Belagavi News In Kannada | News Belgaum

ಮೇ 18 ರಿಂದ ಅಮೆಜಾóನ್ ಸಂಭವ್ ಸಮ್ಮಿಟ್

 

ಹುಬ್ಬಳ್ಳಿ : ಅಮೆಜಾóನ್ ಇಂಡಿಯಾ ಇಂದು ತನ್ನ `ಅಮೆಜಾóನ್ ಸಂಭವ್’ನ ಮೂರನೇ ಆವೃತ್ತಿಯನ್ನು ಈ ವರ್ಷ ಮೇ 18 ಮತ್ತು 19 ರಂದು ಆಯೋಜಿಸಲಿದೆ ಎಂದು ಪ್ರಕಟಿಸಿದೆ. ಈ ವರ್ಚುಯಲ್ ಮೆಗಾ ಸಮ್ಮೇಳನ ನೀತಿ ನಿರೂಪಕರು, ಉದ್ಯಮದ ಖ್ಯಾತ ನಾಯಕರು, ಪರಿಹಾರ ಪೂರೈಕೆದಾರರು, ಸ್ಟಾರ್ಟಪ್‍ಗಳು ಮತ್ತು ಅಮೆಜಾóನ್ ಲೀಡರ್‍ಶಿಪ್‍ನ್ನು ಒಟ್ಟಿಗೆ ತರುತ್ತಿದ್ದು ಭಾರತದಾದ್ಯಂತ ಸ್ಥಳೀಯ ಅಂಗಡಿಗಳು ಮತ್ತು ಉದ್ಯಮಗಳಿಗೆ ಡಿಜಿಟೈಸೇಷನ್ ಮತ್ತು ಆರ್ಥಿಕ ಪ್ರಗತಿ ತರಲು ತಂತ್ರಜ್ಞಾನ ಅಳವಡಿಸಲು ಚರ್ಚೆಗಳನ್ನು ನಡೆಸಲಿದೆ.

ಈ ಸಮ್ಮೇಳನವು ಆಶಯ ಭಾಷಣಗಳು, ತಜ್ಞರ ಚರ್ಚೆಗಳು, ಮಾಸ್ಟರ್‍ಕ್ಲಾಸ್ ಹಾಗೂ ಕೈಗಾರಿಕೆಗಳಲ್ಲಿ ತಂತ್ರಜ್ಞಾನದ ಅಳವಡಿಕೆಯ ಪ್ರಾಮುಖ್ಯತೆ ಅಲ್ಲದೆ ಸಾಮಾಜಿಕ ಸಬಲೀಕರಣ ಮತ್ತು ಎಲ್ಲರನ್ನೂ ಒಳಗೊಳ್ಳುವ ಆರ್ಥಿಕ ಪ್ರಗತಿಯ ಸನ್ನದ್ಧತೆ, ಭಾರತಕ್ಕಾಗಿ ಆವಿಷ್ಕಾರ ಮತ್ತು ಡಿಜಿಟಲ್ ಮೂಲಸೌಕರ್ಯ ಸೃಷ್ಟಿ ಇತ್ಯಾದಿ ಒಳಗೊಂಡಿರುತ್ತವೆ. ಅಮೆಜಾóನ್ ಸಂಭವ್ 2022ಕ್ಕೆ ನೋಂದಣ ಈಗ ತೆರೆದಿವೆ.

ಅಮೆಜಾóನ್ ಸಂಭವ್‍ನ ಪ್ರಮುಖ ಅಂಶವೆಂದರೆ ಪ್ರತಿವರ್ಷ ಆತ್ಮ ನಿರ್ಭರ ಭಾರತ ನಿರ್ಮಿಸುವಲ್ಲಿ ಆಯಾ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿರುವ ಮತ್ತು ಕೊಡುಗೆ ನೀಡಿರುವ ಉದ್ಯಮಗಳು, ಸಂಶೋಧಕರು ಮತ್ತು ವ್ಯಕ್ತಿಗಳಿಗೆ `ಅಮೆಜಾóನ್ ಸಂಭವ್ ಅವಾಡ್ರ್ಸ್’ ನೀಡಿ ಪುರಸ್ಕರಿಸಲಾಗುತ್ತದೆ. ಕಳೆದ ವರ್ಷ ಸಂಭವ್ ಪ್ರಶಸ್ತಿಗಳನ್ನು ಮಹತ್ತರವಾದ ಹಾಗೂ ಸಂಚಲನಾತ್ಮಕ ಉದ್ಯಮದ ಐಡಿಯಾಗಳಿಗೆ ಮಾನ್ಯತೆ ನೀಡಲು 15 ವಿಭಿನ್ನ ವಿಭಾಗಗಳಿಗೆ ನೀಡಲಾಯಿತು.

