Belagavi News In Kannada | News Belgaum

ಅರಣ್ಯ, ಜಲ ಪರಸ್ಪರ ಪೂರಕ  ವಿಶ್ವ ಅರಣ್ಯ,ಜಲ ದಿನಾಚರಣೆ ಯಲ್ಲಿ ಐ.ಎಫ್.ಎಸ್ ನಿವೃತ್ತ ಅರಣ್ಯಾಧಿಕಾರಿ ಬಸವರಾಜ ಪಾಟೀಲ ಅಭಿಮತ.

ಬೆಳಗಾವಿ. ೨೩.-  ವಿಶ್ವದ ಉಳಿವಿಗೆ  ಅರಣ್ಯ ಮತ್ತು ಜಲದ ಕೊಡುಗೆ ಅತ್ಯಮೂಲ್ಯ.  ಅವುಗಳ ಬಗ್ಗೆ ನಿರ್ಲಕ್ಷ್ಯ ಸಲ್ಲ ದು .  ಅರಣ್ಯ ಮತ್ತು  ಜಲ  ಒಂದಕ್ಕೊಂದು  ಪೂರಕ. ಎಂದು ಹಿರಿಯ  ಐ.ಎಫ್.ಎಸ್.   ನಿವೃತ್ತ  ಮುಖ್ಯ ಅರಣ್ಯಾಧಿಕಾರಿ  ಬಸವರಾಜ ಪಾಟೀಲ  ಹೇಳಿದರು.
ಅವರು  ಮಂಗಳವಾರ ಸಂಜೆ   ರಾಮತೀರ್ಥನಗರದಲ್ಲಿ ಸ್ನೇಹ ಸಮಾಜ  ಸೇವಾ ಸಂಘ ಮತ್ತು  ವನ್ಯಜೀವಿ, ಪರಿಸರ ಅಭಿವೃದ್ಧಿ ವೇದಿಕೆ ಗಳ  ಸಂಯುಕ್ತಾಶ್ರಯದಲ್ಲಿ  ಜರುಗಿದ   ವಿಶ್ವ ಅರಣ್ಯ ಮತ್ತು  ಜಲ ದಿನಾಚರಣೆ ಯಲ್ಲಿ  ಉದ್ಘಾಟಕರಾಗಿ  ಪಾಲ್ಗೊಂಡು ಸಸಿ ನೆಟ್ಟು   ಮಾತನಾಡಿದರು.
  ಬೃಹ್ಮಾಂಡದಲ್ಲಿ  ನೀರು  ೭೫ ರಷ್ಟಿದ್ದು ಬಳಕೆಗೆ  ಬಾರದು. ಕೇವಲ ಅಲ್ಪ ಭಾಗದ ನೀರು  ನಮ್ಮ ಬಳಕೆಗಿದ್ದು   ನೀರನ್ನು  ಜಾಗರೂಕರಾಗಿ  ಬಳಸಬೇಕು.   ಜಗತ್ತು ನಮ್ಮ ಮುಂದಿನ ಪೀಳಿಗೆಯ ಅತಿ ದೊಡ್ಡ ಆಸ್ತಿ  ಅದನ್ನು  ಸುರಕ್ಷಿತವಾಗಿ   ಕೊಡುವ ಹೊಣೆಗಾರಿಕೆ ನಮ್ಮದಾಗಿದೆ  ಎಂದರು. ನಾವು  ಮಾಡುವ ಸತ್ಕಾರ್ಯಗಳಿಂದ  ಮಾತ್ರ ಜನ ಮನದಲ್ಲಿ  ಶಾಶ್ವತ  ನಿಲ್ಲಲು ಸಾಧ್ಯ. ಅದನ್ನು  ನಿವೃತ್ತ  ಪ್ರಾಚಾರ್ಯ   ಡಾ.ಎ.ಎಲ್.ಪಾಟೀಲ  ಮಾಡಿದ್ದಾರೆ   ಎಂದರು.
ನಗರ ಸೇವಕ   ನ್ಯಾಯವಾದಿ  ಹನುಮಂತ  ಕೊಂಗಾಲಿ  ಮಾತನಾಡಿ, ಪ್ರದೇಶಾಭಿವೃದ್ಧಿ ಗೆ  ನಾನು ಸದಾ ಹೆಗಲು  ಕೊಡಲು  ಸಿದ್ಧ .. ನನ್ನ ಮೇಲಿನ   ಜನತೆಯ  ಭರವಸೆಗೆ ತಕ್ಕ  ಕಾರ್ಯ ಮಾಡಿ  ಜನರ ಋಣ  ತೀರಿಸುವೆ  ಎಂದರಲ್ಲದೆ,  ರಾಮತೀರ್ಥನಗರ  ಅಭಿವೃದ್ಧಿ ಗೆ  ಶಾಸಕ  ಅನಿಲ ಬೆನಕೆ  ಹಗಲಿರುಳು ಶ್ರಮಿಸುತ್ತಿದ್ದು   ಸದ್ಯದಲ್ಲಿ   ಗ್ರಂಥಾಲಯ ಸುಸಜ್ಜಿತವಾಗಿಸಿ  ಇಲ್ಲಿಯ  ಓದುಗ ಜನರ   ಬಹುದಿನಗಳ  ಬೇಡಿಕೆಯನ್ನು  ಈಡೇರಿಸಲಿದ್ದಾರೆ   ಎಂದರು. ಹಲವಾರು  ಅಭಿವೃದ್ಧಿ ಪರ  ಯೋಜನೆಗಳು ಚಾಲನೆ ಪಡೆಯಲಿದ್ದು ಪೂರಕ ನೀಲ ನಕ್ಷೆ ಸಿದ್ಧವಾಗಿದೆ  ಎಂದರು.
