100 ಕ್ಕೂ ಹೆಚ್ಚು ಸ್ವಾಮಿಜಿಗಳು ಧರ್ಮವೀರ ಸಂಭಾಜಿ ಮಹಾರಾಜರ ಪ್ರತಿಮೆಗೆ ಗೌರವ ನಮನ ಸಲ್ಲಿಸುವುದರೊಂದಿಗೆ ನಗರದ ನ್ಯೂಕ್ಲಿಯಸ್ ಮಾಲ್ ಚಿತ್ರ ಮಂದಿರದಲ್ಲಿ ದಿ ಕಾಶ್ಮೀರ ಪೈಲ್ ಚಿತ್ರ ವೀಕ್ಷಣೆ ಮಾಡಿದರು

ಬೆಳಗಾವಿ 23 : ದಿನಾಂಕ 23.03.2022 ರಂದು ಬೆಳಗಾವಿ ಜಿಲ್ಲೆಯ ವಿವಿಧ ಮಠದ
ಎಲ್ಲ ಸ್ವಾಮಿಜಿಗಳು ದಿ ಕಾಶ್ಮಿರ ಪೈಲ್ಸ್ ಚಿತ್ರವನ್ನು ವಿಕ್ಷಣೆ ಮಾಡಿದರು. ಚಿತ್ರ
ವಿಕ್ಷಣೆಗೂ ಮೊದಲು ಎಲ್ಲ ಸ್ವಾಮಿಜಿಗಳು ಬೆಳಗಾವಿ ಉತ್ತರ ಮತಕ್ಷೇತ್ರದ
ಶಾಸಕ ಅನಿಲ ಬೆನೆಕೆ ಹಾಗೂ ಮರಾಠಾ ಸಮಾಜದ ಮುಖಂಡರುಗಳ ಜೊತೆಗೆ
ಸಂಭಾಜಿ ಮಹಾರಜರ ಬಲಿದಾನ ಮಾಸದ ನಿಮಿತ್ಯವಾಗಿ ನಗರದಲ್ಲಿನ
ಸಂಭಾಜಿ ವೃತ್ತದಲ್ಲಿರುವ ಧರ್ಮವೀರ ಸಂಬಾಜಿ ಮಹಾರಾಜ ಪ್ರತಿಮೆಗೆ
ಮಾಲಾರ್ಪಣೆ ಮಾಡಿ ಗೌರವ ನಮನಗಳನ್ನು ಸಲ್ಲಿಸಿದರು. ಅವರು
ಧರ್ಮವೀರ ಸಂಭಾಜಿ ಮಹಾರಾಜರ ಜೀವನ ಹಾಗೂ ಹಿಂದೂ ಧರ್ಮವನ್ನು
ಉಳಿಸಲು ಹೋರಾಡಿದ ಸಾಹಸಗಾಥೆಯ ಕುರಿತು ಮಾತನಾಡಿದರು.
ನಂತರದಲ್ಲಿ ಜಿಲ್ಲೆಯ 100 ಕ್ಕೂ ಹೆಚ್ಚು ಸ್ವಾಮಿಜಿಗಳು ಕಾಶ್ಮೀರ ಪಂಡಿತರ
ಮೇಲೆ ಆಗಿರುವ ಅನ್ಯಾಯ ಅಕ್ರಮಗಳ ಕುರಿತು ಚಿತ್ರಿಸಿರುವ ದಿ ಕಾಶ್ಮೀರ
ಪೈಲ್ ಚಿತ್ರವನ್ನು ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಕಿತ್ತೂರು ಕಲ್ಮಠದ
ರಾಜಯೋಗಿಂದ್ರ ಸ್ವಾಮೀಜಿ, ಗದುಗಿನ ಶಿವಾನಂದ ಮಠದ ಸದಾಶಿವಾನಂದ
ಸ್ವಾಮೀಜಿ, ಮುರಗೋಡ ದುರದುಂಡಿಶ್ವರ ಮಠದ ನೀಲಕಂಠ
ಮಹಾಸ್ವಾಮೀಜಿ, ಬೆಳಗಾವಿಯ ರುದ್ರಕೇಸರಿ ಸ್ವಾಮೀಜಿ, ಕಡೋಲಿಯ
ದುರದುಂಡಿಶ್ವರ ಮಠದ ಸ್ವಾಮೀಜಿ ಹಾಗೂ ಜಿಲ್ಲೆಯ ವಿವಿಧ ಮಠದ
ಸ್ವಾಮೀಜಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.