Belagavi News In Kannada | News Belgaum

ವಿಚ್ಛೇದನ ಅರ್ಜಿ ವಿಚಾರಣೆಗೆ ಬಂದಿದ್ದ ಪತ್ನಿಯನ್ನು ಮಾರಕಾಸ್ತ್ರಗಳಿಂದ ಕೊಲೆಗೈದ ಪತಿರಾಯ

ಬೆಳಗಾವಿ:  ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಹಾಡಹಗಲೇ  ಪತ್ನಿಯನ್ನು ಪತಿ ಬರ್ಬರವಾಗಿ  ಕೊಲೆಗೈದಿರುವ ಘಟನೆ ಅಶೋಕ ವೃತ್ತ ( ಕೋಟೆ ಕೆರೆ) ಬಳಿಯಲ್ಲಿ ಇಂದು ನಡೆದಿದೆ. ಆರೋಪಿಯನ್ನು ಪೊಲೀಸ್‌ ರು ವಶಕ್ಕೆ ಪಡೆದಿದ್ದಾರೆ.

ಹಿನಾ ಕವಸರ್(21) ಮೃತ ಮಹಿಳೆ,   ಬೈಲಹೊಂಗಲ ತಾಲೂಕಿನ ದೇವಲಾಪುರದ ಮಂಜೂರಾ ಹಿಲಾಯಿ ನದಾಫ್ (32)  ಬಂಧಿತ ಆರೋಪಿ . ಹಿನಾ ನಾಲ್ಕು ವರ್ಷಗಳ ಹಿಂದೆ ದೇವಲಾಪುರದ ಮಂಜೂರ್ ಹಿಲಾಯಿ ನದಾಫ್ ಜತೆ   ಮದುವೆಯಾಗಿದ್ದರು.  ಪತಿ, ಪತ್ನಿ ನಡುವೆ ಕೌಟುಂಬಿಕ ಕಲಹದಿಂದ ಹಿನಾ 8 ತಿಂಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿದ್ದರು.

ಇಂದು ಅರ್ಜಿ ವಿಚಾರಣೆಗೆ ನ್ಯಾಯಾಲಯಕ್ಕೆಇಬ್ಬರು ಆಗಮಿಸಿದರು.  ಮನೆಗೆ ತೆರಳುವ ಸಂದರ್ಭದಲ್ಲಿ  ದಂಪತಿಗಳ ನಡುವೆ ವಾಗ್ವಾದ ನಡೆದಿದೆ. ಕುಪಿಗೊಂಡ ಪತಿ, ಪತ್ನಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಹೊಟ್ಟೆ, ಕುತ್ತಿಗೆ ಭಾಗಕ್ಕೆ ಬಲವಾಗಿ ಚಾಕು ಇರಿದರಿಂದ ಪತ್ನಿ ತೀವ್ರ ರಕ್ತಸ್ರಾವಗೊಂಡು ಮೃತಪಟ್ಟಿದ್ದಾಳೆ.  ಶವವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದ್ದು,  ಸ್ಥಳಕ್ಕೆ ಡಿಸಿಪಿ ರವೀಂದ್ರ ಗಡಾದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಾಳಮಾರುತಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ./////