Belagavi News In Kannada | News Belgaum

ಸಾಲದ ಸೌಲಭ್ಯ ಕಲ್ಪಿಸಿಕೊಡುವಂತೆ ರೈತರ ಒತ್ತಾಯ : ಕಚೇರಿ ಎದುರು ಪ್ರತಿಭಟನೆ

ಚಿಕ್ಕೋಡಿ: ನಿಪ್ಪಾಣಿ ತಾಲೂಕಿನ ಪಡಲಿಹಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರು ತಮಗೆ ಶೂನ್ಯ ಬಡ್ಡಿದರದಲ್ಲಿ ಸರಕಾರದಿಂದ ದೊರೆಯುವ ಸಾಲದ ಸೌಲಭ್ಯ ಕಲ್ಪಿಸಿಕೊಡುವಂತೆ ಒತ್ತಾಯಿಸಿ ಶುಕ್ರವಾರ ರೈತ ಸಂಘಟನೆ ವತಿಯಿಂದ ಇಲ್ಲಿನ ಸಹಕಾರಿ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪಡಲಿಹಾಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಸರಕಾರದಿಂದ ಸಾಲ ಮಂಜೂರಾಗಿದೆ. ಆದರೂ 2013 ರಿಂದ ಇಲ್ಲಿಯ ವರೆಗೆ ನಮಗೆ ಸಹಕಾರಿ ಸಂಘದಿಂದ ಸಾಲ ಕೊಡುತ್ತಿಲ್ಲ. ಈಗಾಗಲೇ ನಾವು ನಮ್ಮ ಜಮೀನಿನ ಉತಾರ ಮೇಲೆ ಬೋಜಾ ಎರಿಸಿಕೊಟ್ಟಿದ್ದೇವೆ. ಆದರೂ ಕೆಲವರು ಸಹಕಾರಿ ಸಂಘದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಇದರಿಂದ ರೈತರಾದ ನಾವು ಸರಕಾರದ ಸಾಲ ಸೌಲಭ್ಯದಿಂದ ವಂಚಿತವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಈ ಕುರಿತು ಹಲವಾರು ಬಾರಿ ಸಹಕಾರಿ ಸಂಘಗಳ ಉಪನಿಬಂಧಕರು ಮತ್ತು ಜಿಲ್ಲಾಧಿಕಾರಿಗಳಿಗೆ  ಮತ್ತು ಬಿಡಿಸಿಸಿ ಬ್ಯಾಂಕ್  ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನೆವಾಗಿಲ್ಲ ಎಂದು ಸರಕಾರದ ವಿರುದ್ಧ ಕಿಡಿ ಕಾರಿದರು.
ಈಗಾಗಲೇ ನಮ್ಮ ಸಹಕಾರಿ ಸಂಘ ಆಡಳೀತ ಮಂಡಳಿಯನ್ನು ರದ್ದು ಪಡಿಸಿ, ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಆಡಳಿತಾಧಿಕಾರಿಗಳು ಸಹ ರೈತರಿಗೆ ಸಾಲ ನೀಡದೇ ಸುಳ್ಳು ಹೇಳುವ ಮೂಲಕ ರೈತರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ರಾಜು ಪವಾರ, ಸಂಜಯ ಜಾಧವ, ಸಚೀನ ಪಾಟೀಲ, ಬಾಳಾಸಾಹೇಬ ಹಾದಿಕರ್, ಭಗವಾನ ಗಾಯಕವಾಡ, ಸರ್ಜೇರಾವ ಹೆಗಡೆ, ಪಾಂಡುರಂಗ ತೋಡಕರ, ಶಿವತೇಜ ವಾಡೇಕರ, ನಿಶಕಾಂತ ಪಾಟೀಲ, ಸಂಜಯ ಜೋಮಾ ಇತರರು ಇದ್ದರು./////