Belagavi News In Kannada | News Belgaum

ಬೆಂಗಳೂರು -ಪುಣಾ ಮತ್ತೊಂದು NH4 ; ಬೃಹತ್ ಯೋಜನೆಗೆ ಕೇಂದ್ರ ಸಜ್ಜು

ಬೆಂಗಳೂರು:  ರಾಜ್ಯದಿಂದ ಪುಣಾಗೆ ಸಂಚರಿಸಲು ಈಗಾಗಲೇ ಒಂದು ರಾಷ್ಟ್ರೀಯ ಹೆದ್ದಾರಿ ಇವುವಾಗಲೇ ರಾಜ್ಯದ ಜನತೆಗೆ ಸಿಹಿ ಸುದ್ದಿ ನೀಡಿದೆ. ಬೆಂಗಳೂರು – ಪುಣಾ ರಾಷ್ಟ್ರೀಯ ಹೆದ್ದಾರಿ ಎನ್ಎಚ್4ಕ್ಕೆ ಪರ್ಯಾಯವಾಗಿ ಮತ್ತೊಂದು ಹೆದ್ದಾರಿ ನಿರ್ಮಾಣ ಮಾಡಲು ಯೋಜನೆ ಸಜ್ಜಾಗಿದೆ.

ಪ್ರವಾಹದಿಂದಾಗಿ ನಿರಂತರ ಆಗುತ್ತಿರುವ ಸಮಸ್ಯೆ ತಪ್ಪಿಸಲು ಮತ್ತು ಸುಮಾರು 76 ಕಿಮೀ ಅಂತರ ಕಡಿಮೆ ಮಾಡಲು ಈ ಯೋಜನೆ ಸಹಕಾರಿಯಾಗಲಿದೆ.  ಕೇಂದ್ರ ಸರಕಾರದ ಈ ಯೋಜನೆ 40 ಸಾವಿರ ಕೋಟಿ ರೂಪಾಯಿ ವೆಚ್ಚದ್ದಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಭಾನುವಾರ ಸಾಂಗ್ಲಿಯಲ್ಲಿ ತಿಳಿಸಿದ್ದಾರೆ.

ಈ ಹೆದ್ದಾರಿ ಪ್ರಸ್ತುತ ಇರುವ ಹೆದ್ದಾರಿಯ ಮಾರ್ಗದಲ್ಲಿ ಸಾಗುವುದಿಲ್ಲ. ಇದು ಹೊಸ ಮಾರ್ಗವನ್ನೇ ಹಾದು ಹೋಗಲಿದೆ. ಸಾತಾರಾ ಜಿಲ್ಲೆಯ ಖಾಂಡಲಾ, ಫಾಲ್ತಾನ್, ಖಟಾವೋ  ಪ್ರದೇಶಗಳಲ್ಲಿ ಸಾಗಿ, ಸಾಂಗ್ಲಿ ಜಿಲ್ಲೆಯ ಖಾನಾಪುರ, ತಸಗಾಂವ್, ಕಾವ್ತೆ ಮಹಾನ್ ಕಾಲ್ ಮಾರ್ಗವಾಗಿ ಹೋಗಲಿದೆ. ಕರ್ನಾಟಕದಲ್ಲಿ ಇದು ಬೆಳಗಾವಿ- ಬಾಗಲಕೋಟೆ – ಗದಗ- ಕೊಪ್ಪಳ -ಬಳ್ಳಾರಿ – ದಾವಣಗೆರೆ -ಚಿತ್ರದುರ್ಗ – ತುಮಕೂರು ಮಾರ್ಗವಾಗಿ ಸಾಗಲಿದೆ. ಹುಬ್ಬಳ್ಳಿ – ಧಾರವಾಡ, ಹಾವೇರಿ ಜಿಲ್ಲೆಗಳು ಈ ಮಾರ್ಗದಲ್ಲಿ ಸಿಗುವುದಿಲ್ಲ.ಪ್ರಸ್ತುತ ಪುಣೆ – ಬೆಂಗಳೂರು ಹೆದ್ದಾರಿ 775 ಕಿಮೀ ಇದ್ದು, ಹೊಸ ಮಾರ್ಗ 699 8.ಕಿಮೀ ಉದ್ದವಿರಲಿದೆ./////