Belagavi News In Kannada | News Belgaum

ವಿಶ್ವ ಜಲ ದಿನಾಚರಣೆ-2022

ನೈಸರ್ಗಿಕ ಸಂಪನ್ಮೂಲ ನಾಶವಾದರೆ ಮಾನವನಿಗೆ ಆಪತ್ತು: ಡಾ.ಎನ್.ಜಿ.ಬಟ್ಟಲ

 

ಬೆಳಗಾವಿ, ಮಾ23 : ನೀರು ಅತ್ಯಂತ ಅಗತ್ಯ ಸಂಪನ್ಮೂಲವಾಗಿದೆ. ನೈಸರ್ಗಿಕ ಸಂಪನ್ಮೂಲದ ನಾಶ ಮಾನವನ ಅವನತಿ ಎಂದೇ ಹೇಳಬಹುದು. ಹೀಗಾಗಿ ಅಂತರ್ಜಲ ಮಟ್ಟ ಕುಸಿಯದಂತೆ ಜಾಗೃತೆವಹಿಸಬೇಕು ಎಂದು ಮನರಸ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎನ್.ಜಿ.ಬಟ್ಟಲ ಅವರು ತಿಳಿಸಿದರು.

ನಗರದಲ್ಲಿ ನೈಸರ್ಗಿಕ ವಿಪತ್ತು ನಿರ್ವಹಣೆ ಮತ್ತು ಕೌಶಲ್ಯ ಅಭಿವೃದ್ಧಿ ಅಧ್ಯಯನ ಕೇಂದ್ರ, ಮೈನಿಂಗ್ ಇಂಜಿನಿಯರಿಂಗ್ ಅಸೊಸಿಯೇಶನ್ ಆಪ್ ಇಂಡಿಯಾ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮನರಸ ಶಿಕ್ಷಣ ಮಹಾವಿದ್ಯಾಲಯ ಮಹಾಂತೇಶ ನಗರ ಮತ್ತು ಭೂ ವಿಜ್ಞಾನ ಪ್ರಾದೇಶಿಕ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಜಲ ದಿನಾಚರಣೆ – 2022 ಆಚರಣೆಯಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಜಲ ನಿರ್ವಹಣೆ ಸಂಸ್ಥೆಯ ಮುಖ್ಯಸ್ಥರಾದ ಡಾ. ಬಿ.ವೆಂಕಟೇಶ್ ಅವರು ನೀರಿನ ಮಹತ್ವದ ಬಗ್ಗೆ ಮಾತನಾಡಿ ಜಲ ಸಂಪನ್ಮೂಲ ಮಾನವ ಜಗತ್ತಿಗೆ ಅತೀ ಅವಶ್ಯಕವಾಗಿದ್ದು ಹಿತ ಮಿತ ಬಳಕೆ ಉತ್ತಮ ಎಂದು ತಿಳಿಸಿದರು.

ಎಂ.ಇ.ಎ.ಐ ಅಧ್ಯಕ್ಷರಾದ ಡಾ.ಪುರಂದರ ಬೆಕಾಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ನೀರಿನ ಕೊರತೆ, ಅಂತರ್ಜಲ ಸಂರಕ್ಷಣೆ ಕುರಿತಾಗಿ ಮಾತನಾಡಿದರು.

ನೀರಿನ ಕುರಿತಾಗಿ ಪರಿಣಾಮಕಾರಿ ಮನವರಿಕೆ ಉದ್ದೇಶದಿಂದ ಸಾಕ್ಷ್ಯಚಿತ್ರ ಪ್ರದರ್ಶನ ದೊಂದಿಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮವನ್ನು ಸಾಗರ ವಾಗಮೂರಿ ನಿರೂಪಿಸಿದರು, ಡಾ. ಜಿ. ಎಮ್. ಪಾಟೀಲ ವಂದಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಣ ಮಹಾವಿದ್ಯಾಲಯ ಪ್ರಶಿಕ್ಷಣಾರ್ಥಿಗಳು ಬೋಧಕರು ಉಪಸ್ಥಿತರಿದ್ದರು.///

