Belagavi News In Kannada | News Belgaum

ಗುಳಬಾಳ ಸದ್ಗುರು ರಾಮಲಿಂಗೇಶ್ವರ ಮಠದಲ್ಲಿ ಸಾಮೂಹಿಕ ವಿವಾಹ

ಹುಣಸಗಿ: ತಾಲೂಕಿನ ಗುಳಬಾಳ ಆನಂದಾಶ್ರಮದ ಶ್ರೀ ಸದ್ಗುರು ರಾಮಲಿಂಗೇಶ್ವರ 22 ನೇಯ ಜಾತ್ರಾ ಮಹೋತ್ಸವದ ಅಂಗವಾಗಿ ದಿನಾಂಕ 23 ರಂದು ಗುರು ಹುಚ್ಚೇಶ್ವರ ಮಾಹಾಸ್ವಾಮಿಗಳ 12 ನೇ ಪುಣ್ಯಾರಾಧನೆ ಮತ್ತು ಕತೃ ಗದ್ದಿಗೆ ರುದ್ರಾಭಿಷೆಕ. ದಿನಾಂಕ 24 ಬೆಳಿಗ್ಗೆ ಶ್ರೀ ಕಾಳಿಕಾ ದೇವಿ ಹಾಗೂ ರಾಮಲಿಂಗೇಶ್ವರ ಗದ್ದುಗೆಗೆ ರುದ್ರಾಭಿಷೇಕ ಮತ್ತು ಸಹಸ್ರ ಬಿಲ್ವಾರ್ಚಣೆ, ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಇರುತ್ತವೆ. ಸಾಯಂಕಾಲ ಮಾಹಾ ರಥೋತ್ಸವ ಜರಗುವುದು.

 

ಕಾರ್ಯಕ್ರಮಗಳ ದಿವ್ಯ ಸಾನಿದ್ಯವನ್ನು ಶೀಮನಿಪ್ರ ಗುರುಪಾದ ಮಹಾಸ್ವಾಮಿಗಳು, ಗಿರಿರಾಜ ಪಂಡಿತಾರಾದ್ಯ ಶ್ರೀಗಳು, ಶ್ರೀ ಮಹಾಂತಲಿಂಗ ಸ್ವಾಮಿಗಳು, ಗುರುಲಿಂಗ ಶಿವಾಚಾರ್ಯರು ಗುಂಡಕನಾಳ ವಹಿಸುವರು. ಹರ ಗುರು ಚರಮೂರ್ತಿಗಳು ಭಾಗವಹಿಸುವರು. ಸಾಮೂಹಿಕ ವಿವಾಹದಲ್ಲಿ ವಿವಾಹ ಆಗಬಯಸುವವರು ಶ್ರೀಮಠವನ್ನು ಸಂಪರ್ಕಿಸಲು ಕೋರಲಾಗಿದೆ.

 

ಬುಧವಾರ 23 ರಂದು ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಹಾಗೂ ಗುರುವಾರ ದಿ 24 ರಂದು ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಹಾಗು ನಗರ ನೀರು ಸರಬರಾಜು ಒಳಚರಂಡಿ ಮಂಡಳಿಯ ಅಧ್ಯಕ್ಷ ನರಸಿಂಹನಾಯಕ (ರಾಜುಗೌಡ) ವಹಿಸುತ್ತಾರೆ. ಶ್ರೀ ಮಠದ ಸದ್ಭಕ್ತರು ಎಲ್ಲಾ ಕಾರ್ಯಕ್ರಮದಲ್ಲಿ ಬಾಗವಹಿಸಲು ಶ್ರೀ ಮರಿ ಹುಚ್ಚೇಶ್ವರ ಸ್ವಾಮಿಗಳು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.