Belagavi News In Kannada | News Belgaum

ಡಿಸಿಸಿ ಬ್ಯಾಂಕ್‌ ನಿರ್ದೇಶಕರಾಗಿ ಸಂಜು ಅವಕ್ಕನವರ್ ಆಯ್ಕೆ

ಬೆಳಗಾವಿ: ಜಿಲ್ಲಾ ಡಿಸಿಸಿ ಬ್ಯಾಂಕ್‌ ನ ನಿರ್ದೇಶಕ ಸ್ಥಾನದ ಚುನಾವಣಾ  ಫಲಿತಾಂಶ ಹೊರಬಿದಿದ್ದು,  ಅಥಣಿ ತಾಲೂಕು ಶೇಗುಣಶಿತ ಸಂಜು ಅಶೋಕ ಅವಕ್ಕನವರ್ ಆಯ್ಕೆಯಾಗಿದ್ದಾರೆ.

ದಿ. ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ  ಆಡಳಿತ ಮಂಡಲಿಯಲ್ಲಿ  ಅಶೋಕ ರಾಚಪ್ಪಾ ಅವಕ್ಕನವರ ಇವರ,  ನಿಧನದಿಂದ ತೆರವಾದ ನಿರ್ದೇಶಕ ಸ್ಥಾನಕ್ಕೆ ಇಂದು ಚುನವಾಣೆ ನಡೆಸಲಾಗಿತ್ತು, ಅವರ  ಪುತ್ರ ಸಂಜು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರವೀಂದ್ರ ಕರಲಿಂಗಣ್ಣರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕೃಷಿ ಹುಟ್ಟುವಳಿ ಮಾರಾಟ ಸಹಕಾರ ಸಂಘಗಳ ಮತಕ್ಷೇತ್ರದ ಸ್ಥಾನಕ್ಕಾಗಿ ಮೂವರು ಚುನಾವಣೆ ಅಖಾಡಕ್ಕೆ  ದುಮ್ಮುಕ್ಕಿದರು. ತೀವ್ರ ಪೈಪೋಟಿಯಲ್ಲಿ  ಸಂಜು ಗೆಲುವು ಸಾಧಿಸಿದ್ದಾರೆ. /////