ಅಮೆಜಾóನ್ ಇಂಡಿಯಾದ ಇಂಡಿಯಾ ಕನ್ಸೂಮರ್ ಬಿಸಿನೆಸ್‍ನ ಕಂಟ್ರಿ ಮ್ಯಾನೇಜರ್ ಮನೀಶ್ ತಿವಾರಿ, “ಸಣ್ಣ ಉದ್ಯಮಗಳ ಆವಿಷ್ಕಾರಕ್ಕೆ ಅದರಲ್ಲಿಯೂ ಮುಖ್ಯವಾಗಿ ಸಣ್ಣ ಸ್ಥಳೀಯ ಅಂಗಡಿಗಳು ಮತ್ತು ಕಿರಾಣ ಮಳಿಗೆಗಳನ್ನು ಡಿಜಿಟಲಿ ಸನ್ನದ್ಧರಾಗಿಸಲು ಬದ್ಧತೆ ಹೊಂದಿದ್ದೇವೆ. ನಾವು ಅಮೆಜಾóನ್ ಸಂಭವ್ 2022ರಲ್ಲಿ ನೀತಿ ನಿರೂಪಕರು, ಖ್ಯಾತ ಕಾರ್ಪೊರೇಟ್ ನಾಯಕರು, ಯಶಸ್ವಿ ಆಧುನಿಕ ಉದ್ಯಮಿಗಳು, ಯುವ ಉದಯೋನ್ಮುಖ ಉದ್ಯಮ ಮಾಲೀಕರು ಮತ್ತು ಅಮೆಜಾóನ್ ನಾಯಕರನ್ನು ಭಾರತದ 1 ಟ್ರಿಲಿಯನ್ ಡಿಜಿಟಲ್ ಅರ್ಥವ್ಯವಸ್ಥೆಯಾಗಿ ಭಾರತದ ಪ್ರಗತಿಯನ್ನು ಸಾಧ್ಯವಾಗಿಸಲು ಮಾತುಕತೆ ಹಾಗೂ ಐಡಿಯಾಗಳ ಚರ್ಚೆ ನಡೆಸಲು ಅವರನ್ನು ಒಟ್ಟಿಗೆ ತರಲು ಉತ್ಸುಕರಾಗಿದ್ದೇವೆ” ಎಂದರು.

ಅಮೆಜಾóನ್ ಸಂಭವ್ ಕುರಿತು ಮತ್ತಷ್ಟು
ಅಮೆಜಾóನ್ ಸಂಭವ್ 2020ರಲ್ಲಿ ಭಾರತದ ಪ್ರಗತಿಗೆ ಅತ್ಯಂತ ಪ್ರಸ್ತುತವಾಗಿರುವ ಕ್ಷೇತ್ರಗಳ ಕಾರ್ಪೊರೇಟ್ ನಾಯಕರು, ನೀತಿ ನಿರೂಪಕರು ಮತ್ತು ಅಮೆಜಾóನ್ ನಾಯಕರ ಆಶಯ ಭಾಷಣಗಳು, ತಜ್ಞರ ಚರ್ಚೆಗಳು ಮತ್ತು ಕಾರ್ಯಾಗಾರಗಳನ್ನು ಒಟ್ಟಿಗೆ ತರುವ ಮೂಲಕ ಪ್ರಾರಂಭವಾಯಿತು. ಉದ್ಘಾಟನಾ ಸಮ್ಮೇಳನದಲ್ಲಿ ಅಮೆಜಾóನ್ 10 ಮಿಲಿಯನ್ ಎಂಎಸ್‍ಎಂಇಗಳನ್ನು ಡಿಜಿಟೈಸ್ ಮಾಡುವ ಮೂಲಕ ಭಾರತದಿಂದ ಕ್ರೋಢೀಕೃತ ರಫ್ತು 10 ಬಿಲಿಯನ್ ಡಾಲರ್ ಹಾಗೂ 2 ಮಿಲಿಯನ್ ಉದ್ಯೋಗಗಳನ್ನು 2025ರ ವೇಳೆಗೆ ಸೃಷ್ಟಿಸುವ ಮೂಲಕ ಭಾರತದ ಪ್ರಗತಿಯನ್ನು ತರುವ ಪ್ರತಿಜ್ಞೆ ಮಾಡಿತ್ತು. ಕಂಪನಿಯು ಈಗಾಗಲೇ 2.5 ಮಿಲಿಯನ್ ಎಂಎಸ್‍ಎಂಇಗಳನ್ನು ಡಿಜಿಟೈಸ್ ಮಾಡಿದ್ದು 3 ಬಿಲಿಯನ್ ಡಾಲರ್ ರಫ್ತು ಸಾಧ್ಯವಾಗಿಸಿದೆ ಮತ್ತು ಭಾರತದಲ್ಲಿ ಒಂದು ಮಿಲಿಯನ್‍ಗೂ ಮೀರಿ ನೇರ ಹಾಗೂ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ.