Belagavi News In Kannada | News Belgaum

ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಲೇ ಕುಸಿದು ಮಹಿಳೆ ಸಾವು

ಬೆಂಗಳೂರು: ಜಿಮ್‍ನಲ್ಲಿ ವರ್ಕೌಟ್‍ ಮಾಡುತ್ತಿರುವಾಗ ಕುಸಿದು ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ನಡೆದಿದೆ.
ವಿನಯಾಕುಮಾರಿ(44) ಜಿಮ್‍ನಲ್ಲಿ ಕುಸಿದು ಸಾವನ್ನಪ್ಪಿದ ಮಹಿಳೆ. ವಿನಯಾಕುಮಾರಿಗೆ ಮದುವೆ ಆಗಿರಲಿಲ್ಲ. ಜಿಮ್, ಡ್ಯಾನ್ಸ್ ಮಾಡ್ಕೊಂಡಿದ್ದರು. ಅವರು ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಮಲ್ಲೇಶ್ ಪಾಳ್ಯದಲ್ಲಿರುವ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿದ್ದರು. ಈ ವೇಳೆ ಕುಸಿದು ಬಿದ್ದಿದ್ದಾರೆ.
ತಕ್ಷಣ ಅಲ್ಲಿದ್ದ ಸ್ಥಳೀಯರು ವಿನಯಾಕುಮಾರಿ ಅವರನ್ನು ಆಸ್ಪತ್ರೆ ಸಾಗಿಸಿದ್ದಾರೆ. ಆದರೆ ಅವರು ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧಿಸಿ ಬೈಯ್ಯಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ./////