Belagavi News In Kannada | News Belgaum

ಪೊಲೀಸರ ಬಳಿ ಬಂದು ಟ್ರಾಫಿಕ್‌ ಅವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಯುಕೆಜಿ ಬಾಲಕ

ಆಂಧ್ರಪ್ರದೇಶ: ಶಾಲೆಗೆ ತೆರಳುವ ಮಾರ್ಗದಲ್ಲಿ ಎದುರಿಸುತ್ತಿರುವ ಟ್ರಾಫಿಕ್‌ ಸಮಸ್ಯೆ ನಿವಾರಣೆಗೆ ಮಧ್ಯಸ್ಥಿಕೆ ವಹಿಸುವಂತೆ ಕೋರಿ 6 ವರ್ಷದ ಯುಕೆಜಿ ಬಾಲಕ ಸ್ಥಳೀಯ ಪೊಲೀಸ್‌ ಠಾಣೆ ಮೆಟ್ಟೆಲೇರಿದ ವಿಚಿತ್ರ ಘಟನೆ ನಡೆದಿದೆ.

ಚಿತ್ತೂರು ಜಿಲ್ಲೆಯ ಪಲಮೇರ್​ನಲ್ಲಿಗುರುವಾರ ಈ ಘಟನೆ ನಡೆದರೂ, ಬಾಲಕ ಪೊಲೀಸರೊಂದಿಗೆ ಮಾತನಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ನಂತರ ಶನಿವಾರ ಬೆಳಕಿಗೆ ಬಂದಿದೆ. ಇಲ್ಲಿಯ ಆದರ್ಶ ಶಾಲೆಯ ಬಳಿ ನಡೆಯುತ್ತಿರುವ ಕಾಮಗಾರಿಯಿಂದಾಗಿ ತನಗೆ ಶಾಲೆಗೆ ಹೋಗಲು ಮತ್ತು ಬರಲು ಕಿರಿಕಿರಿಯುಂಟಾಗಿದೆ. ಟ್ರಾಫಿಕ್​ ಸಮಸ್ಯೆಯನ್ನು ಬಗೆಹರಿಸಿಕೊಡಬೇಕು. ಈಗಲೇ ಎಲ್ಲಾ ಪೊಲೀಸರು ಸ್ಥಳಕ್ಕೆ ಬರಬೇಕು ಎಂದು ವಿದ್ಯಾರ್ಥಿ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದು, ಈ ಬಾಲಕನ ಮನವಿ ಕೇಳಿ ಪೊಲೀಸರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ವಿದ್ಯಾರ್ಥಿ ಹೆಸರು ಕಾರ್ತಿಕೇಯನ್.​ ಬಾಲಕನ ಕಂಪ್ಲೇಂಟ್‌ ಪಡೆದುಕೊಂಡು ಪೊಲೀಸರು ಸಮಸ್ಯೆಯನ್ನು ಪರಿಹರಿಸುವುದಾಗಿ ವಾಗ್ದಾನ ಮಾಡಿದ್ದಾರೆ. ಮಾತ್ರವಲ್ಲದೇ, ತಮ್ಮ ಫೋನ್​ ನಂಬರ್​ ಅನ್ನು ಬಾಲಕನಿಗೆ ನೀಡಿ ಏನಾದರೂ ಸಮಸ್ಯೆಯಾದರೆ ನನಗೆ ಕರೆ ಮಾಡು ಎಂದು ಹೇಳಿ ಕಳುಹಿಸಿದ್ದಾರೆ.//////