ಸಾರ್ವತ್ರಿಕ ಲಸಿಕಾ ಹಾಗೂ ಜಾಗೃತಿ ಕಾರ್ಯಕ್ರಮ

ಬೆಳಗಾವಿ, : ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಹಾಗೂ ನ್ಯುಮೋನಿಯಾ ತಟಸ್ಥಗೊಳಿಸಲು ಸಾಮಾಜಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲೆಯ ತಾಲೂಕು ಆರೋಗ್ಯಾಧಿಕಾರಿಗಳಿಗೆ,ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಿಗೆ, ಚಿಕ್ಕ ಮಕ್ಕಳ ತಜ್ಞ ವೈದ್ಯರು ಗಳಿಗೆ, ವೈದ್ಯಾಧಿಕಾರಿಗಳಿಗೆ ಹಾಗೂ ಶುಶ್ರೂಷಣಾಧಿಕಾರಿಗಳಿಗೆ ಜಿಲ್ಲಾಮಟ್ಟದ ಕಾರ್ಯಾಗಾರ ಬುಧವಾರ (ಮಾ.22) ಸುವರ್ಣ ವಿಧಾನ ಸೌಧದಲ್ಲಿ ನಡೆಯಿತು.
ನ್ಯುಮೋನಿಯಕ್ಕೆ ಲಸಿಕೆ ಲಭ್ಯವಿದ್ದು, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ ಎಂದು ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಎಸ್.ಎಸ್.ಗಡೇದ ಅವರು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಅಧಿಕಾರಿ ಹಾಗೂ ಲಸಿಕಾ ಅಧಿಕಾರಿಗಳಾದ ಡಾ.ಐ.ಪಿ ಗಡಾದ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕ್ರೀಯಾಯೋಜನೆ, ಶೀತಲ ಸರಪಳಿ ನಿರ್ವಹಣೆ ಮಕ್ಕಳ ಆರೋಗ್ಯ ನಿರ್ವಹಣೆ ಕುರಿತು ತಿಳಿಸಿದರು.
Wಊಔ ಸರ್ವೆಕ್ಷಣಾ ವೈಧ್ಯಾಧಿಕಾರಿಗಳಾದ ಡಾ. ಸಿದ್ದಲಿಂಗಯ್ಯ ಬೆಳಗಾವಿ ವೃತ್ತ ಸಾರ್ವತ್ರಿಕ ಲಸಿಕೆ ಕುರಿತು ಮಾತನಾಡಿದರು.
ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ಶಿವಾನಂದ ಮಾಸ್ತಿಹೊಳಿ, ನ್ಯುಮೋನಿಯಾ ಮುಂಜಾಗ್ರತೆ ಕ್ರಮಗಳ ಕುರಿತು ಮಾತನಾಡಿದರು ಹಾಗೂ ಡಾ. ರಾಜಶ್ರಿ ಪಾಟೀಲ ಅವರು ಲಸಿಕಾಕರಣದಲ್ಲಿ ಆಗುವ ವೈದ್ಯಕೀಯ ತ್ಯಾಜ್ಯಗಳ ನಿರ್ವಹಣೆ ಮತ್ತು ವಿಲೆವಾರಿ ಕುರಿತು ಮಾತನಾಡಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಸವರಾಜ ಯಲಿಗಾರ ಸಮುದಾಯದಲ್ಲಿ ಆರೋಗ್ಯ ಶಿಕ್ಷಣ ಕುರಿತು ಉಪನ್ಯಾಸ ನೀಡಿದರು. ಕಾರ್ಯಗಾರದಲ್ಲಿ ಎಚ್.ಎನ್.ಎಂ ಸಿಬ್ಬಂದಿಗಳು ಉಪಸ್ಥಿತರಿದ್ದರು.