 ಇದೇ   ಸಂದರ್ಭದಲ್ಲಿ ಸ್ಥಳೀಯ  ಶ್ರೀ ಸಿಧ್ಧರಾಮೇಶ್ವರ ಶಿಕ್ಷಣ ಸಂಸ್ಥೆ ಯ  ಮಹಿಳಾ  ಬಿ.ಎಡ್ ಕಾಲೇಜಿನ ಪ್ರಾಂಶುಪಾಲ, ಡಾ. ಎ.ಎಲ್.ಪಾಟೀಲ  ಅವರನ್ನು  ಸನ್ಮಾನಿಸಲಾಯಿತು. ಸನ್ಮಾನುಕ್ಕತ್ತವಾಗಿ  ಮಾತನಾಡಿದ  ಡಾ. ಎ.ಎಲ್.ಪಾಟೀಲ ಅವರು,   ನೀರು, ಅರಣ್ಯ ಇವುಗಳ ಸಂರಕ್ಷಣೆ  ನಮ್ಮ ಆದ್ಯ ಕರ್ತವ್ಯ.  ಇವುಗಳು  ಇಲ್ಲದಿದ್ದರೆ ಮನುಕುಲಕ್ಕೆ  ಉಳಿಗಾಲವಿಲ್ಲ.   ಪರಿಸರ, ನೀರು, ಅರಣ್ಯ  ಇವೆಲ್ಲವುಗಳು  ನಮ್ಮ ಉಸಿರಿನ  ಪ್ರತೀಕ  ಎಂದರಲ್ಲದೆ ಸನ್ಮಾನಿಸಿದ  ಸಂಘಕ್ಕೆ  ಧನ್ಯವಾದ ಅರ್ಪಿಸಿದರು.
ಮಾಜಿ ಮಹಾಪೌರ, ಎನ್.ಬಿ.ನಿರ್ವಾಣಿ,  ಸಂಘದ ಅಧ್ಯಕ್ಷ  ಸುರೇಶ  ಉರಬಿನಹಟ್ಟಿ,    ಪ್ರಧಾನ ಕಾರ್ಯದರ್ಶಿ, ಡಿ.ಎನ್.ಮಿಸಾಳೆ, ಜಗದೀಶ್ ಮಠದ  ವೇದಿಕೆಯಲ್ಲಿದ್ದರು.
ಸಂಘದ  ಪದಾಧಿಕಾರಿಗಳಾದ ಎಸ್.ಜಿ.ಕಮತ, ವಿಲಾಸ ಕೆರೂರ,  ಡಿ.ಎಮ್.ಟೊಣ್ಣೆ,  ಡಿ.ಬಿ.ಉಳ್ಳೇಗಡ್ಡಿ, ಬಸವರಾಜ ಗೌಡಪ್ಪಗೋಳ,  ಜಿ.ಎಸ್.ಹಿರೇಮಠ, ಮಹೇಶ ಚಿಟಗಿ, ಮಲ್ಹಾರ ದಿಕ್ಷೀತ, ಸಿ.ಎಸ್.ಖನಗಣ್ಣಿ, ಬಿ.ಎಮ್.  ಮೋದಗಿ,  ಪ್ರೊ.ಎ.ಕೆ.ಪಾಟೀಲ, ಎನ್.ಬಿ.ಹನ್ನಿಕೇರಿ, ಕಲ್ಲಪ್ಪಾ ಮಜಲಟ್ಟಿ,  ಕಾಜಗಾರ,  ಐ.ಬಿ.ನಿರ್ವಾಣಿ, ಎಸ್.ಎಮ್. ಮೇಲಿನಮನಿ,  ಅನಂತ ಹನ್ನಿಕೇರಿ, ಸೇರಿದಂತೆ  ಹಿರಿಯರು,  ಯುವಕರು,
ಸಂಘದ ಸದಸ್ಯರು  ಉಪಸ್ಥಿತರಿದ್ದರು. ಪ್ರೊ.ಎ.ಕೆ.ಪಾಟೀಲ  ನಿರೂಪಿಸಿದರು.  ಸಂಘದ  ಅಧ್ಯಕ್ಷ  ಸುರೇಶ ಉರಬಿನಹಟ್ಟಿ  ಸ್ವಾಗತಿಸಿ, ಪರಿಚಯಿಸಿದರಲ್ಲದೆ,  ಪ್ರಾಸ್ತಾವಿಕ  ಸಂಘದ ಕಾರ್ಯಚಟುವಟಿಕೆ ಕುರಿತು  ಮಾತನಾಡಿದರು.   ಜಿ.ಐ.ದಳವಾಯಿ  ಪ್ರಾರ್ಥಿಸಿದರು.  ಆರ್.ಜಿ. ಮೆಳವಂಕಿ  ವಂದಿಸಿದರು.
Attachments area