Belagavi News In Kannada | News Belgaum

ಅಮೆರಿಕಾದಲ್ಲೂ ಜೇಮ್ಸ್ ಜಾತ್ರೆ, ಅರಸು ಡೈಲಾಗ್‌ ಗೆ ಅಭಿಮಾನಿಗಳು ಫಿದಾ

ಬೆಂಗಳೂರು:  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್  ನಟನೆಯ ಕೊನೆಯ ಮಾಸ್ ಮನರಂಜನಾ ಚಿತ್ರ ಜೇಮ್ಸ್ ಅಬ್ಬರ ಬಿಡುಗಡೆಯಾದ ಎರಡನೇ ದಿನವೂ ಜೋರಾಗಿದೆ. ಇಂದು ಕೂಡ ಬಹುತೇಕ ಥಿಯೇಟರ್ ಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿದೆ.

ಒಂದು ಕಡೆ ದಿವಂಗತ ಪುನೀತ್ ರಾಜ್​ಕುಮಾರ್ ಅಭಿನಯ ಜೇಮ್ಸ್ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಇನ್ನೊಂದು ಕಡೆ ತಮ್ಮ ನೆಚ್ಚಿನ ನಟ ಪವರ್​ಸ್ಟಾರ್ ಹುಟ್ಟುಹಬ್ಬ ಕೂಡಾ ಅಷ್ಟೇ ಅದ್ದೂರಿಯಾಗಿ ಆಚರಿಸಲಾಗುತ್ತಿದೆ.

ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಹಾಗು ಗದಗ ಬಾಗಲಕೋಟ, ಯಾದಗಿರಿಯಲ್ಲಿ ಅಪ್ಪು ಬರ್ತ್​ಡೇ ಆಚರಿಸಲಾಗಿದೆ. ಹುಟ್ಟುಹಬ್ಬ ಪ್ರಯುಕ್ತ ಕೇಕ್ ಕತ್ತರಿಸಿ, ಅಪ್ಪು ಹೆಸರಿನಲ್ಲಿ ಅಭಿಮಾನಿಗಳು ಸರ್ಕಲ್ ಉದ್ಘಾಟನೆ ಮಾಡಿದರು. ಯಾದಗಿರಿ ನಗರದ ಮೈಲಾರಪುರ ಬೆಸ್ ಬಳಿ ಸಂಭ್ರಮಾಚರಣೆ ಇಂದು ಬೆಳಗ್ಗೆ ಮುಗಿಲುಮುಟ್ಟಿತ್ತು. ಸರ್ಕಲ್ ಗೆ ಹಿಂದೆ ಇದ್ದ ಹೆಸರನ್ನು ಬದಲಿಸಿ ಅಪ್ಪು ಹೆಸರನ್ನು ಇಡಲಾಯಿತು.

ಅಮೆರಿಕಾದಲ್ಲೂ ಜೇಮ್ಸ್ ಅಬ್ಬರ: ಜೇಮ್ಸ್ ಜಾತ್ರೆ ಜಿಲ್ಲೆ, ಗಡಿ, ರಾಜ್ಯ ರಾಷ್ಟ್ರ ಮೀರಿ ವಿದೇಶಗಳಲ್ಲಿ ಕೂಡ ಜೋರಾಗಿದೆ. ಅಮೆರಿಕಾದಲ್ಲಿ ಜೆೇಮ್ಸ್ ಚಿತ್ರ ಅದ್ದೂರಿ ಪ್ರದರ್ಶನ ಕಾಣುತ್ತಿದೆ.. ಅಮೆರಿಕಾ ಕನ್ನಡಿಗರು ಜೇಮ್ಸ್ ಚಿತ್ರ ಪ್ರದರ್ಶನಕ್ಕೆ ಅದ್ದೂರಿ ಸ್ವಾಗತ ಕೋರಿದ್ದು ಅಪ್ಪುವಿನ ಹುಟ್ಟುಹಬ್ಬವನ್ನು ಕೂಡ ಆಚರಿಸುತ್ತಿದ್ದಾರೆ. ಅಮೆರಿಕಾದ ರಸ್ತೆಯಲ್ಲಿ ಡ್ಯಾನ್ಸ್ ಮಾಡಿ, ಪಟಾಕಿ ಸಿಡಿಸಿ ಕೇಕ್ ಕಟ್ ಮಾಡುವ ಮೂಲಕ ನಮನ ಸಲ್ಲಿಸುತ್ತಿದ್ದಾರೆ. ಜೇಮ್ಸ್ ಚಿತ್ರದ ಕಟೌಟ್ ಗಳು ರಾರಾಜಿಸುತ್ತಿವೆ./////