ಡ್ಯಾನ್ಸ್ ಮಾಸ್ಟರ್ಗೆ ಕಾರು ಗಿಫ್ಟ್ ಕೊಟ್ಟ ನಟ ಸುದೀಪ್

ಬೆಂಗಳೂರು: ನಟ ಸುದೀಪ್ ಡ್ಯಾನ್ಸ್ ನಿರ್ದೇಶಕರಿಗೂ ದುಬಾರಿ ಕಾರನ್ನು ಗಿಫ್ಟ್ ಕೊಡುವ ಮೂಲಕ ತಮ್ಮ ಫ್ರೆಂಡ್ಶಿಪ್ಗೆ ಕೊಡುವ ಮಹತ್ವವನ್ನು ತೋರಿಸಿದ್ದಾರೆ.
ರಿಲೀಸ್ಗೆ ರೆಡಿ ಇರುವ ‘ವಿಕ್ರಾಂತ್ ರೋಣ’ ಸಿನಿಮಾದ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ಗೆ ಸುದೀಪ್ ಮಹಿಂದ್ರಾ ಥಾರ್ ಕಾರನ್ನು ಗಿಫ್ಟ್ ಕೊಟ್ಟಿದ್ದಾರೆ.
ಟ್ವಟ್ಟರ್ನಲ್ಲಿ ಜಾನಿ, ಕಿಚ್ಚ ಸುದೀಪ್, ನಿಮ್ಮ ಉಡುಗೊರೆಗಾಗಿ ಧನ್ಯವಾದಗಳು. ನೀವು ನನ್ನನ್ನು ನೋಡಿಕೊಳ್ಳುವ ರೀತಿ ನಿಜಕ್ಕೂ ಸಂತೋಷವಾಗುತ್ತೆ. ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆ. ನನ್ನ ಜೀವನದಲ್ಲಿ ನೀವು ಇರುವುದಕ್ಕೆ ಖುಷಿಯಾಗಿದೆ ಎಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಈ ಪೋಸ್ಟ್ ನೋಡಿದ ಅಭಿಮಾನಿಗಳು ಸುದೀಪ್ ಅವರನ್ನು ಹಾಡಿ ಹೊಗಳಿದ್ದಾರೆ. ಜಾನಿ ಅವರು ತಮಿಳು, ತೆಲುಗು ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನೃತ್ಯ ನಿರ್ದೇಶನ ಮಾಡಿದ್ದು, ಸಿನಿರಂಗದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ಇವರಿಗೆ ಕನ್ನಡ ಸಿನಿಮಾಗಳಲ್ಲಿಯೂ ಒಳ್ಳೆಯ ನಂಟಿದೆ./////