Belagavi News In Kannada | News Belgaum

ಗ್ರಾಮೀಣ ಕ್ರೀಡೆ ಕುಸ್ತಿಗೆ ಅಗತ್ಯ ಪ್ರೋತ್ಸಾಹ

ಬೆಳಗಾವಿ: ಉತ್ತರ ಕರ್ನಾಟಕದ ವಿಶೇಷ ಕ್ರೀಡೆಯಾಗಿರುವ ಕುಸ್ತಿಗೆ ಪ್ರೋತ್ಸಾಹ ಅಗತ್ಯ. ಈ ದಿಸೆಯಲ್ಲಿ ಸರಕಾರದಿಂದ ಸೂಕ್ತ ನೆರವು ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಭರವಸೆ ನೀಡಿದ್ದಾರೆ.

ಸಾಂಬ್ರಾ ಗ್ರಾಮದಲ್ಲಿ ಹೋಳಿ ಹಬ್ಬದ ನಿಮಿತ್ಯವಾಗಿ ಭಾನುವಾರ ರಾತ್ರಿ ನಡೆದ ಭಾರಿ ನಿಖಾಲಿ ಕುಸ್ತಿ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

 

ಕುಸ್ತಿ ವಿಶಿಷ್ಟ ಕಲೆಯಾಗಿದೆ. ಇಡೀ ದೇಹದ ಬೆಳವಣಿಗೆಗೆ ವ್ಯಾಯಮ ನೀಡುವ ಕ್ರೀಡೆಯಾಗಿದೆ. ಉತ್ತರ ಕರ್ನಾಟಕದ ಪ್ರತಿ ಹಳ್ಳಿಯಲ್ಲಿ ಅದರಲ್ಲೂ ವಿಶೇಷವಾಗಿ ಬೆಳಗಾವಿ ಜಿಲ್ಲೆಯಲ್ಲಿ ಇದಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಹಲವಾರು ಹೆಸರಾಂತ ಕುಸ್ತಿಪಟುಗಳು ಜಿಲ್ಲೆಯಿಂದ ತಯಾರಾಗಿದ್ದಾರೆ ಎಂದು ಹೆಬ್ಬಾಳಕರ್ ಹೇಳಿದರು.

 

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಅಂತರಾಷ್ಟ್ರೀಯ ಕುಸ್ತಿಪಟು ಶಿವಾಜಿ ಚಿಂಗಳೆ, ನಾಗೇಶ ದೇಸಾಯಿ, ಮುಕುಂದ ಮುತಗೇಕರ, ಯಲ್ಲೋಜಿ ಪಾಟೀಲ, ರಮಾಕಾಂತ ಕೊಂಡುಸ್ಕರ್, ರಾಜು ದೇಸಾಯಿ, ಗ್ರಾಮ ಪಂಚಾಯತ ಅಧ್ಯಕ್ಷರಾದ ರಂಜನಾ ಅಪ್ಪಯಾಚೆ, ಗ್ರಾಮದ ಜನರು, ಕುಸ್ತಿ ಪಟುಗಳು ಉಪಸ್ಥಿತರಿದ್ದರು.