Belagavi News In Kannada | News Belgaum

ಉದ್ಯೋಗ ಸಿಗದಿದ್ದಕ್ಕೆ ಡೆತ್ ನೋಟ್ ಬರೆದಿಟ್ಟು ಯುವಕ ನೇಣಿಗೆ ಶರಣು

ಸಾಗರ: ಮನೆಯಲ್ಲಿ ಸಹೋದರರೆಲ್ಲ ಉತ್ತಮವಾದ ಉದ್ಯೋಗದಲ್ಲಿರುವಾಗ ತನೆಗ ಮಾತ್ರ ಕೆಲಸ ಸಿಕ್ಕಿಲ್ಲ ಎಂಬ ಮಾನಸಿಕ ವ್ಯಥೆಗೀಡಾಗಿದ್ದ ಯುವಕ ನೇಣಿಗೆ ಶರಣಾದ ಘಟನೆ ತಾಲೂಕಿನ ಮಾಸೂರು ಸಮೀಪದ ಮೆಳವರಿಗೆಯಲ್ಲಿ ನಡೆದಿದೆ.
ಮೆಳವರಿಗೆಯ ರಾಮಪ್ಪನವರ ಪುತ್ರ ರವಿ(30) ಮೃತ ಯುವಕ. ಮೆಳವರಿಗೆಯ ರಾಮಪ್ಪನವರ ಪುತ್ರ ರವಿ(30) ಮೃತ ಯುವಕ. ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಹಾಕಿಕೊಂಡು ಜೀವ ಕಳೆದುಕೊಂಡಿದ್ದಾರೆ.
ಪದವಿ ಮುಗಿಸಿಕೊಂಡಿದ್ದ ರವಿಗೆ ಸರಿಯಾದ ಉದ್ಯೋಗ ಸಿಗದೆ ಇದ್ದುದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಸಾವಿಗೂ ಮುನ್ನ ರವಿ ಡೆತ್ ನೋಟ್ ಬರೆದಿಟ್ಟಿದ್ದಾನೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ./////