Belagavi News In Kannada | News Belgaum

ಪ್ರಿಯಕರನ ಎದುರೇ ಯುವತಿ ಮೇಲೆ ಅತ್ಯಾಚಾರ

ತಮಿಳುನಾಡು: ಕಡಲೂರಿನ ಕಮ್ಮಿಯಂಪೆಟ್ಟೈ ಪ್ರದೇಶದಲ್ಲಿ ತಡರಾತ್ರಿ ಇಬ್ಬರು ಲವರ್ಸ್​​ ಮಾತನಾಡುತ್ತಾ ನಿಂತಿದ್ದ ವೇಳೆ ಅಲ್ಲಿಗೆ ಬಂದಿರುವ ಮೂವರು ದುಷ್ಕರ್ಮಿಗಳು, ತಮ್ಮ ಮೊಬೈಲ್​​ನಲ್ಲಿ ಅವರ ಫೋಟೋ ತೆಗೆದು ಬೆದರಿಕೆ ಹಾಕಿದ್ದಾರೆ.

ಆರೋಪಿಗಳಾದ ಕಿಶೋರ್(19), ಸತೀಶ್​(19) ಹಜಾಗೂ ಆರೀಫ್​(18)ನನ್ನು ಬಂಧನ ಮಾಡಲಾಗಿದ್ದು, ಮೊಬೈಲ್​ ಫೋನ್​ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಇದರ,  ಬೆನ್ನಲ್ಲೇ 21 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ರಾತ್ರಿ ಗಸ್ತಿನಲ್ಲಿದ್ದ ಪೊಲೀಸರ ಮುಂದೆ ಯುವತಿ ತನ್ನ ಮೇಲೆ ನಡೆದಿರುವ ದುಷ್ಕೃತ್ಯದ ಬಗ್ಗೆ ಹೇಳಿಕೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ. ಕಡಲೂರು ಹೆಡ್​​ಪೋಸ್ಟ್​ ಆಫೀಸ್​ ಬಳಿಯ ಬಸ್​ ನಿಲ್ದಾಣದಲ್ಲಿ ತನ್ನ ಸ್ನೇಹಿತನೊಂದಿಗೆ ಯುವತಿ ಮಾತನಾಡುತ್ತಾ ನಿಂತಿದ್ದಾಗ ಈ ಘಟನೆ ನಡೆದಿದೆ. ಮೂವರು ದುಷ್ಕರ್ಮಿಗಳ ಪೈಕಿ ಇಬ್ಬರು ಯುವಕನನ್ನು ಬಲವಾಗಿ ಹಿಡಿದುಕೊಂಡಿದ್ದು, ಮತ್ತೋರ್ವ ಅತ್ಯಾಚಾರವೆಸಗಿದ್ದ.

ಇದರ ಬೆನ್ನಲ್ಲೇ ಘಟನೆ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದು, ಅವರ ಬಳಿಯ ಮೊಬೈಲ್ ಫೋನ್​​ ಕಿತ್ತುಕೊಂಡು ಪರಾರಿಯಾಗಿದ್ದರು. ಬಳಿಕ ಯುವತಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ವೈದ್ಯಕೀಯ ಚಿಕಿತ್ಸೆಗೊಳಪಡಿಸಲಾಗಿದೆ.

ಪೊಲೀಸ್ ಮಹಾನಿರೀಕ್ಷಕ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಕಾಮುಕರ ವಿಚಾರಣೆ ಮುಂದುವರೆದಿದೆ./////