ಗೋಕಾಕ ತಾಲೂಕಿನಲ್ಲಿ ರಿಯಲ್ ಪುಷ್ಪಾ..!? ಸಾಗವಾಣಿ ಕಟ್ಟಿಗೆ ಅಕ್ರಮ ಸಾಗಾಣಿಕೆ ಮಾಡುತ್ತಿರುವ ದರೋಡೆಕೊರರು..?

ಗೋಕಾಕ- ತಾಲೂಕಿನಲ್ಲಿ ಹೆರಳವಾಗಿ ಸಾಗವಾಣಿ ಕಟ್ಟಿಗೆಗಳು ಕಂಡು ಬರುತ್ತವೇ, ಸಾಗವಾಣಿ ಕಟ್ಟಿಗೆಗೆ ದೇಶ ವಿದೇಶದಲ್ಲಿ ಬೇಡಿಕೆ ಇದೆ, ಹುಳ ಹತ್ತದ, ಹಾಗೂ ಗಟ್ಟಿಮುಟ್ಟಾದ ಕಟ್ಟಿಗೆ ಅಂದ್ರೆ ಸಾಗವಾಣಿ ಕಟ್ಟಿಗೆಗಳು, ಅಕ್ರಮವಾಗಿ ಹಾಗೂ ವೇಗವಾಗಿ ಹಣ ಗಳಿಸಲು ಸಾಗವಾಣಿ ಮರಗಳನ್ನ ಕಡೆದು ಅರಣ್ಯ ಇಲಾಖೆ ಹಾಗೂ ಪೋಲಿಸರ ಕಣ್ಣು ತಪ್ಪಿಸಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದಾರೆ.
ನಮ್ಮ ಬೆಳಗಾವಿ ವರದಿ ಪತ್ರಿಕೆಗೆ ಅಕ್ರಮವಾಗಿ ಸಾಗವಾಣಿ ಹಾಗೂ ಶ್ರೀಗಂಧದ ಕಟ್ಟಿಗೆ ಸಾಗಿಸುತ್ತಿರುವವರ ಬಗ್ಗೆ ಮಾಹಿತಿ ಬಂದಿತ್ತು, ಮಾಹಿತಿಯ ಆಧಾರದ ಮೇಲೆ ಚಿತ್ರಿಕರಣ ನಡೆಸಲು ನಮ್ಮ ತಂಡದ ರಿಪೋರ್ಟರ್ ಹಾಗೂ ಕ್ಯಾಮರಾಮ್ಯಾನ್ ಹೋದಾಗ ನಮ್ಮ ಗಾಡಿಯ ವಿಡಿಯೋ ಯಾಕ ಮಾಡಾತಿಪಾ ಎಂದು ಅವಾಚ್ಯವಾಗಿ ಬೈದು, ಪತ್ರಕರ್ತರ ಮೇಲೆ ಹಲ್ಲೆ ಮಾಡಿ ಮೋಬೈಲ್ಗಳನ್ನ ಕಸಿದುಕೊಂಡು ಹೊಡಿದಿದ್ದಾರೆ, ಹತ್ತರಿಂದ ಹದಿನೈದು ಜನರ ಪುಂಡರ ತಂಡ ಪತ್ರಕರ್ತರನ್ನ ತಡೆದು ಕೊಲ್ತಿವಿ ಈ ವಿಷಯ ಬಾಯಿ ಬಿಟ್ಟರೇ, ಸುದ್ದಿ ಮಾಡಿದರೇ ನಿನ್ನ ಜೀವ ತೆಗೆಯುತ್ತೇವೆ ಎಂದು ಧಮ್ಕಿ ಹಾಕಿದ್ದಾರೆ.
ಈ ಮಾಹಿತಿ ಹೇಳಲು ಅರಣ್ಯ ಇಲಾಖೆಯವರಿಗೆ ಕರೆ ಮಾಡಿದಾಗ ನಮ್ಮ ಕರೆಯನ್ನ ಸ್ವೀಕರಿಸದೇ ಕರ್ತವ್ಯ ಲೋಪ ಎಸಗಿದ್ದಾರೆ. ಇಷ್ಟೇಲ್ಲಾ ರಾದ್ಧಾಂತ ಆದ ಮೇಲೆ ಅವರ ವಯುಕ್ತೀಕ ನಂಬರ್ಗೆ ಕಾಲ್ ಮಾಡಿದಾಗ ರಿಸಿವ್ ಮಾಡಿ ತನಿಖೆ ಮಾಡ್ತಿವಿ ಎನ್ನುವ ಭರವಸೆ ಮಾತ್ರ ಕೊಟ್ಟಿದ್ದಾರೆ, ಅವರು ಎಷ್ಟು ತನಿಖೆ ಮಾಡಿ ಕಳ್ಳರನ್ನ ಹಿಡಿತಾರೋ ಆ ದೇವರೇ ಬಲ್ಲ…
ಇನ್ನೂ ಈ ಘಟನೆಗೆ ಬಗ್ಗೆ ಸ್ಥಳಿಯ ಘಟಪ್ರಭಾ ಪೋಲಿಸ್ ಠಾಣೆಗೆ ದೂರನ್ನ ಕೊಟ್ಟಿದ್ದೆವೆ, ಪೋಲಿಸ್ ಇಲಾಖೆ ಪತ್ರಕರ್ತರ ಮೇಲೆ ಆದ ಈ ಹಲ್ಲೆಯ ಪ್ರಕರಣವನ್ನ ಯಾವ ರೀತಿಯಾಗಿ ನೋಡುತ್ತದೆ ಎಂದು ಕಾಲವೇ ಉತ್ತರಿಸಲಿದೆ.