Belagavi News In Kannada | News Belgaum

ಒಂದು ದಶಕದಲ್ಲಿ 1 ಲಕ್ಷ ಯಶಸ್ವಿ ಐವಿಎಫ್ ಯಶೋಗಾಥೆ ಸಾಧಿಸಿದ ಮೊದಲ ವಿಶೇಷ ಸರಣಿಯಾಗಿ ಇಂದಿರಾ ಐವಿಎಫ್

 

ಹುಬ್ಬಳ್ಳಿ : ಬಂಜೆತನ ಚಿಕಿತ್ಸಾ ಆಸ್ಪತ್ರೆಗಳ ಭಾರತದ ಪ್ರಮುಖ ಸರಪಳಿಯಾಗಿರುವ ಇಂದಿರಾ ಐವಿಎಫ್ 1,00,000 ಯಶಸ್ವಿ ಐವಿಎಫ್ ಯಶೋಗಾಥೆಗಳನ್ನು ಸಾಧಿಸಿದೆ. ಇದು 10 ವರ್ಷಗಳ ಅವಧಿಯಲ್ಲಿ ಈ ಮೈಲಿಗಲ್ಲನ್ನು ಮುಟ್ಟಿದದೇಶದ ಮೊದಲ ಐವಿಎಫ್ ಏಕ-ವಿಶೇಷ ಸರಣಿಯಾಗಿದ್ದು, ಎಲ್ಲರಿಗೂ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಪ್ರಾಮುಖ್ಯತೆಯನ್ನು ಇದು ಒತ್ತಿಹೇಳುತ್ತದೆ. ಸಂಸ್ಥೆಯ ಪ್ರಕಾರ, ತನ್ನ ಕೇಂದ್ರಗಳಿಗೆ ಭೇಟಿ ನೀಡುವ ಎಲ್ಲಾ ಮಹಿಳಾ ರೋಗಿಗಳಲ್ಲಿ, ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್ (ಪಿಸಿಓಎಸ್) ಮತ್ತು ಬ್ಲಾಕ್ಡ್ ಫಾಲೋಪಿಯನ್ ಟ್ಯೂಬ್‍ಗಳು ಬಂಜೆತನದ ಎರಡು ಪ್ರಮುಖ ಕಾರಣಗಳಾಗಿವೆ, ಆದರೆ, ಕಡಿಮೆ ವೀರ್ಯಾಣು ಸಂಖ್ಯೆಯು ಹೆಚ್ಚಿನ ಸಂಖ್ಯೆಯ ಪುರುಷ ಬಂಜೆತನ ಪ್ರಕರಣಗಳಿಗೆ ಕಾರಣವಾಗಿದೆ.

ನಿರ್ದಿಷ್ಟ ಉದ್ದೇಶಚಾಲಿತ ಸಂಸ್ಥೆಯಾಗಿ, ಇಂದಿರಾ ಐವಿಎಫ್‍ದೇಶದ ಮೂಲೆಮೂಲೆಯ ಪ್ರದೇಶಗಳಿಗೂ ಗುಣಮಟ್ಟದ ಚಿಕಿತ್ಸೆಯ ಪ್ರವೇಶ ಲಭ್ಯತೆ ಬಗ್ಗೆ ಒತ್ತು ನೀಡಿದೆ. ಸಂಸ್ಥೆಯುದೇಶಾದ್ಯಂತ 742 ದೈಹಿಕಆರೋಗ್ಯ ಶಿಬಿರಗಳನ್ನು ನಡೆಸುವ ಮೂಲಕ 60,000 ದಂಪತಿಗಳಿಗೆ ಶಿಕ್ಷಣ ನೀಡಿದೆ. ಕೋವಿಡ್- 19 ಅವಧಿಯಲ್ಲಿ ಸಹ, ಡಿಜಿಟಲ್ ಏಕೀಕರಣ ಮತ್ತು ವೈಯಕ್ತಿಕಗೊಳಿಸಿದ ಸಮಾಲೋಚನೆಯೊಂದಿಗೆ ಈ ಪ್ರಯತ್ನಗಳು ಮುಂದುವರಿದವು. 107 ಕೇಂದ್ರಗಳೊಂದಿಗೆ, ಅದರ ಶೇಕಡ 50 ಕ್ಕಿಂತ ಹೆಚ್ಚು ಕೇಂದ್ರಗಳು ಶ್ರೇಣಿ 2 ಮತ್ತು ಶ್ರೇಣಿ 3 ಸ್ಥಳಗಳಲ್ಲಿ ನೆಲೆಗೊಂಡಿವೆ, ಬಂಜೆತನದ ವೈದ್ಯಕೀಯ ಚಿಕಿತ್ಸೆಗಳ ಕುರಿತುಅರಿವಿನೊಂದಿಗೆ ಚದುರಿ ಹೋಗಿರುವ ಸಮುದಾಯವನ್ನು ಸಂಸ್ಥೆ ಸಶಕ್ತಗೊಳಿಸುತ್ತದೆ ಮತ್ತುತಾಂತ್ರಿಕವಾಗಿ ಬೆಂಬಲಿತಚಿಕಿತ್ಸೆಗೆ ಸುಲಭ ಲಭ್ಯತೆಯನ್ನು ಒದಗಿಸುತ್ತವೆ.

