Belagavi News In Kannada | News Belgaum

ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ತ್ರಿಪುರಾದ ಗೋಮತಿ ಜಿಲ್ಲೆಯ ಮಹಾರಾಣಿಯಲ್ಲಿ ನಡೆದಿದೆ.

ಅಗರ್ತಲಾ: ಮಲಗಿದ್ದ ಮಗಳನ್ನು ತಂದೆಯೊಬ್ಬರು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ತ್ರಿಪುರಾದ ಗೋಮತಿ ಜಿಲ್ಲೆಯ ಮಹಾರಾಣಿಯಲ್ಲಿ ನಡೆದಿದೆ.

ಶಿವ ಚೌಹಾಣ್(32) ಬಂಧಿತ ಆರೋಪಿ ಹಾಗೂ ಸ್ಮೃತಿ ಕುಮಾರಿ ಚೌಹಾಣ್ ಮೃತ ದುರ್ದೈವಿ. ಇಟ್ಟಿಗೆ ಗೂಡು ಕಾರ್ಮಿಕರಾದ ಶಿವ ಚೌಹಾಣ್ ಅವರು ತಮ್ಮ ಪತ್ನಿ ಮತ್ತು ಮೂವರು ಹೆಣ್ಣು ಮಕ್ಕಳೊಂದಿಗೆ ಇಟ್ಟಿಗೆ ಗೂಡು ಸಂಕೀರ್ಣದ ಶೆಡ್‍ನಲ್ಲಿ ವಾಸಿಸುತ್ತಿದ್ದರು.

ಬಿಹಾರ ಮೂಲದ ಶಿವ ಚೌಹಾಣ್ ಸುಮಾರು ಮೂರು ತಿಂಗಳ ಹಿಂದೆ ತ್ರಿಪುರಾಗೆ ಬಂದಿದ್ದರು. ಸ್ಮೃತಿ, ಶಿವ ಚೌಹಾಣ್‍ನ ಕಿರಿಯ ಮಗಳಾಗಿದ್ದಳು. ಭಾನುವಾರ ಬೆಳಗ್ಗೆ ನಿದ್ದೆಯಲ್ಲಿದ್ದ ಮೂರು ವರ್ಷದ ಮಗಳನ್ನು ಅಂಗಳಕ್ಕೆ ಕರೆದೊಯ್ದು ಕೊಡಲಿಯಿಂದ ಹತ್ಯೆ ಮಾಡಿದ್ದಾನೆ.

ಈ ಬಗ್ಗೆ ಇಟ್ಟಿಗೆ ಭಟ್ಟಿಯ ವ್ಯವಸ್ಥಾಪಕ ನಿರ್ಮಲ್ ಚಕ್ರವರ್ತಿ ರಾಧಾಕಿಶೋರಪುರ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಶಿವ ಚೌಹಾಣ್ ಅವರನ್ನು ಬಂಧಿಸಿದ್ದಾರೆ.

 

ಕೊಲೆಯ ಹಿಂದಿನ ಕಾರಣ ತಿಳಿಯಲು ತನಿಖೆ ಮಾಡಲಾಗುತ್ತಿದೆ ಎಂದು ರಾಧಾಕಿಶೋರಪುರ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿ ಬಬನ್ ದಾಸ್ ಹೇಳಿದ್ದಾರೆ.