Belagavi News In Kannada | News Belgaum

ಎಟಿಎಂಯಲ್ಲಿನ 3 ಲಕ್ಷ ರೂ. ಹಣ ದೋಚಿ ಖದೀಮರು ಪರಾರಿ

ಬೆಳಗಾವಿ: ತಾಲೂಕಿನ ಹೊನಗಾದಲ್ಲಿರುವ  ಎಟಿಎಂ(  ಇಂಡಿಯಾ )  ಲಾಕ್‌ ಮುರಿದು ಖದೀಮರು ಸುಮಾರು 3 ಲಕ್ಷ  ರೂ.  ನಗದು  ದೋಚಿ ಪರಾರಿಯಾಗಿದ್ದಾರೆ. ಪೊಲೀಸ್‌ ರು ಪ್ರಕರಣ ದಾಖಲಿಸಿಕೊಂಡು ಬಲೆ ಬಿಸಿದ್ದಾರೆ.

ಕಳ್ಳರಿಗಾಗಿ ಶೋಧ:    ಕಾಕತಿ ವ್ಯಾಪ್ತಿಯಲ್ಲಿ ಇರುವ ಕಳ್ಳರು ಈ ಕೃತ್ಯಕ್ಕೆ ಕೈ ಹಾಕಿದ್ದಾರೆ ಎಂದು ಪೊಲೀಸ್ ರು ಶಂಕಿಸಿದ್ದಾರೆ.  ಎಟಿಎಂ ಗೆ ಬೀಗ ಹಾಕಲಾಗಿತ್ತು,  ಲಾಕ್‌ ನ್ನು ಸಲಿಸಾಗಿ ಮುರಿದು ಹಣ ದೋಚಲಾಗಿದೆ.

ಇಂಡಿಯಾ ಎಟಿಎಂಗಳು ರಾತ್ರಿಯಾಗುತ್ತಿದಂತೆ ಏಕಾಏಕಿಯಾಗಿ ಲಾಕ್‌ ಆಗುತ್ತವೆ. ಅದರಲ್ಲಿರುವ ಹಣವನ್ನು ಪಡೆಯಲು ಸಾಧ್ಯವಿಲ್ಲ. ಆದರೂ ಕಿಡಿಗೇಡಿಗಳು ಇದನೆಲ್ಲ, ಅರಿತು ಸ್ಥಳೀಯರೇ ಹಣ ಕದ್ಧಿರುವುದಾಗಿ ಶಂಕಿಸಲಾಗಿದೆ.

ಕಾಕತಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.//////