ದಶಕದ ಪ್ರಯಾಣವನ್ನು ಪ್ರತಿಬಿಂಬಿಸಿದ, ಇಂದಿರಾ ಐವಿಎಫ್ ಗ್ರೂಪ್‍ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಡಾ. ಅಜಯ್ ಮುರ್ದಿಯಾ ಅವರು, 2011 ರಲ್ಲಿಚಿಕ್ಕ ಮಗು ನವ್ಯಾ ಈ ಜಗತ್ತಿಗೆ ಬಂದಾಗ ನಮ್ಮ ಮೊದಲ ಯಶಸ್ಸಿನ ಕಥೆ ಕೂಡಾ ಜನನವಾಯಿತು. ಅಂದಿನ ಒಂದು ಜೀವದಿಂದ ಇಂದು ಒಂದು ದಶಕದ ಬಳಿಕ 1 ಲಕ್ಷದವರೆಗೆ ಈ ಪಯಣ ಮುಂದುವರಿದಿದೆ. ತಮ್ಮ ಕುಟುಂಬವನ್ನು ಬೆಳೆಸುವಲ್ಲಿ ಸವಾಲುಗಳನ್ನು ಎದುರಿಸುವ ದಂಪತಿಗಳಿಗೆ ಸಹಾಯ ಮಾಡುವ ನಮ್ಮ ದೃಷ್ಟಿಯಲ್ಲಿ ನಾವು ಎಷ್ಟು ದೂರ ಬಂದಿದ್ದೇವೆ ಎಂಬುದನ್ನು ನೋಡಲು ನನಗೆ ಅಪಾರ ಸಂತೋಷ ಆಗುತ್ತಿದೆ ಹೇಳಿದರು.

ಇಂದಿರಾ ಐವಿಎಫ್ ನ ಸಿಇಓ ಮತ್ತು ಸಹ-ಸಂಸ್ಥಾಪಕ ಡಾ. ಕ್ಷಿತಿಜ್ ಮುರ್ದಿಯಾ ಅವರು, ಈ ಎಲ್ಲಾ ಯಶಸ್ಸಿನ ಕಥೆಗಳು ಯಶಸ್ವಿ ಕ್ಲಿನಿಕಲ್ ಫಲಿತಾಂಶಗಳ ಮೇಲೆ ನಮ್ಮಗಮನದ ಸಾಮೂಹಿಕ ಜ್ಞಾಪನೆಯಾಗಿದೆ. ನಮ್ಮ ಗುರಿಗಳನ್ನು ಸಾಧಿಸುವಲ್ಲಿ ನಮ್ಮ ವಿಶ್ವದರ್ಜೆಯ ತಂತ್ರಜ್ಞಾನವು ವೇಗವರ್ಧಕವಾಗುವುದನ್ನು ನಾವು ಖಚಿತಪಡಿಸಿಕೊಂಡಿದ್ದೇವೆ. ಇದಲ್ಲದೆ, ಇತ್ತೀಚಿನ ಆರೋಗ್ಯತಂತ್ರ ಜ್ಞಾನವನ್ನು ಪರಿಚಯಿಸುವ ಮೂಲಕ ನಾವು ಕಡಿಮೆ ಸಮಯದಲ್ಲಿ ನಮ್ಮ ಸಾಂಸ್ಥಿಕ ಪರಿಣತಿಯನ್ನು ಮಾರ್ಪಡಿಸಿದ್ದೇವೆ ಎಂದು ವಿವರಿಸಿದರು.