಾಗಿ ಸಂಗೋಲ್ಡಾ ಗ್ರಾಮದಲ್ಲಿನ ಹೋಟೆಲ್ ವೊಂದನ್ನು ಬುಕ್ ಮಾಡಿದ್ದು, ಮೂವರು ಮಹಿಳೆಯರಿಗೆ 50,000ರೂಪಾಯಿ ಹಣದ ಒಪ್ಪಂದ ನಡೆದಿತ್ತು ಎಂದು ತಿಳಿದು ಬಂದಿದೆ./////