ಬೆಳಗಾವಿ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಸುಪಾರಿ ನೀಡಿ ಕೊಲ್ಲಿಸಿದವಳು ಅರೆಸ್ಟ್

ಬೆಳಗಾವಿ: 15ರಂದು ಭವಾನಿ ನಗರದಲ್ಲಿ ಬೆಳ್ಳಂಬೆಳಿಗ್ಗೆ ರಸ್ತೆ ಬದಿಯಲ್ಲಿ ವ್ಯಕ್ತಿಯೊಬ್ಬ ಭೀಕರವಾಗಿ ಹತ್ಯೆಯಾಗಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಪ್ರಕರಣಕ್ಕೆ ಇದೀಗ ಇದೇ ಕೇಸ್ನಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರ ಪೈಕಿ ಓರ್ವ ಆರೋಪಿ ಕೊಲೆಯಾದ ವ್ಯಕ್ತಿಯ ಹೆಂಡತಿ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.
ಅಂದಹಾಗೆ ಅಲ್ಲಿ ಕೊಲೆಯಾಗಿದ್ದ ವ್ಯಕ್ತಿ ಹೆಸರು ರಾಜು ದೊಡ್ಡಬೊಮ್ಮನವರ್. ಸುಮಾರು 41 ವರ್ಷದ ರಾಜು, ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು. ಮಾರ್ಚ್ 15ರಂದು ಭವಾನಿ ನಗರದಲ್ಲಿ ರಾಜು ಹತ್ಯೆಯಾಗಿತ್ತು. ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು, ರಾಜು ಕಣ್ಣಿಗೆ ಖಾರದಪುಡಿ ಎರಚಿ, ಚಾಕುವಿನಿಂದ ಹತ್ತಕ್ಕೂ ಹೆಚ್ಚು ಬಾರಿ ಇರಿದು, ಕೊಲೆ ಮಾಡಿ ಪರಾರಿಯಾಗಿದ್ದರು̤ ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಬೆಳಗಾವಿ ಗ್ರಾಮಾಂತರ ಠಾಣೆ ಪೊಲೀಸರು, ಆರೋಪಿಗಳ ಬೆನ್ನು ಬಿದ್ದಿದ್ದರು. ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ, ಆರೋಪಿಗಳ ಚಲನವಲನ ದಾಖಲಿಸಿಕೊಂಡಿದ್ದರು.
ಇದೀಗ ಪೊಲೀಸರು ರಾಜು ಹತ್ಯೆ ಕೇಸ್ಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದಾರೆ. ಇದರಲ್ಲಿ ಓರ್ವ ಆರೋಪಿ ಹತ್ಯೆಯಾಗಿದ್ದ ರಾಜು ಅವರ 2ನೇ ಹೆಂಡತಿ ಕಿರಣ ದೊಡ್ಡಬೊಮ್ಮನವರ್. ಮತ್ತಿಬ್ಬರು ರಾಜು ಬ್ಯುಸಿನೆಸ್ ಪಾರ್ಟ್ನರ್ ಶಶಿಕಾಂತ್ ಶಂಕರಗೌಡ ಹಾಗೂ ಧರ್ಮೇಂದ್ರ ಘಂಟಿ ಎಂಬುವರನ್ನು ಬಂಧಿಸಲಾಗಿದೆ.
ಮೃತ ರಾಜು 3 ಮದುವೆಯಾಗಿದ್ದ. ಮೊದಲ ಮದುವೆಯನ್ನು ಮುಚ್ಚಿಟ್ಟು ಕಿರಣ್ ಜೊತಗೆ ರಾಜು ವಿವಾಹ ಆಗಿದ್ದ. ಉಮಾ , ದೀಪಾ ಹಾಗೂ ಕಿರಣ ಎಂಬ ಮೂವರನ್ನ ಅಧಿಕೃತ ಮದುವೆ ಮಾಡಿಕೊಂಡು ಅವರಿಗೆ ಬೇರೆ ಬೇರೆ ಕಡೆ ಮನೆ ಮಾಡಿ ಇಟ್ಟಿದ್ದ. ಮೊದಲನೆಯ ಹೆಂಡತಿ ಬೆಂಗಳೂರುನಲ್ಲಿದ್ರೆ, ಎರಡನೇ ಹೆಂಡತಿ ಟಿಳಕವಾಡಿ ನಗರದಲ್ಲಿದ್ದು, ಮೂರನೆಯ ಹೆಂಡತಿ ಬೆಳಗಾವಿಯ ಭವಾನಿ ನಗರದ ಸಂಸ್ಕೃತಿ ಫಾರ್ಮನಲ್ಲಿದ್ದರು ಇನ್ನು ಈತ ಮೂರನೆಯ ಹೆಂಡತಿ ದೀಪಾ ಜೊತೆಗೆ ಇರುತ್ತಿದ್ದ.
ಇನ್ನು ಮೂರು ವಿವಾಹದ ಕಾರಣಕ್ಕೆ ಗಂಡ, ಹೆಂಡತಿ ನಡುವೆ ಮನಸ್ತಾಪ ಇತ್ತು ಎನ್ನಲಾಗಿದೆ. ಮತ್ತೊಂದೆಡೆ ಲಾಭದಲ್ಲಿ ಪಾಲುದಾರರಿಗೆ ರಾಜು ಹಣ ನೀಡಿರಲಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ರಾಜು ಹಾಗೂ ಪಾಲುದಾರರ ನಡುವೆ ವೈಮನಸ್ಸು ಉಂಟಾಗಿತ್ತು.
ಮನಸ್ತಾಪದ ಕಾರಣಕ್ಕಾಗಿ ರಾಜು ಪತ್ನಿ ಕಿರಣ್ ಹಾಗೂ ಇಬ್ಬರ ಪಾರ್ಟ್ನರ್ ಸೇರಿಕೊಂಡು ರಾಜು ಹತ್ಯೆಗೆ ಸ್ಕೆಚ್ ಹಾಕಿದ್ದಾರೆ. ಮೂರು ಜನರು 10 ಲಕ್ಷ ರೂಪಾಯಿಗೆ ಸುಪಾರಿ ನೀಡಿ, ರಾಜು ಕೊಲೆ ಮಾಡಿಸಿದ್ಗಾರೆ. ಇನ್ನು 2ನೇ ಪತ್ನಿ ಕಿರಣ್ ರಾಜು ಅಂತ್ಯಕ್ರಿಯೆ ವೇಳೆ ಕಣ್ಣೀರಿಟ್ಟು ನಾಟಕವಾಡಿದ್ದಳು. ಇದೀಗ ಮೂವರನ್ನು ಅರೆಸ್ಟ್ ಮಾಡಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.