Belagavi News In Kannada | News Belgaum

ಉತ್ತಮರ ಸಂಗದಿಂದ ಜೀವನ ಪಾವನ: ಶಶಿಕಾಂತ ನಾಯಿಕ

 

ಬೆಳಗಾವಿ 27: ವಚನೋತ್ಸವದಂತಹ ಸತ್ಸಂಗದಿಂದ ಉತ್ತಮರ ಸಂಗವಾಗಿ ಜೀವನ ಪಾವನಗೊಳಿಸಲು ಸಾಧ್ಯವಿದೆ ಎಂದು ಮಾಜಿ ಸಚಿವ ಶಶಿಕಾಂತ ನಾಯಿಕ ಹೇಳಿದರು.
ರವಿವಾರ ಆಂಜನೇಯ ನಗರ ಎಸ್‍ಎಂ ಪಾಟೀಲ ಅವರ ನಿವಾಸದಲ್ಲಿ ನಡೆದ ವಚನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿಸ್ವಾರ್ಥದಿಂದ ಮಾಡುವ ಸೇವೆ ಅಗತ್ಯ ಕೆಟ್ಟದ್ದನ್ನು ಬಿಟ್ಟು ಒಳ್ಳೆಯದನ್ನು ಮಾಡುವದಕ್ಕೆ ಸತ್ಸಂಗ ಕಾರಣ ಎಂದು ಅವರು ವಿವರಿಸಿದರು. ಅಭಿಲಾಷ ಭಕ್ತಿ ಗೀತೆ ಹಾಡಿದರು.
ಸುರೇಂದ್ರ ಗುರುಸ್ವಾಮಿ ಸಿದ್ದಪ್ಪ ಪೂಜಾರಿ, ಬಸವರಾಜ ಕಮ್ಮಾರ, ಎಲ್‍ವ್ಹಿ ಪಾಟೀಲ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಂಕರ ರಾಮದುರ್ಗ, ರೋಹಿತ ಲಾತೂರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಎಸ್‍ಎಂ ಪಾಟೀಲ ಸ್ವಾಗತಿಸಿದರು. ಮಲ್ಲಿಕಾರ್ಜುನ ಶಿರಗುಪ್ಪಿ ಶೆಟ್ಟರ ಪ್ರ್ರಾಸ್ತಾವಿಕವಾಗಿ ಮಾತನಾಡಿದರು. ಗೋಪಾಲ ಖಟಾವಕರ ನಿರೂಪಿಸಿ ವಂದಿಸಿದರು.