Belagavi News In Kannada | News Belgaum

ಕ್ಷುಲಕ ಕಾರಣಕ್ಕೆ ಪತ್ನಿ ಆತ್ಮಹತ್ಯೆಗೆ ಶರಣು

ರಾಮನಗರ: ಪತಿ ದೇವರ ಪ್ರಸಾದ ತರಲಿಲ್ಲ ಎಂಬ ಕಾರಣಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ಜರುಗಿದೆ.ನಗರದ ವಿವೇಕಾನಂದನಗರ ಬಡಾವಣೆಯ ನಿವಾಸಿ ಶಿವನಂಜು ಪತ್ನಿ ಶ್ವೇತಾ (27) ಮೃತರು.

ವಿವೇಕಾನಂದ ನಗರ ಬಡಾವಣೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಗಂಡ ಶಿವನಂಜು ಪುತ್ರನೊಂದಿಗೆ ಸೋಮವಾರ ಮಲೆ ಮಹದೇಶ್ವರ ಬೆಟ್ಟಕ್ಕೆ ಹರಕೆ ತೀರಿಸಲು ಹೋಗಿದ್ದರು.

ಆತ ದೇವರ ಪ್ರಸಾದ ತರಲಿಲ್ಲ ಎಂಬ ಕಾರಣಕ್ಕೆ ಶ್ವೇತಾ ಜಗಳವಾಡಿ, ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಪತಿ, ಮೂವರು ಮಕ್ಕಳನ್ನು ಅಗಲಿದ್ದಾರೆ. ಈ ಕುರಿತು ಐಜೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.