‘ಬಾಲಗೌರವ’ ಮತ್ತು ‘ಮಕ್ಕಳ ಪುಸ್ತಕ ಚಂದಿರ’ ಪ್ರಶಸ್ತಿ: ಅರ್ಜಿ ಆಹ್ವಾನ

ಬೆಳಗಾವಿ, ಮಾ.23  : ಕರ್ನಾಟಕÀ ಬಾಲವಿಕಾಸ ಅಕಾಡೆಮಿಯಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿಶೇಷ ಸಾಧನೆಗೈದ 18 ವರ್ಷದ ಒಳಗಿನ ಮಕ್ಕಳಿಗೆ “ಬಾಲಗೌರವ” ಪ್ರಶಸ್ತಿ ಹಾಗೂ ಮಕ್ಕಳ ಕುರಿತಾಗಿರುವ ಪುಸ್ತಕಗಳಿಗೆ “ಮಕ್ಕಳ ಪುಸ್ತಕ ಚಂದಿರ” ಪ್ರಶಸ್ತಿ ನೀಡುವುದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಬಾಲ ಗೌರವ ಪ್ರಶಸ್ತಿ:

ಕ್ರೀಡಾ ಕ್ಷೇತ್ರ, ನೃತ್ಯ ಕ್ಷೇತ್ರ, ಸಂಗೀತ ಕ್ಷೇತ್ರ, ಸಾಹಿತ್ಯ ಕ್ಷೇತ್ರ, ಕರಕುಶಲ ಕ್ಷೇತ್ರ, ಚಿತ್ರಕಲೆ ಕ್ಷೇತ್ರ, ಬಹುಮುಖ ಪ್ರತಿಭೆ, ನಾಟಕ ಕ್ಷೇತ್ರ ಹೀಗೆ 08 ಕ್ಷೇತ್ರಗಳಲ್ಲಿ ಅಸಾಧಾರಣಾ ಸಾಧನೆಯನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಾಡಿದ 18 ವರ್ಷದ ಒಳಗಿನ ಮಕ್ಕಳಿಂದ “ಬಾಲಗೌರವ ಪ್ರಶಸ್ತಿ’ ಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸದರಿ ಪ್ರಶಸ್ತಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿಶೇಷ ಸಾಧನೆಗೈದ ಪ್ರಶಸ್ತಿಪುರಸ್ಕøತ ಮಗುವಾಗಿರಬೇಕು. ಮಕ್ಕಳು ಅಕಾಡೆಮಿ ಬಾಲಗೌರವ ಪ್ರಶಸ್ತಿಗಾಗಿ ತಮ್ಮ ಸ್ವಯಂ ದೃಢೀಕೃತ ನಕಲು ದಾಖಲೆಗಳೊಂದಿಗೆ ಹಾಗೂ ಸ್ವವಿವರಗಳನ್ನೊಳಗೊಂಡ ಮನವಿಯೊಂದಿಗೆ ಅರ್ಜಿಯನ್ನು ಮಾರ್ಚ್ 31ರೊಳಗಾಗಿ ಯೋಜನಾಧಿಕಾರಿಗಳು, ಕರ್ನಾಟಕ ಬಾಲವಿಕಾಸ ಅಕಾಡೆಮಿ, ಚಂದ್ರಕಾ ಲೇಔಟ್ ಹಿಂಭಾಗ, ಕೆ.ಎಚ್.ಬಿ. ಕಾಲೋನಿ, ಲಕಮನಹಳ್ಳಿ ಧಾರವಾಡ-580004 ಇಲ್ಲಿಗೆ ಕಳುಹಿಸುವುದು. ತದನಂತರ ಬರುವ ಅರ್ಜಿಗಳನ್ನು ಪ್ರಶಸ್ತಿಯ ಆಯ್ಕೆಗಾಗಿ ಪರಿಗಣಿಸಲಾಗುವುದಿಲ್ಲ. ಅರ್ಜಿ ಸಲ್ಲಿಸುವಾಗ ‘ಅಕಾಡೆಮಿ ಬಾಲಗೌರವ ಪ್ರಶಸ್ತಿಗಾಗಿ ಅಜಿ’ ಎಂದು ಲಕೋಟೆ ಮೇಲೆ ನಮೂದಿಸಿರಬೇಕು.

ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿ:

ಕರ್ನಾಟಕ ಬಾಲವಿಕಾಸ ಅಕಾಡೆಮಿಯು 2019, 2020 ಹಾಗೂ 2021 ನೇ ಸಾಲಿನಲ್ಲಿ ಮಕ್ಕಳ ಕ್ಷೇತ್ರದಲ್ಲಿ ರಚಿಸಲ್ಪಟ್ಟ ಆಯ್ದ ಉತ್ತಮ ಪುಸ್ತಕಗಳಿಗೆ “ಮಕ್ಕಳ ಪುಸ್ತಕ ಚಂದಿರ”À ಪ್ರಶಸ್ತಿಯನ್ನು ಪ್ರದಾನÀ ಮಾಡಲು ಉದ್ದೇಶಿಸಲಾಗಿದೆ. ಆದ್ದರಿಂದ ಆಯಾ ಸಾಲಿನ ಅವಧಿಯಲ್ಲಿ ಅಂದರೆ ಜನೇವರಿಯಿಂದ ಡಿಸೆಂಬರ ತಿಂಗಳ ಅಂತ್ಯದ ಅವಧಿಯಲ್ಲಿ ಪ್ರಕಟಗೊಂಡ ಸ್ವರಚಿತ ಕವನ ಸಂಕಲನ, ಕಥಾ ಸಂಕಲನ, ನಾಟಕ, (ಪಠ್ಯಾಧಾರಿತ ಬಿಟ್ಟು) ಮಕ್ಕಳ ಕಾದಂಬರಿ, ವೈಜ್ಞಾನಿಕ ಲೇಖನಗಳ ಸಂಕಲನ, ಅನುವಾದಿತ ಕೃತಿ (ಯಾವುದೇ ಪ್ರಕಾರದ ಮಕ್ಕಳ ಸಾಹಿತ್ಯ) ಮಕ್ಕಳ ಸಾಹಿತ್ಯ ವಿಮರ್ಶಾ ಕೃತಿ ಹೀಗೆ ಏಳು ಪ್ರಕಾರದ ಮಕ್ಕಳ ಸಾಹಿತ್ಯದ ಕೃತಿಗಳನ್ನು ಪ್ರಶಸ್ತಿಗಾಗಿ ಆಹ್ವಾನಿಸಲಾಗಿದೆ. ಆದ್ದರಿಂದ ಈ ಮೇಲ್ಕಾಣಿಸಿದ ಕ್ಷೇತ್ರಗಳಲ್ಲಿ ಪ್ರಕಟಗೊಂಡ ಪುಸ್ತಕಗಳನ್ನು ಪ್ರಶಸ್ತಿಗಾಗಿ ಪರಿಗಣಿಸಲು/ಮೌಲ್ಯಮಾಪನಗೊಳಿಸಲು ಪ್ರತಿಯೊಂದು ಕೃತಿಯ 4 ಪ್ರತಿಗಳನ್ನು ಸಲ್ಲಿಸಬಹುದು. ಮಾರ್ಚ್ 31ರೊಳಗಾಗಿ ಯೋಜನಾಧಿಕಾರಿಗಳು, ಕರ್ನಾಟಕ ಬಾಲವಿಕಾಸ ಅಕಾಡೆಮಿ, ಚಂದ್ರಿಕಾ ಲೇಔಟ್ ಹಿಂಭಾಗ, ಕೆ.ಎಚ್,ಬಿ. ಕಾಲೋನಿ, ಲಕಮನಹಳ್ಳಿ ಧಾರವಾಡ-580004 ಇಲ್ಲಿಗೆ ಕಳುಹಿಸುವುದು. ತದನಂತರ ಬರುವ ಪುಸ್ತಕಗಳನ್ನು ಪ್ರಶಸ್ತಿಯ ಆಯ್ಕೆಗಾಗಿ ಪರಿಗಣಿಸಲಾಗುವುದಿಲ್ಲ. ಪುಸ್ತಕಗಳನ್ನು ಸಲ್ಲಿಸುವಾಗ ‘ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿಗಾಗಿ ಅರ್ಜಿ’ ಎಂದು ಲಕೋಟೆ ಮೇಲೆ ನಮೂದಿಸಿರಬೇಕು.
ಹೆಚ್ಚಿನ ಮಾಹಿತಿಗಾಗಿ ಯೋಜನಾಧಿಕಾರಿಗಳು, ಚಂದ್ರಿಕಾಲೇಔಟ್ ಹಿಂಭಾಗ, ಕೆ.ಎಚ್.ಬಿ. ಕಾಲೋನಿ, ಲಕಮನಹಳ್ಳೀ ಧಾರವಾಡ-580004 ಕಚೇರಿ ದೂರವಾಣಿ ಸಂಖ್ಯೆ:0836-2461666.ನ್ನು ಸಂಪರ್ಕಿಸಬಹುದು ಎಂದು ಬೆಳಗಾವಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///