Belagavi News In Kannada | News Belgaum

ಶಿಬಿರ ಮೂಲಕ ಗ್ರಾಮಸ್ಥರಿಗೆ ಹಾಗೂ ಶಾಲಾ ಮಕ್ಕಳಿಗೆ ಉಚಿತ ನೇತ್ರ ತಪಾಸಣೆ

ಮಾರ್ಚ್ 18: ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಮಾಜಕಾ ರ್ಯ ವಿದ್ಯಾರ್ಥಿಗಳಿಂದ ನಡೆಸಲಾಗುತ್ತಿರುವ ಗ್ರಾಮೀಣ ಶಿಬಿರದಲ್ಲಿ ಶಾಲಾ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ಬೆಳಗಾವಿಯ ಇ ಕಾಲ ಅಭಿಯಾನ ಇವರ ಸಂಯೋಜನೆಯೊಂದಿಗೆ ಉಚಿತ ನೇತ್ರ ತಪಾಸಣಾ ಕಾರ್ಯಕ್ರಮವನ್ನು ಶ್ರೀ. ಸಂತೋಷ ನಂದಗಡರವರ ನೇತ್ರತ್ವದಲ್ಲಿ ನೆರವೇರಿಸಲಾಯಿತು. ಶಿಬಿರಾರ್ಥಿಗಳು ಗ್ರಾಮದ ಸರ್ವೆ ಯಲ್ಲಿ ಪಾಲ್ಗೊಂಡಿದ್ದರು.

ಸಮಾಜಕಾರ್ಯ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಾಯಿ ಶೃದ್ದಾ ಮಹಿಳಾ ಅಭವೃದ್ಧಿ ಸಂಘದ ಅಧ್ಯಕ್ಷರಾದ ಸವಿತಾ ಹೆಬ್ಬಾರ ಸಮುದಾಯ ಅಭಿವೃದ್ಧಿಯಲ್ಲಿ ಸಮಾಜಕಾರ್ಯ ಮಹತ್ವದ್ದಾಗಿದೆ ಎಂದು ಶಿಬಿರಾರ್ಥಿಗಳನ್ನು ಪ್ರಶಂಶಿಸಿದರು.

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಎನ್.ಎಸ್. ಎಸ್. ಕೋ-ಆರ್ಡಿನೇಟರ್ ಹಾಗೂ ವಾಣಿಜ್ಯ ವಿಭಾಗದ ಚೇರ್ಮನ್ ರಾದ ಪೆÇ್ರ. ಬಿ. ಎಸ್. ನಾವಿ. ರವರು ದೇಶದ ಅಭಿವೃದ್ಧಿಗಾಗಿ ಮಕ್ಕಳನ್ನು ಬಾಲ್ಯದಲ್ಲಿ ಹುರಿದುಂಬಿಸಬೇಕು ಎಂದು ಹೇಳಿದರು. ಮರಾಠಿ ವಿಭಾಗದ ಮುಖ್ಯಸ್ಥರಾದ ಡಾ. ಮೊಯಿಜುದ್ದಿನ್ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮಾರ್ಚ್ 13 ರಿಂದ 19 ರವರೆಗೆ ಆಯೋಜಿಸಲಾಗಿದ್ದ ಸಮಾಜಕಾರ್ಯ ಗ್ರಾಮೀಣ ಶಿಬಿರ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಂದ ಆಯೊಜಿತ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಿ ಸಿಹಿಯನ್ನು ಹಂಚಲಾಯಿತು ಹಾಗೂ ಅತಿಥಿಗಳಿಗೆ ಸತ್ಕರಿಸಲಾಯಿತು.

ಶಿಬಿರದ ಸಂಯೋಜಕರಾದ ಡಾ. ದೇವತಾ. ಡಿ. ಗಸ್ತಿ ಹಾಗೂ ಸಹ ಸಂಯೋಜಕರಾದ ಕಿರಣ ಎಸ್ .ಅಶೋಕ ನಗರ ಗ್ರಾಮಸ್ತರು ಹಾಗೂ ಶಿಬಿರಾರ್ಥಿಗಳು ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದರು.////