Belagavi News In Kannada | News Belgaum

ಬೆಳಗಾವಿ ವರದಿ ದಿನಪತ್ರಿಕೆ ವರದಿ ಫಲಶೃತಿ – ಅಕ್ರಮವಾಗಿ ಸಾಗವಾಣಿ ಮರ ಜಪ್ತಿ ಮಾಡಿದ ಅರಣ್ಯ ಇಲಾಖೆ..!

ಘಟಪ್ರಭಾ- ನಿನ್ನೆ ಬೆಳಗಾವಿ ವರದಿ ದಿನಪತ್ರಿಕೆ ಮಾಡಿದ ವರದಿಗೆ ಎಚ್ಚೆತ್ತ ಗೋಕಾಕ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಅಕ್ರಮವಾಗಿ ಸಾಗಿಸಿದ್ದ ಸಾಗವಾಣಿ ಕಟ್ಟಿಗೆಗಳನ್ನ ಜಪ್ತಿ ಮಾಡಿದ್ದಾರೆ, ಹಾಗೂ ಬೆಳಗಾವಿ ವರದಿ ದಿನಪತ್ರಿಕೆ ವರದಿಗಾರರು ತೋರಿಸದ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಧ್ಯ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ. ಹಾಗೂ ಕಠಿಣ ಕ್ರಮ ಕೈಗೊಂಡು ತನಿಖೆ ಮಾಡ್ತೀವಿ ಎಂದು ಹೇಳಿದ್ದಾರೆ. ಕೇವಲ ಎರಡು ದಿನದಲ್ಲಿ ಪ್ರಕರಣ ಭೇಧಿಸಿ ಕ್ರಮ ಕೈಗೊಂಡ ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ವಲಯ ಅರಣ್ಯಾಧಿಕಾರಿ ಕೆ.ಎನ್ ವಣ್ಣುರ, DRFO ಮಾಧುರಿ, ಎಕೆ ರಾಜೇಶ್ವರಿಯವರ ಈ ಕಾರ್ಯಕ್ಕೆ ಎಲ್ಲಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.