Belagavi News In Kannada | News Belgaum

ಕರ್ನಾಟಕ ಮಹಾರಾಷ್ಟ್ರ ಗಡಿವಿವಾದವನ್ನು ಮಹಾರಾಷ್ಟ್ರ ಮತ್ತೆ ಕೆದಕಿದ್ದು ನಿನ್ನೆ ಸೋಮವಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಸ್ತ್ರತವಾಗಿ ಚರ್ಚಿಸಲಾಗಿದೆ

ಕಳೆದ 18 ವರ್ಷಗಳಿಂದ
ಸರ್ವೋನ್ನತ ನ್ಯಾಯಾಲಯದ ಮುಂದೆ
ಬಾಕಿಯಿರುವ ಕರ್ನಾಟಕ ಮಹಾರಾಷ್ಟ್ರ
ಗಡಿವಿವಾದವನ್ನು ಮಹಾರಾಷ್ಟ್ರ
ಮತ್ತೆ ಕೆದಕಿದ್ದು ನಿನ್ನೆ ಸೋಮವಾರ
ಮಹಾರಾಷ್ಟ್ರ ವಿಧಾನಸಭೆಯಲ್ಲಿ
ವಿಸ್ತ್ರತವಾಗಿ ಚರ್ಚಿಸಲಾಗಿದೆ.ಅಲ್ಲದೇ
ಕರ್ನಾಟಕ ಸರಕಾರ ಮತ್ತು ಕನ್ನಡಿಗರ
ವಿರುದ್ಧ ವಾಗ್ದಾಳಿ ಮಾಡಲಾಗಿದೆ.ಅಲ್ಲಿ
ಇಬ್ಬರು ಗಡಿ ಉಸ್ತುವಾರಿ ಸಚಿವರಿದ್ದರೆ
ನಮ್ಮಲ್ಲಿ ಒಬ್ಬರೂ ಇಲ್ಲ.ಅಲ್ಲಿಯ
ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ
ಉಚ್ಚಾಧಿಕಾರ ಸಮಿತಿ ಅಸ್ತಿತ್ವದಲ್ಲಿದೆ.ಇಲ್ಲಿ
ಗಡಿವಿವಾದವನ್ನು ಕೇಳುವವರೇ ಇಲ್ಲ.
ಮೇಕೆದಾಟು ಯೋಜನೆಗೆ
ಅನುಮತಿ ನೀಡಲೇಬಾರದೆಂದು
ನಿನ್ನೆಯೇ ತಮಿಳುನಾಡು ವಿಧಾನ ಸಭೆ
ನಿರ್ಣಯವೊಂದನ್ನು ಅಂಗೀಕರಿಸಿದೆ.
ಇದು ಕರ್ನಾಟಕದ ಹಿತಾಸಕ್ತಿಗೆ
ವಿರುದ್ಧವಾದ ಹೆಜ್ಜೆಯಾಗಿದೆ.
ಗಡಿವಿವಾದ ಸಂಬಂಧ ಮಹಾರಾಷ್ಟ್ರ
ಹಾಗೂ ಜಲವಿವಾದಗಳ ಸಂಬಂಧ
ತಮಿಳುನಾಡು ಮತ್ತು ಗೋವೆ ರಾಜ್ಯಗಳು
ಕರ್ನಾಟಕದ ವಿರುದ್ಧ ಸಮರವನ್ನೇ
ಸಾರುತ್ತಿವೆ.ಈ ಸಂದರ್ಭದಲ್ಲಿ ಸದ್ಯ
ನಡೆದಿರುವ ರಾಜ್ಯ ವಿಧಾನ
ಮಂಡಲದ ಅಧಿವೇಶನದಲ್ಲಿಯೇ
ಗಂಭೀರ ಚರ್ಚೆ ನಡೆದು ನಿರ್ಣಯಗಳನ್ನು
ಸರ್ವಾನುಮತದಿಂದ ಅಂಗೀಕರಿಸಬೇಕು.
ಈ ಮೂಲಕ ಮಹಾರಾಷ್ಟ್ರ ಮತ್ತು
ತಮಿಳುನಾಡುಗಳಿಗೆ ತಕ್ಕ ಉತ್ತರ
ನೀಡಬೇಕು.
ಹಿಂದಿನ ಸಿದ್ದರಾಮಯ್ಯ ಸರಕಾರದ ಅವಧಿ ಮುಗಿದ ನಂತರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಕುಮಾರಸ್ವಾಮಿ,
ಯಡಿಯೂರಪ್ಪ ಹಾಗೂ ಬೊಮ್ಮಾಯಿ
ಸರಕಾರಗಳಲ್ಲಿ ಗಡಿ ಉಸ್ತುವಾರಿ
ಸಚಿವರುಗಳೇ ಇಲ್ಲ. ಬೆಂಗಳೂರಿನಲ್ಲಿರುವ
ಗಡಿ ಸಂರಕ್ಷಣಾ ಆಯೋಗ ಮತ್ತು
ಗಡಿ ಅಭಿವೃದ್ಧಿ ಪ್ರಾಧಿಕಾರ ಕಚೇರಿಗಳನ್ನು ಬೆಳಗಾವಿಯ ಸುವರ್ಣಸೌಧಕ್ಕೆ
ಸ್ಥಳಾಂತರಿಸಬೇಕು.
ಕರ್ನಾಟಕದ ಗಡಿಯಲ್ಲಿರುವ
ಮರಾಠಿಗರ ಮೇಲೆ ದೌರ್ಜನ್ಯ
ನಡೆಯುತ್ತಿದೆಯೆಂದು ಶಿವಸೇನೆ
ಸಂಸದ ಸಂಜಯ ರಾವತ್ ಅವರು
ಭಾಷಾ ಸೌಹಾರ್ದವನ್ನು ಹಾಳು
ಮಾಡುತ್ತಿದ್ದು ಅವರ ವಿರುದ್ಧ
ಕರ್ನಾಟಕ ಸರಕಾರ ಪ್ರಕರಣವನ್ನು
ದಾಖಲಿಸಬೇಕು.

ಅಶೋಕ ಚಂದರಗಿ ಒತ್ತಾಯಿಸಿದ್ದಾರೆ