Belagavi News In Kannada | News Belgaum

ಕಾಂಗ್ರೆಸ್ ಹಸಿದವರ ಪರವಾಗಿರುತ್ತ

ಬೆಂಗಳೂರು: ಪಂಚರಾಜ್ಯ ಚುನಾವಣಾ ಫಲಿತಾಂಶ ರಾಜ್ಯದ ಮೇಲೆ ಪ್ರಭಾವ ಬೀರಲ್ಲ. ಕಾಂಗ್ರೆಸ್ ಹಸಿದವರ ಪರವಾಗಿರುತ್ತೆ. ಬಿಜೆಪಿ ಸದಾ ಗೊಂದಲ ಮೂಡಿಸುವುದರಲ್ಲಿ ಇರುತ್ತೆ ಎಂದು ರಾಜ್ಯ ಕಾಂಗ್ರೆಸ್ ನೂತನ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಎಂ.ಬಿ.ಪಾಟೀಲ್ ಹೇಳಿದರು.

ಅರಮನೆ ಮೈದಾನದಲ್ಲಿ ಎಂ.ಬಿ.ಪಾಟೀಲ್ ಅವರು ಮಾಧ್ಯಮದೊಂದಿಗೆ ಮಾತನಾಡಿದ್ದು, ಸೋನಿಯ ಗಾಂಧಿ ಅವರು ನನಗೆ ಪ್ರಚಾರ ಸಮಿತಿಯ ಜವಬ್ದಾರಿವಹಿಸಿದ್ದಾರೆ. ಚುನಾವಣಾ ವರ್ಷದಲ್ಲಿ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಸಾಕಷ್ಟು ಜವಬ್ದಾರಿಗಳಿರುತ್ತವೆ. ಇಂದು ಪದಗ್ರಹಣ ಕಾರ್ಯಕ್ರಮವಿದೆ. ಇದು ಮುಗಿದ ನಂತರ ಮುಂದಿನ 15 ದಿನದಲ್ಲಿ ಎಲ್ಲ ನಾಯಕರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೇನೆ. ಆನಂತರ ಪ್ಲಾನ್ ಆಫ್ ಆಕ್ಷನ್ ಸಿದ್ದಪಡಿಸುತ್ತೇನೆ ಎಂದು ವಿವರಿಸಿದರು.

ಪ್ರಚಾರ ಸಮಿತಿ ಅಧ್ಯಕ್ಷನಾಗಿ ಒನ್‍ಲೈನ್ ಅಜೆಂಡ ಮುಂದೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ಎಂದ ಅವರು, ರಾಜ್ಯ ಕಾಂಗ್ರೆಸ್‍ನಲ್ಲಿ ಯಾವುದೇ ಪವರ್ ಪಾಯಿಂಟ್ ಇಲ್ಲ. ಪ್ರಚಾರ ಸಮಿತಿ ಮುಖ್ಯಸ್ಥ ಸ್ಥಾನವೂ ಪವರ್ ಪಾಯಿಂಟ್ ಅಲ್ಲಾ ಎಂದು ಹೇಳಿದರು.

ಸಿದ್ದರಾಮಯ್ಯ ಅವರೂ ಪವರ್ ಪಾಯಿಂಟ್ ಅಲ್ಲಾ, ಡಿ.ಕೆ.ಶಿವಕುಮಾರ್ ಪವರ್ ಪಾಯಿಂಟ್ ಅಲ್ಲಾ. ನಾವೆಲ್ಲರೂ ಒಟ್ಟಾಗಿ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡುವವರು ಎಂದರು./////