ಮಗನ ಭವಿಷ್ಯ ಚೆನ್ನಾಗಿಲ್ಲವೆಂದು ಜಲಾಶಯಕ್ಕೆ ಎಸೆದ ಕ್ರೂರತಾಯಿ ಪರಾರಿ

ತಮಿಳುನಾಡು : ರಾಶಿ ಭವಿಷ್ಯ ಸರಿ ಇಲ್ಲ ಎಂಬ ಕಾರಣಕ್ಕೆ ತಾಯಿಯೇ ತನ್ನ ಮಗುವನ್ನ ಜಲಾಶಯಕ್ಕೆ ಎಸೆದ ಘಟನೆ ನಡೆದಿದೆ.
ತಮಿಳುನಾಡಿನ ದಿಂಡಿಗಲ್ ನಲ್ಲಿ ನಡೆದ ಘಟನೆ ಇದು ಪಾಲಾರು ಜಲಾಶಯಕ್ಕೆ ಎಸೆದು ಹತ್ಯೆ ನಡೆಸಲಾಗಿದೆ. ಇನ್ನು ಲತಾ ಮತ್ತು ಮಹೇಶ್ವರನ್ ಅವರಿಗೆ ನಾಲ್ಕು ತಿಂಗಳ ಹಿಂದೆ ಗಂಡು ಮಗು ಹುಟ್ಟಿದ್ದು, ಅದಕ್ಕೆ ಗೋಕುಲ್ ಎಂದು ಹೆಸರಿಟ್ಟಿದ್ದರು. ನೆನ್ನೆ ಪತಿ ಮಹೇಶ್ವರನ್ ಕೆಲಸಕ್ಕೆ ಹೋಗಿದ್ದಾಗ ಪತ್ನಿ ಲತಾ ತನ್ನ ನಾಲ್ಕು ತಿಂಗಳ ಮಗ ಗೋಕುಲ್ ನನ್ನ ಎಸೆದು ಪರಾರಿಯಾಗಿದ್ದಳು.
ನಂತರ ವಿಚಾರ ತಿಳಿದ ಪಳನಿ ಪೊಲೀಸರು ಆರೋಪಿತೆ ತಾಯಿಯನ್ನ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಮಗನ ರಾಶಿ ಭವಿಷ್ಯ ,ಗ್ರಹಗತಿಗಳು ಸರಿಯಿಲ್ಲದ ಕಾರಣ ಮಗುವನ್ನ ಕೊಂದಿರೋದಾಗಿ ಹೇಳಿದ್ದಾನೆ./////