Belagavi News In Kannada | News Belgaum

ಬೆನಕನಹಳ್ಳಿ :ವಾರ್ಷಿಕ ಸ್ನೇಹ ಸಮ್ಮೇಳನ

ಬೆಳಗಾವಿ ದಿ 22:- ತಾಲೂಕಿನ ಬೆನಕನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಸನ್ 2021-2022 ನೆಯ ಸಾಲಿನ ವಾರ್ಷಿಕೋತ್ಸವ ಹಾಗೂ ಏಳನೇಯ ವರ್ಗದ ಪ್ರಥಮ ಸಾಲಿನ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ಇತ್ತೀಚೆಗೆ ಜರುಗಿತು
ಎಸ್ ಡಿ ಎಮ್ ಸಿ ಅಧ್ಯಕ್ಷರಾದ ವಿಠ್ಠಲ ಕೋಲಕಾರ ರವರು ಅಧ್ಯಕ್ಷತೆ ವಹಿಸಿದ್ದರು ಮುಖ್ಯಅತಿಥಿ ಗಳಾಗಿ ತಾಲೂಕಾ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಸವರಾಜ ಸುಣಗಾರ ಆಗಮಿಸಿ ಮಾತನಾಡಿ ಗಡಿಭಾಗದಲ್ಲಿರುವ ಬೆನಕನಹಳ್ಳಿ ಕನ್ನಡ ಶಾಲೆಯ ಶೈಕ್ಷಣಿಕ ಪ್ರಗತಿಗೆ ಹಾಗೂ ಶಾಲಾ ಸುಧಾರಣೆಗಾಗಿ ಶ್ರಮ ವಹಿಸುತ್ತಿರುವ ಶಿಕ್ಷಕಿಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು
ಶಾಲಾ ಮುಖ್ಯ ಶಿಕ್ಷಕಿಯರಾದ ಶ್ರೀಮತಿ ವಿದ್ಯಾವತಿ ಶಿರೋಳ ರವರು ಶಾಲೆಯ ಪ್ರಗತಿಯ ವರದಿ ಮಂಡಿಸಿ ಶಾಲೆ ನಡೆದು ಬಂದ ದಾರಿ ವಿವರಿಸಿದರು
ಶಿಕ್ಷಕಿಯರಾದ ಶ್ರೀಮತಿ ಎಸ್ ಎಸ್ ಮಾಳಗಿ ಯವರು ವಿದ್ಯಾರ್ಥಿಗಳಿಗೆ ಹಿತ ನುಡಿ ಹೇಳಿ ಶುಭಕೋರಿದರು
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿದವು
ಹಳೆಯ ವಿದ್ಯಾರ್ಥಿಗಳಿoದ ಶಿಕ್ಷಕಿಯರಿಗೆ ಸನ್ಮಾನ ಜರುಗಿದವು
ಶಿಕ್ಷಕಿಯರಾದ ಆರ್ ವಿ ಭಟ್ ರವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು
ಕಾರ್ಯಕ್ರಮದಲ್ಲಿ ಪಾಲಕರು, ಸಂಘ ಸಂಸ್ಥೆ ಪದಾಧಿಕಾರಿಗಳು, ಮರಾಠಿ ಶಾಲೆಯ ಶಿಕ್ಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು