Belagavi News In Kannada | News Belgaum

ಕರ್ನಾಟಕ ರತ್ನ ಪುನೀತ್ ರಾಜಕುಮಾರ ಅಭಿಮಾನಿ ಬಳಗದಿಂದ ಚಿಕಿತ್ಸೆಗಾಗಿ ಧನ ಸಹಾಯ

ಹುಣಸಗಿ: ಸಮೀಪದ ಕಾಮನಟಗಿ ಕ್ಯಾಂಪ್ ಸರಕಾರಿ ಕಿರೀಯ ಪ್ರಾಥಮಿಕ ಶಾಲೆಯ ಮೂರನೇಯ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಹಣಮವ್ವ ತಂದಿ ಶಿವಣ್ಣ ಹೂವಿನಹಳ್ಳಿ ಕಳೆದ ತಿಂಗಳು ಮನೆಯಿಂದ ಶಾಲೆಗೆ ಹೋಗುವಾಗ ಆಕಸ್ಮಿಕವಾಗಿ ಕಾರು ಅಪಘಾತದಿಂದ ಕೋಮಾ ಸ್ಥಿತಿಯಲ್ಲಿ ಇರುವಳು.
ಈ ದಿನ ಹುಣಸಗಿ ಪಟ್ಟಣದ ಕರ್ನಾಟಕ ರತ್ನ ಪುನೀತ ರಾಜಕುಮಾರ ಅಭಿಮಾನಿ ಬಳಗ ಭೇಟಿ ನೀಡಿ ಬಾಲಕೀಯ ಯೋಗ ಕ್ಷೇಮ ವಿಚಾರಿಸಿ, ದಾನಿಗಳಿಂದ ಸಂಗ್ರಹಿಸಿದ 15020 ರೂಗಳನ್ನು ನೀಡಿದರು.
ನಂತರ ಪತ್ರಿಕೆಯೊಂದಿಗೆ ಮಲ್ಲಿಕಾರ್ಜುನ ಗುತ್ತೇದಾರ ಮಾತನಾಡಿ, ಇನ್ನು ಹೆಚ್ಚಿನ ದಾನಿಗಳು ಮತ್ತು ಸಂಘ ಸಂಸ್ಥೆಯವರು ಬಾಲಕಿಯ ವೈದ್ಯಕೀಯ ವೆಚ್ಚವನ್ನು ಭರಿಸಲು ಧನಸಹಾಯ ಮಾಡಲು ಮುಂದಾಗಬೇಕು. ಜನಪ್ರತಿನಿಧಿಗಳು ಮಾನವೀಯತೆ ದೃಷ್ಟಿಯಿಂದ ಹೆಚ್ಚಿನ ವೈದ್ಯಕೀಯ ಚಿಕಿತ್ಸೆ ಕೊಡಿಸುವಂತಾಗಿ ಬಾಲಕಿ ಬೇಗ ಗುಣಮುಖವಾಗಲಿ ಎಂದು ಹೇಳಿದರು.
ಅಭಿಮಾನಿ ಬಳಗದ ಸದಸ್ಯರಾದ ರಾಘವೇಂದ್ರ ಪತ್ತಾರ, ಅಮರೇಶ ಹಿರೇಮಠ, ಮಂಜುನಾಥ ಬಳಿ, ಬಸವರಾಜ ಬಳಿ ಸೇರಿದಂತೆ ಹೂವಿನಹಳ್ಳಿ ಕುಟುಂ¨ದ ಸದಸ್ಯರು ಇದ್ದರು.