Belagavi News In Kannada | News Belgaum

ವಿಶ್ವ ಬಾಯಿ ಆರೋಗ್ಯ ದಿನದ ನಿಮಿತ್ತ ಒಂದು ತಿಂಗಳಕಾರ್ಯಕ್ರಮ ಉದ್ಘಾಟನೆ

 

ಬೆಳಗಾವಿ- – ವಿಶ್ವ ಬಾಯಿ ಆರೋಗ್ಯ ದಿನದ ನಿಮಿತ್ತ ಇಂದು ಕೆ.ಎಲ್.ಇ ವಿಶ್ವವಿದ್ಯಾಲಯದ ವಿಶ್ವನಾಥ ಕತ್ತಿ ದಂತ ವಿಜ್ಞಾನ ವಿದ್ಯಾಲಯದಲ್ಲಿ ಬಾಯಿ ಆರೋಗ್ಯ ವೃದ್ದಿಯ ಯೋಜನೆಯ ಅನೇಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಉದ್ಘಾಟಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿಯ ಪ್ರಥಮ ಮಹಿಳಾ ದಂತ ವೈದ್ಯೆ ಡಾ.ಗೀತ ಕಿತ್ತುರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಾಯಿಆರೋಗ್ಯ ದಿನದ ನಿಮಿತ್ತ ಒಂದು ತಿಂಗಳಕಾಲ ಬಾಯಿ ಆರೋಗ್ಯ ಸಂಭಂದಿತ ಅನೇಕ ಚಟುವಟಿಕೆಗಳನ್ನ ಬೆಳಗಾವಿ ನಗರ ಪ್ರದೇಶದಲ್ಲಿ ಹಮ್ಮಿಕೊ0ಳ್ಳಲಾಗಿದೆ.

“ಬಾಯಿ ನೈರ್ಮಲ್ಯ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವುದು” ವಿಷಯ ಕುರಿತ ಬೀದಿ ನಾಟಕವನ್ನ ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿ ಪ್ರದರ್ಶಿಸಲಾಗುವುದು ಗಾಂಧಿ ನಗರದಲ್ಲಿ ದಂತ ವೈದ್ಯಕೀಯ ಶಿಬಿರಗಳನ್ನ ಆಯೋಜಿಸಲಾಗಿದೆ.

ಕಾಕತಿಯ ಮೂರು ಸರ್ಕರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿಶೆಷ ಆರೋಗ್ಯ ರಕ್ಷಣೆ ಅಗತ್ಯವಿರುವ ಮಕ್ಕಳಿಗೆ ತಪಾಸಣೆ ಶಿಬಿರ ಮತ್ತು ಚಿಕಿತ್ಸೆ ಹಾಗೊ ಆರೋಗ್ಯಕರ ನಗು ಸ್ಪರ್ಧೆ ಗಳನ್ನ ನಡೆಸಲಾಗುವುದು.

ಇದಲ್ಲದೆ ಹೆಚ್ಚುವರಿಯಾಗಿ ಕಾಲೇಜುಗಳಲ್ಲಿ ಪೋಸ್ಟರ್ ಮತ್ತು ಬ್ಯಾನರ್‍ಗಳ ಪ್ರದರ್ಶನ. ಶಿಕ್ಷಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಬಾಯಿ ಆರೋಗ್ಯ ಕುರಿತು ತರಬೇತಿ ಕಾರ್ಯಕ್ರಮಗಳನ್ನ ನಡೆಸಲಾಗುವುದು. ಸಮುದಾಯಕ್ಕೆ ಅನುಕೊಲವಾಗುವಂತೆ “ಬಾಯಿ ಆರೋಗ್ಯ ಮತ್ತು ನೈರ್ಮಲ್ಯದ ಕುರಿತು ವೇಣುಧ್ವನಿ ರೇಡಿಯೋ ಸ್ಟೇಷನ್ ಮತ್ತು ಫೆಸ್ಬುಕ್ ವೇದಿಕೆ ಮೂಲಕ ಚರ್ಚೆ, ಸಂದರ್ಶನ ಹಾಗೊ ಉಪನ್ಯಾಸಗಳ ಸರಣಿಯನ್ನ ನೀಡಲಾಗುವುದು.

ಒಂದು ತಿಂಗಳ ಅವಧಿಯಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ಸಮುದಾಯ ದಂತ ವಿಭಾಗದ ಮುಖ್ಯಸ್ಥ ಡಾ.ಅನಿಲ್ ಅಂಕೋಲ ಮತ್ತು ªಪ್ರಾಚಾರ್ಯ ಡಾ.ಅಲ್ಕಾ ಕಾಳೆ ಇವರ ಮಾರ್ಗದರ್ಶನದಲ್ಲಿ ನಡೆಸಲಾಗುವುದು. ಈ ಎಲ್ಲಾ ಯೋಜನೆಯ ಕಾರ್ಯಕ್ರಮಗಳಿಗೆ ಇಂದು ಮುಖ್ಯ ಅತಿಥಿಗಳು ಚಾಲನೆ ನೀಡಿದರು.